Darshan: ದರ್ಶನ್ ಕಲಾವಿದ ಅಲ್ಲ 'ಕೊಲೆ'ವಿದ: ಅಹೋರಾತ್ರ ದಿಢೀರ್ ಪ್ರತ್ಯಕ್ಷ

ಬೆಂಗಳೂರು, ಜೂನ್‌ 15: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ನ್ನು ಬಂಧಿಸಿ ಐದು ದಿನ ಕಳೆಯುತ್ತಿದ್ದು, ವಿಚಾರಣೆ ತೀವ್ರಗೊಂಡಿದೆ. ಈ ಮಧ್ಯ ದರ್ಶನ್‌ ವಿರುದ್ಧ ಅನೇಕ ಆರೋಪಗಳು ಕೇಳಿ ಬರುತ್ತಿದ್ದು, ಅಹೋರಾತ್ರ ನಟನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ವಿಡಿಯೋ ಮಾಡಿರುವ ಅಹೋರಾತ್ರ 'ಇವನು ಯಾವ ಕಲಾವಿದ ಅಲ್ಲ. ಕೊಲೆವಿಧ. ಅವನ ಮೇಲೆ ನಿಮಗೆ ಅಷ್ಟು ನಂಬಿಕೆ ಇದ್ದರೆ, ಅವನನ್ನು ಬ್ಯಾನ್‌ ಮಾಡಿ. ಬಳಿಕ ತಪ್ಪಿತಸ್ಥ ಅಲ್ಲ ಎಂದು ಹೊರಗಡೆ ಬಂದ ಮೇಲೆ. ಅವನನ್ನು ಮತ್ತೆ ಸೇರಿಸಿಕೊಂಡು ಎಗರಾಡಿ' ಎಂದು ಕಿಡಿಕಾರಿದ್ದಾರೆ.

Ahoratra Lashes Out At Actor Darshan In Renukaswamy Murder Case

'ಕ್ರೂರಿಗಳು, ಅವರನ್ನು ಯಾಕೆ ಕ್ರೂರಿಗಳು ಅಂತ ಕರೆಯುತ್ತೇನೆ ಅಂದರೆ, ಧೈರ್ಯವಾಗಿ ಹೋರಾಡುವುದಕ್ಕೆ ಯೋಗ್ಯತೆಯಿಲ್ಲದೆ, ಮನೆಯ ಹೆಣ್ಣು ಮಕ್ಕಳ ಬಗ್ಗೆ ಮಾತಾಡಿದ್ರು. ಅಭಿಮಾನಿಗಳನ್ನು ಛೂ ಬಿಟ್ಟರು. ಯಾವ ರೀತಿ ಅಭಿಮಾನಿಗಳನ್ನು ಬಳಸಿ ರೇಣುಕಾಸ್ವಾಮಿ ಹತ್ಯೆ ಆಯ್ತೋ? ಹಾಗೇ ಅಭಿಮಾನಿಗಳನ್ನು ಛೂ ಬಿಟ್ಟರು. ಹೆಣ್ಣು ನಿಂದನೆ ಮಾಡಿಸಿದರು.

ಅವರ ಬಗ್ಗೆ ಮಾತಾಡುವ ಸಂಪೂರ್ಣ ಅಧಿಕಾರ ಅಹೋರಾತ್ರನಿಗೆ ಇದೆ. ಯಾಕೆಂದರೆ, ನಾನು ಅವರ ಮನೆಯ ಹೆಣ್ಣು ಮಕ್ಕಳ ಬಗ್ಗೆ ಮಾತಾಡುತ್ತಿಲ್ಲ. ಇವತ್ತು ಅವರು ಜೈಲಿಗೆ ಹೋಗಿದ್ದಾರೆ. ಅವರ ಮನೆಯ ಹೆಣ್ಣು ಮಕ್ಕಳಿಗೆ ಏನಾದರೂ ತೊಂದರೆ ಆದರೆ, ಕರ್ನಾಟಕದ ಸ್ತ್ರೀ ರಕ್ಷಾವತಿಯಿಂದ ನಾನು ಕಾಪಾಡುತ್ತೇವೆ

