ಬೆಂಗಳೂರಿನ ಆರ್ ಟಿಒ ಕಚೇರಿಯಿಂದ ವಾಯುಮಾಲಿನ್ಯ ಜಾಗೃತಿ ಸಪ್ತಾಹ
ಬೆಂಗಳೂರು, ಮಾರ್ಚ್ 25: ಕರ್ನಾಟಕ ಸರ್ಕಾರ ಸಾರಿಗೆ ಇಲಾಖೆಯ ವತಿಯಿಂದ ದಿನಾಂಕ 24 ಮಾರ್ಚ್ 2022 ರಂದು ಪ್ರಾದೇಶಿಕ ಸಾರಿಗೆ ಕಚೇರಿ ಆದ ಬೆಂಗಳೂರಿನ ಕಸ್ತೂರಿ ನಗರದಲ್ಲಿ ಸಾರ್ವಜನಿಕರಿಗಾಗಿ ವಾಯುಮಾಲಿನ್ಯ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ಕೆ. ನೇಫಾನಂದ ವಾಯು ಮಾಲಿನ್ಯದ ಬಗ್ಗೆ ಹಾಗೂ ಅದರ ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಿದರು.

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ. ಶ್ರೀನಿವಾಸ ಪ್ರಸಾದ್ ಅವರು ಎಲ್ಲರಿಗೂ ವಾಯು ಮಾಲಿನ್ಯ ನಿಯಂತ್ರಣದ ಕರ್ತವ್ಯದ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಸುರೇಶ್ ಎ.ಬಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

Recommended Video
Siddaramaiah ನವರು ಸಿದ್ದರಾಮೇಶ್ವರ ಜಾತ್ರೆಯಲ್ಲಿ ಕುಣಿದು ಕುಪ್ಪಳಿಸಿದರು | Oneindia Kannada
ಡೊಳ್ಳು ಕುಣಿತ, ಬೀದಿ ನಾಟಕ ಮತ್ತು ಸಮೂಹ ಗಾಯನದ ಮೂಲಕ ವಾಯು ಮಾಲಿನ್ಯ ಜಾಗೃತಿಯನ್ನು ಮೂಡಿಸಿದರು. ಗೋಣಾಸ್ವಾಮಿ ಅವರು ಕಾರ್ಯಕ್ರಮ ನಿರೂಪಿಸಿದರು.












Click it and Unblock the Notifications