ಸೂರ್ಯಕಿರಣ್ ಯುದ್ಧ ವಿಮಾನ ಡಿಕ್ಕಿ: ಏರ್ ಶೋ ತಾಲೀಮು ರದ್ದು
ಬೆಂಗಳೂರು, ಫೆಬ್ರವರಿ19: ಯಲಹಂಕದ ವಾಯುನೆಲೆಯ ಸಮೀಪ ಏರೋ ಇಂಡಿಯಾ ಶೋಗಾಗಿ ತಾಲೀಮಿನಲ್ಲಿ ತೊಡಗಿದ್ದ ಸೂರ್ಯಕಿರಣ್ ಯುದ್ಧ ವಿಮಾನ ಡಿಕ್ಕಿಯಾದ ಪರಿಣಾಮ ಎಲ್ಲಾ ಯುದ್ಧ ವಿಮಾನಗಳ ತಾಲೀಮುಗಳನ್ನು ರಕ್ಷಣಾ ಇಲಾಖೆ ರದ್ದುಗೊಳಿಸಿದೆ.
ಏರೋ ಇಂಡಿಯಾ 2019 ಉಕ್ಕಿನ ಹಕ್ಕಿಗಳ ಕಲರವ
ಸೂರ್ಯಕಿರಣ್ ಎರಡು ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ನೆಲಕ್ಕುರುಳುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಇಬ್ಬರು ಪೈಲಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಓರ್ವ ವಿಂಗ್ ಕಮಾಂಡರ್ ಸಾಹಿಲ್ ಮೃತಪಟ್ಟಿದ್ದಾರೆ.
ವಿಮಾನ ಡಿಕ್ಕಿಯಾಗುತ್ತಿದ್ದಂತೆ ಮೂವರು ಪೈಲಟ್‌ಗಳು ಪ್ಯಾರಾಚೂಟ್ ಮೂಲಕ ಜಿಗಿದಿದ್ದರು. ಮೂವರಲ್ಲಿ ವಿಜಯ್ ಶೆಲ್ಕೆ ಹಾಗೂ ತೇಜೇಶ್ವರ್ ಸಿಂಗ್ ಪಾರಾಗಿದ್ದು, ಅವರನ್ನು ಏರ್ಲಿಫ್ಟ್ ಮೂಲಕ ಹೆಚ್ಎಎಲ್ ಬಳಿಯಿರುವ ಕಮಾಂಡ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಳೆ ಆರಂಭವಾಗುವ ಏರೋ ಶೋ ಇಂಡಿಯಾಗೆ ಯುದ್ಧ ವಿಮಾನಗಳು ತಾಲೀಮು ನಡೆಸುತ್ತಿದ್ದವು. ಆದರೆ, ಇಂದು ನಡೆದ ಅವಘಡದಿಂದ ತಾಲೀಮು ರದ್ದುಪಡಿಸಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ಅಧಿಕೃತವಾಗಿ ಏರೋ ಶೋಗೆ ಚಾಲನೆ ನೀಡಲಾಗುತ್ತದೆ.












Click it and Unblock the Notifications