ಇವನ ಹೆಸರೇ ಆಯಿಂಟ್‌ಮೆಂಟ್ ರಾಜ ಅಂದರೆ ದರ್ಶನ್‌. ಈ ದರ್ಶನ್ ಕಥೆ ಹೇಳುತ್ತೇನೆ. ಇವನ ಹೆಸರು ಆಯಿಂಟ್‌ಮೆಂಟ್ ರಾಜ ಅಂತ. ಯಾಕೆ ಆಯಿಂಟ್‌ಮೆಂಟ್ ರಾಜ ಅಂದರೆ, ಇವನು ಕುಡಿದ ಅಮಲಿನಲ್ಲಿ, ಮಾದಕ ದ್ರವ್ಯಗಳ ಅಮಲಿನಲ್ಲಿ ರಾತ್ರಿ ಹೊಡೆಯುವುದು, ಬೆಳಗ್ಗೆ ಅವನೇ ಆಯಿಂಟ್‌ಮೆಂಟ್ ಹಚ್ಚುವುದು ಅವನ ನಿತ್ಯ ವಾಡಿಕೆ. ಇವನಿಗೆ ಹೊಡೆಯುವ ರೋಗವಿದೆ.

Ahoratra Lashes Out At Actor Darshan In Renukaswamy Murder Case

ಮಹಾಭಾರತದಲ್ಲಿ ದುರ್ಯೋಧನನಿಗೆ ಇತ್ತು. ಅದೇ ದುರ್ಯೋಧನನ ಪಾತ್ರದಾರಿಯಾದ ಇವನು ಅದೇ ರೋಗವಾಸಿ. ಈ ಹಿಂದೆ ದರ್ಶನ್ ಪುಟ್ಟ ಬಾಲಕನಿಗೆ ಕೋಲು ಹಿಡಿದು ಕೀಟಲೆ ಕೊಡುವ ವಿಡಿಯೋ ವೈರಲ್ ಆಗಿತ್ತು. ಆಗಲೇ ಎಚ್ಚೆತ್ತುಕೊಂಡಿರಬೇಕಿತ್ತು. ಒಂದು ಚಿಕ್ಕ ವಿಡಿಯೋ ಇತ್ತು ಕೋಲು ಹಿಡ್ಕೊಂಡು ಟಾರ್ಚರ್ ಕೊಡುತ್ತಿದ್ದ. ಅದೊಂದೇ ವಿಡಿಯೋ ಸಾಕಾಗಿತ್ತು. ಕರ್ನಾಟಕದ ಲಾ ಅಂಡ್ ಅರ್ಡರ್‌ಗೆ. ಆ ವಿಡಿಯೋ ಇಟ್ಕೊಂಡು ಇವನನ್ನು ಒಳಗೆ ಹಾಕಿ, ಇವನ ಮಾನಸಿಕ ಸುಸ್ಥಿತಿಗೆ ಟೈನಿಂಗ್ ಕೊಟ್ಟು, ಇವನನ್ನು ಬಿಡಬೇಕಿತ್ತು ಎಂದಿದ್ದಾರೆ.

ಇನ್ನೊಂದು ಮನವಿ, ಆ ಟಾರ್ಚರ್ ಚೇಂಬರ್‌ನಲ್ಲಿ ಯಾರೆಲ್ಲ ಹಿಂಸೆ ಅನುಭವಿಸಿದ್ದಾರೋ ಅವರೆಲ್ಲ ಮುಂದೆ ಬನ್ನಿ. ಅಕಸ್ಮಾತ್ ಬದುಕುಳಿದಿದ್ದರೆ, ಬೆಳಗ್ಗೆ ಆಯಿಂಟ್‌ಮೆಂಟ್ ಹಚ್ಚಿ ಕಳಿಸಿರುತ್ತಾನಲ್ಲ. ಊಟಕ್ಕೆ ದುಡ್ಡು ಕೊಟ್ಟು ಕಳಿಸಿರುತ್ತಾನಲ್ಲ ಅವರೆಲ್ಲ ಮುಂದೆ ಬಂದು ಇವನ ಮೇಲೆ ಸಂತ್ರಸ್ತರಾಗಿ ಕಂಪ್ಲೈಂಟ್ ಮಾಡಿ, ಇವರ ಕ್ರೌರ್ಯವನ್ನು ಇಲ್ಲಿಗೆ ಅಂತ್ಯಗೊಳಿಸೋಣ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+