• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಏರ್‍ಬಸ್‍ನಿಂದ ವಾಣಿಜ್ಯ ಪೈಲಟ್ ಮತ್ತು ನಿರ್ವಹಣೆ ತರಬೇತಿ ಕೇಂದ್ರ ಆರಂಭ

|

ಬೆಂಗಳೂರು, ಫೆಬ್ರವರಿ 20: ಪ್ರತಿಷ್ಠಿತ ವೈಮಾನಿಕ ಸೇವಾ ಸಂಸ್ಥೆಯಾಗಿರುವ ಏರ್‍ಬಸ್ ದೇಶದ ರಾಜಧಾನಿ ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಪೈಲಟ್‍ಗಳಿಗೆ ಮತ್ತು ನಿರ್ವಹಣಾ ಎಂಜಿನಿಯರ್ ಗಳಿಗೆ ತರಬೇತಿ ನೀಡುವ ಕೇಂದ್ರವನ್ನು ಉದ್ಘಾಟಿಸಿದೆ. ದೇಶದ ನಾಗರಿಕ ವಿಮಾನಯಾನ ಕ್ಷೇತ್ರದ ಪ್ರಗತಿಗೆ ಪೂರಕವಾಗಿ ತೆಗೆದುಕೊಳ್ಳುತ್ತಿರುವ ಪ್ರಯತ್ನಗಳಲ್ಲಿ ಇದು ಪ್ರಮುಖವಾಗಿದೆ.

ಭಾರತದಲ್ಲಿ ಪ್ರಸ್ತುತ ಇರುವ ವಾಣಿಜ್ಯ ವಿಮಾನಯಾನ ಉದ್ಯಮದಲ್ಲಿ ಈಗಿನ ಎರಡಂಕಿಯ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡರೆ ಮುಂದಿನ 20 ವರ್ಷಗಳಲ್ಲಿ 25,000 ಕ್ಕಿಂತ ಹೆಚ್ಚು ಪೈಲಟ್‍ಗಳ ಅಗತ್ಯವಿರಲಿದೆ ಎಂದು ಏರ್‍ಬಸ್ ಅಂದಾಜಿಸಿದೆ.

ಏರೋ ಇಂಡಿಯಾ 2019 : ಬಾನಂಗಳದಲ್ಲಿ ಉಕ್ಕಿನ ಹಕ್ಕಿಗಳ ಶಕ್ತಿ ಪ್ರದರ್ಶನ

ಈ ತರಬೇತಿ ಕೇಂದ್ರವು ಪೂರ್ಣಪ್ರಮಾಣದ ಫ್ಲೈಟ್ ಸಿಮ್ಯುಲೇಶನ್‍ಗೆ ಎ320 ಫ್ಲೈಟ್ ಸಿಮ್ಯುಲೇಟರ್ ಅನ್ನು ಸೇರ್ಪಡೆ ಮಾಡಿಕೊಂಡಿದೆ. ಇದರಲ್ಲಿ ವಿಮಾನ ವಿಧಾನ ತರಬೇತಿ, ಕಂಪ್ಯೂಟರ್ ಆಧಾರಿತ ತರಬೇತಿ ಕೊಠಡಿ ಮತ್ತು ಗುಣಮಟ್ಟದ ಪೈಲಟ್ ಟ್ರಾನ್ಸಿಶನ್ ಟ್ರೇನಿಂಗ್‍ನಂತಹ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡಿದೆ.

ಇದಲ್ಲದೇ, ಸಹ ಪೈಲಟ್‍ಗಳಲ್ಲಿ ಪರಿಪಕ್ವತೆಯನ್ನು ತರುವುದು ಮತ್ತು ಕೌಶಲ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಅಪ್‍ಗ್ರೇಡ್ ಟು ಕಮಾಂಡ್' ಎಂಬ ಕೋರ್ಸನ್ನು ಸಹ ಈ ಕೇಂದ್ರ ಒಳಗೊಂಡಿದೆ. ಬೆಂಗಳೂರಿನಲ್ಲಿ 2007 ರಲ್ಲಿ ಆರಂಭವಾದ ಏರ್‍ಬಸ್‍ನ ತರಬೇತಿ ಕೇಂದ್ರದಲ್ಲಿ ಇದುವರೆಗೆ 4,500 ಕ್ಕೂ ಅಧಿಕ ನಿರ್ವಹಣೆ ಎಂಜಿನಿಯರ್‍ಗಳಿಗೆ ತರಬೇತಿ ನೀಡಲಾಗಿದೆ. ದೆಹಲಿಯಲ್ಲಿ ಆರಂಭಿಸಲಾಗಿರುವ ತರಬೇತಿ ಕೇಂದ್ರವು ಬೆಂಗಳೂರಿನ ತರಬೇತಿ ಕೇಂದ್ರಕ್ಕೆ ಪೂರಕವಾಗಿದೆ.

