• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಏರೋ ಶೋ: ರಸ್ತೆ ದುರಸ್ತಿಗೆ ಜ.25ರವರೆಗೆ ಬಿಬಿಎಂಪಿ ಗಡುವು

|

ಬೆಂಗಳೂರು,ಜನವರಿ 20: ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಹಿನ್ನೆಲೆಯಲ್ಲಿ ಯಲಹಂಕದ ವಾಯುನೆಲೆಯ ಸುತ್ತಮುತ್ತಲಿನ ರಸ್ತೆಗಳ ದುರಸ್ತಿ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಜ.25ರೊಳಗೆ ಮುಗಿಸಬೇಕು ಎಂದು ಬಿಬಿಎಂಪಿ ಗಡುವು ನೀಡಿದೆ.

ಫೆ.3 ರಿಂದ 5ರವರೆಗೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ಯಲಹಂಕ ವಾಯುನೆಲೆಯ ಸುತ್ತಮುತ್ತಲಿನ ರಸ್ತೆಗಳ ದುರಸ್ತಿ ಹಾಗೂ ಅಭಿವೃದ್ಧಿ ಕುರಿತಂತೆ ಮನೋಜ್ ಜೈನ್ ಮಂಗಳವಾರ ಬಿಬಿಎಂಪಿ ಮುಖ್ಯರಸ್ತೆ ಹಾಗೂ ಯೋಜನಾ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಏರೋ ಇಂಡಿಯಾ-2021: ಯಲಹಂಕ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧಏರೋ ಇಂಡಿಯಾ-2021: ಯಲಹಂಕ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ

ಬಾಗಲೂರು ಮತ್ತು ಕೋಗಿಲು ಮುಖ್ಯರಸ್ತೆಗಳಲ್ಲಿ ಗುಂಡಿ ಭರ್ತಿ, ಮಳೆನೀರುಗಾಲುವೆ ಸ್ವಚ್ಛತೆ, ರಸ್ತೆ ಪಕ್ಕದ ಕಟ್ಟಡ ತ್ಯಾಜ್ಯ ತೆರವುಗೊಳಿಸಲು ಸೂಚಿಸಿದರು.

ಬಿಬಿಎಂಪಿ ಥಣಿಸಂದ್ರ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಒಟ್ಟು 9 ಕಿ.ಮೀ ವೈಟ್ ಟಾಪಿಂಗ್ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು. ಥಣಿಸಂದ್ರ ರಸ್ತೆಯಲ್ಲಿ ರಾಷ್ಟ್ರೋತ್ಥಾನ ಬಳಿ ಫ್ಲೈಓವರ್ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ ನೀಡಿದರು.

   ಬಿಎಂಟಿಸಿ ಬಸ್ ಅಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರು!! | Oneindia Kannada

   ಕೊರೊನಾ ಹಿನ್ನೆಲೆಯಲ್ಲಿ 13ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ವರ್ಚ್ಯುವಲ್ ಮೂಲಕ ಉಚಿತವಾಗಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ದಿನದ 24 ಗಂಟೆಯೂ ಎಲ್ಲಾ ಚಟುವಟಿಕೆಗಳನ್ನು ವೀಕ್ಷಿಸಬಹುದಾಗಿದೆ.

   English summary
   Aero Show, BBMP given dealine for road construction works with in January
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X