ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಲು ಮಗಳು ಐಶ್ವರ್ಯಳೇ ಕಾರಣ?

Recommended Video

      DK Shivakumar : ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಲು ಮಗಳೇ ಕಾರಣ? | Oneindia Kannada

      ಬೆಂಗಳೂರು, ಸೆಪ್ಟೆಂಬರ್ 13: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಲು ಮಗಳು ಐಶ್ವರ್ಯಾಳೇ ಕಾರಣ.

      ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್​ ಅವರ ಮಗಳು ಐಶ್ವರ್ಯಾ ಅವರನ್ನು ಗುರುವಾರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಸತತ 7 ಗಂಟೆಗಳ ಕಾಲ ವಿಚಾರಣೆ ನಡೆಸಿದರು.

      ಅದಾದ ಬಳಿಕ ಐಶ್ವರ್ಯ ಇಡಿಯವರ ಬಳಿ ಏನು ಉತ್ತರ ನೀಡಿರಬಹುದು ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿದ್ದಕ್ಕೆ ಡಿಕೆ ಶಿವಕುಮಾರ್ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು ಎನ್ನುವುದು ತಿಳಿದುಬಂದಿದೆ.

       ಐಶ್ವರ್ಯಗೆ ಇಡಿ ಸಮನ್ಸ್ ಜಾರಿ ಮಾಡಿತ್ತು

      ಐಶ್ವರ್ಯಗೆ ಇಡಿ ಸಮನ್ಸ್ ಜಾರಿ ಮಾಡಿತ್ತು

      23 ವರ್ಷದ ಐಶ್ವರ್ಯ ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿರುವುದು ಹಾಗೂ ಅವರು ಕೋಟ್ಯಾಂತರ ರೂ. ವಹಿವಾಟು ನಡೆಸಿರುವ ಬಗ್ಗೆ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ ಅವರಿಗೆ ಮೂರು ದಿನಗಳ ಹಿಂದೆ ಸಮನ್ಸ್​ ಜಾರಿ ಮಾಡಿತ್ತು.

       ಡಿಕೆ ಶಿವಕುಮಾರ್‌ಗೆ ರಕ್ತದೊತ್ತಡದಲ್ಲಿ ಏರುಪೇರು

      ಡಿಕೆ ಶಿವಕುಮಾರ್‌ಗೆ ರಕ್ತದೊತ್ತಡದಲ್ಲಿ ಏರುಪೇರು

      ದೆಹಲಿಯ ಇಡಿ ಕಚೇರಿಯಲ್ಲಿ ವಿಚಾರಣೆಗೆ ಎದುರಿಸುತ್ತಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಇದ್ದಕ್ಕಿದ್ದಂತೆ ಇಂದು ಸಂಜೆ ವೇಳೆಗೆ ರಕ್ತದೊತ್ತಡದಲ್ಲಿ ಏರುಪೇರಾಗಿದೆ ಹಾಗಾಗಿ ಅವರನ್ನು ಕೂಡಲೇ ಆರ್‌ಎಂವಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಡಿ.ಕೆ.ಶಿವಕುಮಾರ್ ಅವರಿಗೆ ಅತಿಸಾರ ಪ್ರಾರಂಭವಾಗಿದೆ ಎಂದೂ ಹೇಳಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೂಡಲೇ ಅವರನ್ನು ಇಡಿ ಅಧಿಕಾರಿಗಳು ಪೊಲೀಸರ ಬಂದೋಬಸ್ತ್‌ನಲ್ಲಿ ದೆಹಲಿಯ ಆರ್‌ಎಂವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

       ಊಟಕ್ಕೂ ಅವಕಾಶ ನೀಡದೆ ಐಶ್ವರ್ಯಳ ವಿಚಾರಣೆ

      ಊಟಕ್ಕೂ ಅವಕಾಶ ನೀಡದೆ ಐಶ್ವರ್ಯಳ ವಿಚಾರಣೆ

      ಇಂದು ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದ ಐಶ್ವರ್ಯಾ ಅವರನ್ನು ಇಡಿ ಅಧಿಕಾರಿಗಳು ಮಧ್ಯಾಹ್ನ ಊಟಕ್ಕೂ ಬಿಡದೆ ನಿರಂತರ 7 ಗಂಟೆಗಳ ಕಾಲ ವಿಚಾರಣೆ ಒಳಪಡಿಸಿದ್ದು ಡಿಕೆ ಶಿವಕುಮಾರ್ ಹಾಗೂ ಸಹೋದರ ಡಿಕೆ ಸುರೇಶ್ ಅವರನ್ನು ಆತಂಕಗೊಳ್ಳುವಂತೆ ಮಾಡಿತ್ತು.

      ಇಡಿ ವಶಕ್ಕೆ ಪಡೆದಾಗಿನಿಂದಲೂ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಡಿಕೆ ಶಿವಕುಮಾರ್ ಅವರು, ಬಂಧನಕ್ಕೂ ಮುನ್ನ ಆರ್​ಎಂಎಲ್​ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಿಪಿ ಹಾಗೂ ಹೈ ಶುಗರ್​ನಿಂದ ಬಳಲುತ್ತಿರುವ ಅವರಿಗೆ ಪ್ರತಿನಿತ್ಯ ವೈದ್ಯಕೀಯ ತಪಾಸಣೆ ನಡೆಸಬೇಕು ಎಂದು ವಿಶೇಷ ನ್ಯಾಯಾಲಯ ಕೂಡ ಸೂಚನೆ ನೀಡಿತ್ತು.

       ಡಿಕೆಶಿ ಜಾಮೀನು ವಿಚಾರಣೆ

      ಡಿಕೆಶಿ ಜಾಮೀನು ವಿಚಾರಣೆ

      ನಾಳೆಗೆ ಅವರ ಕಸ್ಟಡಿ ಅವಧಿ ಮುಗಿಯಲಿದ್ದು, ನಾಳೆ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ನಾಳೆ ಅವರಿಗೆ ಜಾಮೀನು ದೊರೆಯುತ್ತದೆಯೋ ಅಥವಾ ಇನ್ನೂ ಕೆಲವು ದಿನ ಇಡಿ ಅಧಿಕಾರಿಗಳು ವಶಕ್ಕೆ ಮನವಿ ಮಾಡುತ್ತಾರೆಯೋ ನೋಡಬೇಕಿದೆ.

      ಮಗಳು ಇಡಿ ಕಚೇರಿಗೆ ಹಾಜರಾಗಿರುವ ಸುದ್ದಿ ಕೇಳುತ್ತಿದ್ದಂತೆ ಅವರಿಗೆ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಕುಟುಂಬ ವೈದ್ಯರು ರಂಗನಾಥ್​ ಚಿಕಿತ್ಸೆ ನೀಡಿದ್ದಾರೆ. ಡಿಕೆ ಶಿವಕುಮಾರ್​ ಆರೋಗ್ಯ ಮೊದಲೇ ಹದಗೆಟ್ಟಿದ್ದು, ಈ ಸುದ್ದಿ ತಿಳಿದು ಮಾನಸಿಕವಾಗಿ ಕೂಡ ಅವರು ಬಳಲಿದ್ದಾರೆ. ಈ ಹಿನ್ನೆಲೆ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+