Get Updates
Get notified of breaking news, exclusive insights, and must-see stories!

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಉರುಳುತ್ತಾ? ಲೋಕಸಭೆ ಚುನಾವಣೆ ನಂತರ ಸರ್ಕಾರ ಚೇಂಜ್?

ಲೋಕಸಭೆ ಚುನಾವಣೆ 2024ರ ಫಲಿತಾಂಶ ಇನ್ನೇನು ಹೊರ ಬೀಳಲಿದೆ. ಇದೇ ಸಮಯಕ್ಕೆ, ಹೊಸ ಚರ್ಚೆ ಶುರುವಾಗಿದೆ. ಕಳೆದ ವರ್ಷ ಅಂದ್ರೆ 2023 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇರುತ್ತಾ? ಉರುಳುತ್ತಾ? ಎಂಬ ಕುತೂಹಲಕಾರಿ ಚರ್ಚೆ ಶುರುವಾಗಿದೆ. ಹೀಗಿದ್ದಾಗ ಈ ಪ್ರಶ್ನೆಗೆ ಉತ್ತರ ಕೂಡ ಬಹು ಸ್ಪಷ್ಟವಾಗುತ್ತಿದೆ.

ಕರ್ನಾಟಕದ ರಾಜಕೀಯ ವ್ಯವಸ್ಥೆ ರಾಷ್ಟ್ರೀಯ ಪಕ್ಷಗಳಿಗೆ ಸದಾ ಹೆಬ್ಬಾಗಿಲು ಎನ್ನಬಹುದು. ಯಾಕಂದ್ರೆ ಕರ್ನಾಟಕದ ನೆಲದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಹೋಲಿಕೆ ಮಾಡಿದರೆ ರಾಷ್ಟ್ರೀಯ ಪಕ್ಷಗಳೇ ಹಲವು ಬಾರಿ ಸರ್ಕಾರ ರಚನೆ ಮಾಡಿವೆ. ಹೀಗಿದ್ದಾಗ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಕೂಡ ಇದೇ ರೀತಿಯ ಚರ್ಚೆಗೆ ಕಾರಣವಾಗಿತ್ತು. ಆದರೆ ಕೊನೆಗೆ ವಿಧಾನಸಭೆಗೆ ಆಯ್ಕೆಯಾಗಿ ಬಂದ ಪಕ್ಷ ಕೂಡ ರಾಷ್ಟ್ರೀಯ ಪಕ್ಷವೇ ಆಗಿತ್ತು. ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನ ಪಡೆದು ಗೆದ್ದು ಬೀಗಿತ್ತು. ಹೀಗಿದ್ದಾಗ ನಾಳೆ ಹೊರಬೀಳುವ ಲೋಕಸಭೆ ಚುನಾವಣೆ 2024ರ ಫಲಿತಾಂಶ ಕರ್ನಾಟಕದಲ್ಲಿ ಹೊಸ ಸರ್ಕಾರ ತರಲಿದೆಯಾ? ಎಂಬ ಚರ್ಚೆ ಹುಟ್ಟು ಹಾಕಿದೆ.

After Lok Sabha Election Results 2024 Discussion Going On About Karnataka Congress Government

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ...

2023 ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಅಬ್ಬರದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಈ ಮೂಲಕ ಬಿಜೆಪಿ ಹೈಕಮಾಂಡ್ ನಾಯಕರ ಶ್ರಮ ಫಲ ನೀಡಿರಲಿಲ್ಲ. ಗ್ಯಾರಂಟಿ ಯೋಜನೆ ಮತ್ತು ಮತದಾರರಿಗೆ ಕಾಂಗ್ರೆಸ್ ನೀಡಿದ್ದ ಆಶ್ವಾಸನೆಗಳ ಆಧಾರದಲ್ಲಿ ಅಧಿಕಾರ ಸಿಕ್ಕಿತ್ತು. ಈ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ & ಡಿಸಿಎಂ ಡಿ.ಕೆ. ಶಿವಕುಮಾರ್‌ರ ನಡುವೆ ಪೈಪೋಟಿ ನಡೆದಿತ್ತು.

ಹಲವು ತಿಕ್ಕಾಟದ ನಂತರ ಕೊನೆಗೆ ಸಿದ್ದರಾಮಯ್ಯ 2ನೇ ಬಾರಿಗೆ ಸಿಎಂ ಆಗಿ ಆಯ್ಕೆ ಆಗಿದ್ದಾರೆ. ಹೀಗಿದ್ದಾಗ 2024ರ ಲೋಕಸಭೆ ಚುನಾವಣೆ ಫಲಿತಾಂಶ ಬಂದ ನಂತರ, ಕನ್ನಡ ನಾಡಿನಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರಲಿದೆ, ಎಂಬ ಚರ್ಚೆ ಮೂಡಿದೆ. ಹಾಗಾದರೆ, ಈ ಮಾತು ಸತ್ಯವಾ? ಈಗಿರುವ ಸರ್ಕಾರಕ್ಕೆ ಕಂಟಕ ಎದುರಾಗಿದೆಯಾ? ಮುಂದೆ ಓದಿ.

ಸರ್ಕಾರ ಬೀಳುವುದು ಡೌಟ್!

ಈಗಿನ ಲೆಕ್ಕಾಚಾರ ತಾಳೆಹಾಕಿ ನೋಡುವುದಾದರೆ ಕರ್ನಾಟಕದಲ್ಲಿ ಸರ್ಕಾರ ಬದಲಾವಣೆಯ ಮಾತು ಕಷ್ಟ ಎನ್ನಬಹುದು. ಯಾಕಂದ್ರೆ ಕಾಂಗ್ರೆಸ್ ಸರ್ಕಾರಕ್ಕೆ 130ಕ್ಕೂ ಹೆಚ್ಚು ಶಾಸಕರಿಂದ ಬೆಂಬಲ ಸಿಗುತ್ತಿದೆ. ಹೀಗಾಗಿ ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಮತ್ತೊಮ್ಮೆ ಕೇಂದ್ರ ಸರ್ಕಾರದ ಗದ್ದುಗೆ ಏರಿದರೂ ಬದಲಾವಣೆ ಅಸಾಧ್ಯ ಎಂಬ ಮಾತುಗಳು ಕೇಳಿಬಂದಿವೆ. ಈ ಲೆಕ್ಕಾಚಾರ ನೋಡಿ ಹೇಳುವುದಾದರೆ ಕಾಂಗ್ರೆಸ್ ಪಕ್ಷ ಮುಂದಿನ 4 ವರ್ಷ ಪೂರೈಸುವ ಎಲ್ಲಾ ಲಕ್ಷಣ ಕಾಣುತ್ತಿದೆ. ಆದರೆ ಮುಂದೆ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+