• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಲಿವೇಟೆಡ್ ಕಾರಿಡಾರ್‌ನ ಉದ್ದಕ್ಕೂ ಏರ್‌ ಪ್ಯೂರಿಫಾಯರ್ ಅಳವಡಿಕೆ

|

ಬೆಂಗಳೂರು, ಮೇ 29: ಚಾಲುಕ್ಯ ವೃತ್ತದಿಂದ ಹೆಬ್ಬಾಳದ ಎಸ್ಟೀಮ್ ಮಾಲ್‌ವರೆಗೆ ನಿರ್ಮಾಣವಾಗಲಿರುವ ಎಲಿವೇಟೆಡ್ ಕಾರಿಡಾರ್ ಬಳಿ ಓಪನ್ ಏರ್ ಪ್ಯೂರಿಫಾಯರ್ ಅಳವಡಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.

ಈ ಗಾಳಿ ಶುದ್ಧೀಕರಣ ಘಟಕವು ಇಂಗಾಲವನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ, ಗಾಳಿಯನ್ನೂ ಶುದ್ಧೀಕರಿಸುತ್ತದೆ. ರಾಜ್ಯ ಮಟ್ಟದ ಎನ್ವಿರಾನ್‌ಮೆಂಟಲ್ ಇಂಪ್ಯಾಕ್ಟ್ ಅಸೆಸ್‌ಮೆಂಟ್ ಅಥಾರಿಟಿಯು ಇದೇ ವರ್ಷದ ಮಾರ್ಚ್‌ನಲ್ಲಿ ಎನ್‌ಒಸಿಯನ್ನು ನೀಡಿದೆ.

ಸಾವಿರ ಕೋಟಿ ರೂ. ಕಾರಿಡಾರ್‌ಗೆ 3 ವರ್ಷದ ಆಯಸ್ಸೇ? ಸಾವಿರ ಕೋಟಿ ರೂ. ಕಾರಿಡಾರ್‌ಗೆ 3 ವರ್ಷದ ಆಯಸ್ಸೇ?

ಎಲಿವೇಟೆಡ್ ಕಾರಿಡಾರ್ 12 ಮೀಟರ್ ಎತ್ತರದಲ್ಲಿ ನಿರ್ಮಾಣವಾಗಲಿದೆ. ಅಷ್ಟು ಎತ್ತರದಲ್ಲಿ ಗಾಳಿ ಶುದ್ಧೀಕರಣ ಘಟಕ ನಿರ್ಮಾಣ ಮಾಡುವುದು ತುಂಬಾ ಅಗತ್ಯವಾಗಿದೆ. ಪೂರ್ವ ಪಶ್ಚಿಮ ಕಾರಿಡಾರ್‌ನ ಒಟ್ಟು 30 ಕಡೆಗಳಲ್ಲಿ ಈ ಏರ್‌ ಪ್ಯೂರಿಫಾಯರ್ ಅಳವಡಿಸಲು ಮುಂದಾಗಿದೆ.

ಕಳೆದ ಕೆಲವು ತಿಂಗಳ ಹಿಂದೆ ಪ್ರಾಯೋಗಿಕವಾಗಿ ಹಡ್ಸನ್ ವೃತ್ತದಲ್ಲಿ ಏರ್ ಪ್ಯೂರಿಫಾಯರ್‌ ಅಳವಡಿಸಲಾಗಿತ್ತು ಅದರಿಂದ ಉತ್ತಮ ಫಲಿತಾಂಶ ಬಂದಿದೆ.

'ಎಲಿವೇಟೆಡ್ ಕಾರಿಡಾರ್ ಬೇಡ'ಹೋರಾಟಗಾರರನ್ನು ಚರ್ಚೆಗೆ ಆಹ್ವಾನಿಸಿದ ಸಿಎಂ 'ಎಲಿವೇಟೆಡ್ ಕಾರಿಡಾರ್ ಬೇಡ'ಹೋರಾಟಗಾರರನ್ನು ಚರ್ಚೆಗೆ ಆಹ್ವಾನಿಸಿದ ಸಿಎಂ

ಇದು ಸಾಮಾನ್ಯ ಪ್ಯೂರಿಫಾಯರ್‌ಗಳಲ್ಲ, ಹೆಚ್ಚು ಅಡ್ವಾನ್ಸ್ಡ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ. 102 ಕಿ.ಮೀ ದೂರದ ಕಾರಿಡಾರ್‌ನಲ್ಲಿ ಇದನ್ನು ಅಳವಡಿಸಲು ಯೋಚಿಸಲಾಗಿದೆ.

ಎಲಿವೇಟೆಡ್ ಕಾರಿಡಾರ್ ಯೋಜನೆಯಿಂದಲೇ ಯಾವುದೂ ಪ್ರಯೋಜನವಿಲ್ಲ, ಈ ಮೊದಲೇ ಈ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಚೆನ್ನಾಗಿಲ್ಲ ಎಂದು ತಿಳಿಸಿದ್ದರೂ ಯಾಕೆ ಈ ಯೋಜನೆಗೆ ಮುಂದಾಗಿದ್ದಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

English summary
In its resettlement and rehabitation policy, KRDCL has stated that the proposed elevated corridor in the city will be installed with open air purifiers and corbon obsorbent machines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
loader
X