ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ: ಲಘು ಯುದ್ಧ ವಿಮಾನ ತೇಜಸ್ ಜತೆ ಅಮೆರಿಕ ಹೆವಿ ಬಾಂಬರ್ B-1B ಹಾರಾಟ

|
Google Oneindia Kannada News

ಬೆಂಗಳೂರು,ಫೆಬ್ರವರಿ04: ಏರೋ ಇಂಡಿಯಾದಲ್ಲಿ ಲಘು ಯುದ್ಧ ವಿಮಾನ ತೇಜಸ್ ಜತೆ ಅಮೆರಿಕದ ಹೆವಿ ಬಾಂಬರ್ B-1B ಹಾರಾಟ ನಡೆಸಿದೆ.

ಇಂಡೋ ಫೆಸಿಪಿಕ್ ವಲಯದಲ್ಲಿ ಭಾರತ ಮತ್ತು ಅಮೆರಿಕದ ರಕ್ಷಣಾ ಸಹಭಾಗಿತ್ವಕ್ಕೆ ಅಮೆರಿಕ ಒತ್ತು ನೀಡುವುದರ ಪ್ರತೀಕವಾಗಿ ಅಮೆರಿಕದ ವಿವಿಧ ವಿಭಾಗಗಳ ಉನ್ನತ ಅಧಿಕಾರಿಗಳೊಂದಿಗೆ 100 ಜನರ ನಿಯೋಗವು ಏರೋ ಇಂಡಿಯಾ 2021ರಲ್ಲಿ ಭಾಗವಹಿಸಿದೆ.

ಏರೋ ಇಂಡಿಯಾ 2021: ಭಾರತದೊಂದಿಗೆ ಅಮೆರಿಕ ರಕ್ಷಣಾ ಸಹಭಾಗಿತ್ವಏರೋ ಇಂಡಿಯಾ 2021: ಭಾರತದೊಂದಿಗೆ ಅಮೆರಿಕ ರಕ್ಷಣಾ ಸಹಭಾಗಿತ್ವ

B-1 28ನೇ ಬಾಂಬ್ ವಿಂಗ್ , ಎಲ್ಸ್ ವರ್ತ್ ಫೋರ್ಸ್ ಬೇಸ್,ಸೌತ್ ಡಕೋಟದ ವಿಮಾನವಾಗಿದ್ದು, ಈಗಿರುವ B-1B ಲ್ಯಾನ್ಸರ್ ಸೂಪರ್ ಸಾನಿಕ್ ಹೆವಿ ಬಾಂಬರ್ ಆಗಿದೆ. ಇದೊಂದು ಅದ್ಭುತ ವಿಮಾನ. ಇದು ಜಗತ್ತಿನ ಎಲ್ಲೆಡೆ ಅಮೆರಿಕಕ್ಕೆ ಸೇರಿದ ಬೇಸ್‌ಗಳಿಂದ ಹಾಗೂ ಫಾರ್ವರ್ಡ್-ಡಿಪ್ಲಾಯ್ಡ್ ಜಾಗಗಳಿಂದ ಕೂಡ ಮಿಷನ್ ಗಳನ್ನು ಸಫಲಗೊಳಿಸುವ ಸಾಮರ್ಥ್ಯ ಹೊಂದಿದೆ.

Aero India 2021: American B-1B Lancer Heavy Bomber Was Flown For the First Time In India

ಅಮೆರಿಕ ಹಾಗೂ ಭಾರತ ರಕ್ಷಣಾ ಕಂಪನಿಗಳ ನಡುವೆ ಹೆಚ್ಚುತ್ತಿರುವ ಜಂಟಿ ಒಪ್ಪಂದಗಳು ಮತ್ತು ಕಾರ್ಯಗಳು ಭಾರತದಲ್ಲಿ ಇರುವ ರಕ್ಷಣಾ ಸರಬರಾಜುದಾರರ ಜಾಲವನ್ನು ಇನ್ನೂ ಸದೃಢ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ.

ಹಾಗೆಯೇ ತೇಜಸ್ ಯುದ್ಧ ವಿಮಾನದಲ್ಲಿ ಸಂಸದ ತೇಜಸ್ವಿ ಸೂರ್ಯ ಇಂದು ಹಾರಾಟ ನಡೆಸಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದರು. ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾದಲ್ಲಿ ಇಂದು 12.20ರಿಂದ 1.50ರವರೆಗೆಸುಮಾರು 30 ನಿಮಿಷಗಳ ಕಾಲ ತೇಜಸ್ ಕೋ ಪೈಲಟ್ ಆಗಿ ತೇಜಸ್ವಿ ಸೂರ್ಯ ವಿಹಾರ ನಡೆಸಿದರು.

Recommended Video

ಏರೋ ಇಂಡಿಯಾ 2021 ಕಾರ್ಯಕ್ರಮಕ್ಕೆ ಇಂದು ತೆರೆ | Oneindia Kannada

English summary
The American B-1B lancer heavy bomber was flown for the first time in India at Aero India 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X