ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಬ್ಯಾಂಕಾಕ್, ಪ್ರಯಾಣದರ 3,999 ರೂ.

|
Google Oneindia Kannada News

ಬೆಂಗಳೂರು, ಜು. 01 : ಕಡಿಮೆ ದರದಲ್ಲಿ ವಿಮಾನಯಾನ ಸೇವೆ ನೀಡುವ ಏರ್ ಏಷ್ಯಾ ಬೆಂಗಳೂರು-ಬ್ಯಾಂಕಾಕ್ ನಡುವೆ ನೇರ ವಿಮಾನ ಸೇವೆಯನ್ನು ಆರಂಭಿಸಲಿದೆ. ಸೆಪ್ಟೆಂಬರ್ 1ರಿಂದ ಸೇವೆ ಆರಂಭವಾಗಲಿದ್ದು, ದರ 3,999 ರೂ. ಆಗಿದೆ.

ಕಡಿಮೆ ದರದ ವಿಮಾನ ಸೇವೆ ನೀಡುವ ಮೂಲಕ ದರ ಸಮರ ಆರಂಭಿಸಿರುವ ಏರ್ ಏಷ್ಯಾ ಬೆಂಗಳೂರು-ಬ್ಯಾಂಕಾಕ್ ನಡುವೆ ವಿಮಾನ ಹಾರಾಟವನ್ನು ಆರಂಭಿಸಲಿದೆ. ಸೆಪ್ಟೆಂಬರ್ 1ರಿಂದ ಹಾರಾಟ ನಡೆಸಲು ಟಿಕೆಟ್ ಬುಕ್ ಮಾಡುವ ಅವಕಾಶವನ್ನು ಈಗಾಗಲೇ ಆರಂಭಿಸಲಾಗಿದೆ.[ಟಿಕೆಟ್ ಬುಕ್ ಮಾಡಲು ವಿಳಾಸ]

airlines

ಅತಿ ಕಡಿಮೆ ದರದಲ್ಲಿ ವಿಮಾನ ಸೇವೆ ಒದಗಿಸುವುದು ನಮ್ಮ ಉದ್ದೇಶ ಎಂದು ಹೇಳಿರುವ ಏರ್‌ ಏಷ್ಯಾ, ಬೆಂಗಳೂರು-ಬ್ಯಾಂಕಾಕ್ ನಡುವಿನ ದರವನ್ನು 3,999 ರೂ. ಎಂದು ನಿಗದಿಪಡಿಸಿದೆ. ಸೆಪ್ಟೆಂಬರ್ 1ರಿಂದ ಈ ವಿಮಾನ ಸೇವೆ ಆರಂಭವಾಗಲಿದೆ. [ಇನ್ಮುಂದೆ ಚೆಕ್ ಇನ್ ಬ್ಯಾಗೇಜ್ ನಿಮ್ಮ ಕೈ ಕಚ್ಚಲ್ಲ]

ಏರ್ ಏಷ್ಯಾ 2014ರ ಜೂನ್‌ನಲ್ಲಿ ತನ್ನ ಮೊದಲ ಹಾರಾಟ ಆರಂಭಿಸಿತ್ತು. ಏರ್ ಏಷ್ಯಾ ಭಾರತದಲ್ಲಿ ಟಾಟಾ ಗ್ರೂಪ್ ಮತ್ತು ಟೆಲೆಸ್ಟ್ರಾ ಟ್ರೇಡ್‌ಪ್ಲೇಸ್‌ ಗಳೊಂದಿಗೆ ಸಹಭಾಗಿತ್ವ ಹೊಂದಿದೆ. ವಿಮಾನ ಸೇವೆ ಆರಂಭಿಸಿದಾಗ ಗೋವಾ ಮತ್ತು ಬೆಂಗಳೂರು ನಡುವೆ ಎರಡು ವಿಮಾನಗಳು ಸಂಚರಿಸುತ್ತಿದ್ದವು. ತೆರಿಗೆ ಸೇರಿ ಪ್ರತಿ ಟಿಕೆಟ್ ಗೆ 990 ರೂ. ಪ್ರಯಾಣದ ದರವಿತ್ತು.

English summary
AirAsia announced direct flights from Bengaluru to Bangkok starting from September 1. Fares beginning Rs 3,999 per way. Ticket can be booked till July 5 for travel during September 1 to August 31, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X