ಏರೋ ಇಂಡಿಯಾ: ಇಂದು, ನಾಳೆ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ
ಬೆಂಗಳೂರು, ಫೆಬ್ರವರಿ 23: ಯಲಹಂಕದ ವಾಯುನೆಲೆಯಲ್ಲಿ ಆರಂಭವಾಗಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲು ಫೆ.23 ಹಾಗೂ 24ರಂದು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ.
ಆಗಮಿಸಲು ಪಾಸ್ ಕಡ್ಡಾಯವಾಗಿರುತ್ತದೆ, ಜೊತೆಗೆ ಗುರುತಿನ ಚೀಟಿಯನ್ನು ಕೂಡ ತೆಗೆದುಕೊಂಡು ಹೋಗಬೇಕಿದೆ. ಐದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಪ್ರವೇಶವಿರಲಿದ್ದು, ಹೃದಯ ತೊಂದರೆ ಇತ್ಯಾದಿ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಹೋಗದಿರುವುದು ಒಳಿತು.
ವೀಕ್ಷಣೆಗೆ ತೆರಳುವವರು ಗೇಟ್-8,9(600ರ ಪಾಸ್) ಹಾಗೂ ಗೇಟ್-5(1800 ರೂ ಪಾಸ್) ಮೂಲಕ ತೆರಳಬಹುದು. ಈ ಗೇಟ್ ಗಳ ಸಮೀಪವೇ ವಾಹನ ನಿಲುಗಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಸಂಚಾರ ಪೊಲೀಸರು ಸೂಚಿಸುವ ಕಡೆ ಪಾರ್ಕಿಂಗ್ ಮಾಡಬೇಕಿದೆ. ನಗರದಿಂದ ಬಳ್ಳಾರಿ ರಸ್ತೆ ಮೂಲಕ ಬರುವವರು ಯಲಹಂಕದ ಕಾಫಿ ಡೇ ಜಂಕ್ಷನ್ ಬಳಿ ಸರ್ವೀಸ್ ರಸ್ತೆಯಲ್ಲೇ ಸಾಗಿ ವೆಂಕಟಾಲ ಬಳಿಯ ನಿಟ್ಟೆ ಕಾಲೇಜಿನತ್ತ ಸಾಗುವ ರಸ್ತೆಯಲ್ಲಿ ತರಳಿ ಆಯಾ ಗೇಟ್ ಮೂಲಕ ಪ್ರವೇಶಿಸಬಹುದು.
ವೈಮಾನಿಕ ಪ್ರದರ್ಶನದ ಸ್ಥಳದಲ್ಲಿ ಊಟದ ವ್ಯವಸ್ಥೆ ಇಲ್ಲ, ಕೇವಲ ಅಲ್ಪಾಹಾರ ಮಾತ್ರ ಸಿಗಲಿದ್ದು, ಜೊತೆಯಲ್ಲಿ ಸೀಮಿತ ಪ್ರಮಾಣದ ತಿಂಡಿ, ಕುಡಿಯುವ ನೀರಿನ ಬಾಟಲಿಗಳನ್ನು ಕೊಂಡೊಯ್ಯಬಹುದು.












Click it and Unblock the Notifications