ಏರ್‍ಬಸ್ ಇಂಡಿಯಾ & ದಕ್ಷಿಣ ಏಷ್ಯಾದ ಅಧ್ಯಕ್ಷ ಆನಂದ್

ಏರ್‍ಬಸ್ ಇಂಡಿಯಾ & ದಕ್ಷಿಣ ಏಷ್ಯಾದ ಅಧ್ಯಕ್ಷ ಆನಂದ್

ಏರ್‍ಬಸ್ ಇಂಡಿಯಾ & ದಕ್ಷಿಣ ಏಷ್ಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆನಂದ್ ಇ. ಅವರು ಮಾತನಾಡಿ, "ಗ್ರಾಹಕರ ವ್ಯವಹಾರಗಳಿಗೆ ಬೆಂಬಲ ನೀಡುವುದು ನಮ್ಮ ಆದ್ಯತೆಯಾಗಿದ್ದು, ಇದಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಹೊಂದಿದ ತರಬೇತಿಯನ್ನು ಈ ಕೇಂದ್ರದಲ್ಲಿ ನೀಡಲಾಗುತ್ತಿದೆ. ನಮ್ಮ ಆಧಾರಸ್ತಂಭಗಳಲ್ಲಿ ಒಂದು ಗ್ರಾಹಕರಿಗೆ ಪೂರಕವಾದ ಸೇವೆಗಳನ್ನು ಒದಗಿಸುವುದು ಮತ್ತು ಇನ್ನೊಂದು ಸ್ತಂಭವೆಂದರೆ ಸುರಕ್ಷತೆ. ಇದಕ್ಕೆ ಪೂರಕವಾಗಿ ದೇಶದಲ್ಲಿ ತರಬೇತಿ ಕೇಂದ್ರವನ್ನು ಹೊಂದುವ ಮೂಲಕ ಈ ಎರಡೂ ಸ್ತಂಭಗಳ ಮೇಲಿನ ಬದ್ಧತೆಯ ಪ್ರತೀಕವಾಗಿದೆ'' ಎಂದು ತಿಳಿಸಿದರು.

ಏರೋ ಇಂಡಿಯಾ ವಿಶೇಷ : ಬೀದರ್ ವಾಯುನೆಲೆಯ 'ಸೂರ್ಯಕಿರಣ' ಏರ್ ಕ್ರಾಫ್ಟ್

'ಸ್ಕಿಲ್ ಇಂಡಿಯಾ’ ಉಪಕ್ರಮಕ್ಕೆ ಪೂರಕವಾಗಿ ಏರ್‍ಬಸ್

'ಸ್ಕಿಲ್ ಇಂಡಿಯಾ’ ಉಪಕ್ರಮಕ್ಕೆ ಪೂರಕವಾಗಿ ಏರ್‍ಬಸ್

ಜಾಗತಿಕ ಮಟ್ಟದಲ್ಲಿ ಏರ್‍ಬಸ್ ಪೈಲಟ್‍ಗಳು, ನಿರ್ವಹಣೆ ಎಂಜಿನಿಯರ್ ಗಳು ಮತ್ತು ಸಿಬ್ಬಂದಿಯನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಮತ್ತು ಅತ್ಯುತ್ಕೃಷ್ಟವಾದ ಕಸ್ಟಮೈಸ್ಡ್ ತರಬೇತಿ ಯೋಜನೆಗಳನ್ನು ರೂಪಿಸಿದೆ. ಭಾರತ ಸರ್ಕಾರದ 'ಸ್ಕಿಲ್ ಇಂಡಿಯಾ' ಉಪಕ್ರಮಕ್ಕೆ ಪೂರಕವಾಗಿ ಏರ್‍ಬಸ್, ಉಪಖಂಡದಲ್ಲಿ ಅತ್ಯಾಧುನಿಕ ತರಬೇತಿ ತಂತ್ರಜ್ಞಾನಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದೆ. ಈ ಮೂಲಕ ಅತ್ಯುತ್ಕೃಷ್ಟವಾದ ಕೌಶಲ್ಯಯುತವಾದ ಮಾನವಶಕ್ತಿಯನ್ನು ಸೃಷ್ಟಿಸಲಿದೆ.

