AirLift: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಇಂದು 700 ಜನ

ಬೆಂಗಳೂರು, ಮೇ 7: ಕೊರೊನಾ ಲಾಕ್‌ಡೌನ್ ನಿಂದಾಗಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಿಶೇಷ ವಿಮಾನಗಳಲ್ಲಿ ಕರೆತರಲು ಭಾರತ ಸರ್ಕಾರ ಇಂದಿನಿಂದ ಕಾರ್ಯಾಚರಣೆ ಆರಂಭಿಸಿದೆ‌.

ಇಂದು ಮಧ್ಯರಾತ್ರಿ ಭಾರತೀಯರು ಸ್ವದೇಶಕ್ಕೆ ಆಗಮಿಸುವ ನಿರೀಕ್ಷೆ ಇರುವುದರಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ತಪಾಸಣೆ ಗೆ ಹಾಗೂ ಕ್ವಾರಂಟೈನ್ ಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ.

ಅಮೆರಿಕ, ಇಂಗ್ಲೆಂಡ್ ಸೇರಿದಂತೆ 13 ದೇಶಗಳಿಂದ ಭಾರತೀಯರು ಆಗಮಿಸಲಿದ್ದಾರೆ. ಇಂದು ಮಧ್ಯರಾತ್ರಿ ಸುಮಾರು 700 ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸುವ ಸಾಧ್ಯತೆ ಇದೆ. ಕೆಐಎಎಲ್ ನಲ್ಲಿ ಪ್ರಯಾಣಿಕರಿಗೆ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ.

Airlift: Today 700 Passengers Arriving At Bengaluru KIL Airport

ಕೆಐಎಎಲ್ ನಲ್ಲಿ ಕೊರೊನಾ ಶಂಕೆ ಕಂಡು ಬಂದ್ರೆ ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇನ್ನೂ ಉಳಿದ ಪ್ರಯಾಣಿಕರನ್ನು ನಗರದ ಕ್ವಾರೆಂಟೈನ್ ಸೆಂಟರ್ ಗಳಿಗೆ ರವಾನೆ ಮಡಲಾಗುತ್ತದೆ.

ಈಗಾಗಲೇ ಕ್ವಾರೆಂಟೈನ್ ಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ರಾಜ್ಯ ಸರ್ಕಾರ. ಹೋಟೆಲ್, ವಸತಿ ಶಾಲೆಗಳಲ್ಲಿ, ಕಲ್ಯಾಣ ಮಂಟಪ, ಖಾಸಗಿ/ಸರ್ಕಾರಿ ಆಸ್ಪತ್ರೆಗಳನ್ನು ಕ್ವಾರೆಂಟೈನ್ ಸೆಂಟರ್ ಗಳಾಗಿ ಮಾರ್ಪಾಡು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+