ಏರೋ ಇಂಡಿಯಾ ಶೋ, ಮಾರ್ಗ ಬದಲಾವಣೆ, ಹೇಗೆ ಹೋಗ್ಬೇಕು?

ಏರ್ ಕ್ರಾಫ್ಟ್ ನ ತರಬೇತಿ ಸೇವೆಗಳ ಮುಖ್ಯಸ್ಥ ಮೈಕೆಲ್ ಚೆಮೌನಿ

ಏರ್ ಕ್ರಾಫ್ಟ್ ನ ತರಬೇತಿ ಸೇವೆಗಳ ಮುಖ್ಯಸ್ಥ ಮೈಕೆಲ್ ಚೆಮೌನಿ

ಏರ್‍ಬಸ್ ಕಮರ್ಷಿಯಲ್ ಏರ್ ಕ್ರಾಫ್ಟ್ ನ ತರಬೇತಿ ಸೇವೆಗಳ ಮುಖ್ಯಸ್ಥ ಮೈಕೆಲ್ ಚೆಮೌನಿ ಅವರು ಮಾತನಾಡಿ, "ಭಾರತದಲ್ಲಿ ಆರಂಭವಾಗಿರುವ ಈ ತರಬೇತಿ ಕೇಂದ್ರವು ಪೈಲಟ್‍ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ನಮ್ಮ ಅಭಿವೃದ್ಧಿ ಯೋಜನೆಗಳ ಭಾಗವಾಗಿದೆ. ಮುಂದಿನ 20 ವರ್ಷಗಳಲ್ಲಿ ಜಗತ್ತಿನಾದ್ಯಂತ 5,00,000 ಕ್ಕೂ ಅಧಿಕ ಹೊಸ ಪೈಲಟ್‍ಗಳ ಅಗತ್ಯವಿರಲಿದೆ. ನಮ್ಮ ಯೋಜನೆಗಳನ್ನು ವಿಸ್ತರಣೆ ಮಾಡುವ ಮೂಲಕ ವಿಮಾನಯಾನ ಗ್ರಾಹಕರನ್ನು ಮತ್ತಷ್ಟು ಹತ್ತಿರಕ್ಕೆ ತಲುಪಬಹುದಾಗಿದೆ'' ಎಂದು ತಿಳಿಸಿದರು.

ಏರ್ಬಸ್ ವಿಶೇಷತೆಗಳು

ಏರ್ಬಸ್ ವಿಶೇಷತೆಗಳು

ಇನ್ನು ಸ್ಥಿರ ಪ್ರದರ್ಶನದಲ್ಲಿ ಏರ್‌ಬಸ್ ಬಹು ನಿರೀಕ್ಷಿತ ಮತ್ತು ವೈಶಿಷ್ಟ್ಯತೆಯ ಟ್ವಿನ್-ಎಂಜಿನ್ ರೋಟೋಕ್ರಾಫ್ಟ್ ಆಗಿರುವ ಎಚ್ 135 ಹಾಗೂ ಎಚ್145 ಎಲ್ಲರನ್ನೂ ಆಕರ್ಷಿಸಲಿದೆ. ಸಹನಶೀಲತೆ, ಕಾಂಪ್ಯಾಕ್ಟ್ ನಿರ್ಮಾಣ ಮತ್ತು ಕಡಿಮೆ ಧ್ವನಿ ಮಟ್ಟವನ್ನು ಹೊಂದಿದ್ದು, ವಿಶ್ವಾಸಾರ್ಹತೆ, ಬಹುಮುಖ ಕೌಶಲ್ಯ ಮತ್ತು ಸ್ಪರ್ಧಾತ್ಮಕ ವೆಚ್ಚದ್ದಾಗಿದೆ. ಅದೇರೀತಿ ಎಚ್145 4-ಟನ್-ಕ್ಲಾಸ್‍ನ ಟ್ವಿನ್-ಎಂಜಿನ್ ರೋಟೋಕ್ರಾಫ್ಟ್ ಸಾಮಥ್ರ್ಯ ಮತ್ತು ನಮ್ಯತೆಯನ್ನು ಹೊಂದಿದೆ. ಇದು ಹೆಚ್ಚು ಮತ್ತು ಬಿಸಿ ಹವಾಗುಣದಲ್ಲೂ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲುದಾಗಿದೆ.

English summary
Aero India 2019 : Airbus opens state-of-the-art commercial pilot and maintenance training centre near Delhi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X