ಯಲಹಂಕದಲ್ಲಿ ಫೆ.18ರಿಂದ ಏರೋ ಇಂಡಿಯಾ ಪ್ರದರ್ಶನ

ಬೆಂಗಳೂರು, ಜ.23 : 'ಏರೋ ಇಂಡಿಯಾ-2015' ವೈಮಾನಿಕ ಪ್ರದರ್ಶನಕ್ಕೆ ಯಲಹಂಕ ಸಜ್ಜಾಗಿದೆ. ಫೆಬ್ರವರಿ 18 ರಿಂದ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಪ್ರದರ್ಶನಕ್ಕೆ ಸಹಕಾರ ನೀಡುವ ಸಲುವಾಗಿ ಫೆ. 10ರಿಂದ 22 ರವರೆಗೆ ಕೆಂಪೇಗೌಡ ವಿಮಾನ ನಿಲ್ದಾಣದ (ಕೆಐಎ) ಕಾರ್ಯಾಚರಣೆ ಅವಧಿಯನ್ನು ತಗ್ಗಿಸಲಾಗುತ್ತದೆ.

ಫೆಬ್ರವರಿ 18ರಂದು ಪ್ರದರ್ಶನದ ಉದ್ಘಾಟನೆ ನಡೆಯಲಿದೆ. ಅಂದು ಬೆಳಗ್ಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಸ್ಥಗಿತಗೊಳ್ಳಲಿದೆ. [ಏರ್ ಶೋ ಚಿತ್ರಗಳನ್ನು ನೋಡಿ]

Yelahanka

'ಏರೋ ಇಂಡಿಯಾ-2015' ವೈಮಾನಿಕ ಪ್ರದರ್ಶನದ ಈ ಅವಧಿಯಲ್ಲಿ ಕೆಐಎದಿಂದ ಹೊರಡುವ ಹಲವು ವಿಮಾನಗಳ ವೇಳಾಪಟ್ಟಿ ವ್ಯತ್ಯಾಸಗೊಳ್ಳಲಿದ್ದು, ಕೆಲವು ವಿಮಾನಗಳ ಸಂಚಾರ ರದ್ದುಗೊಳ್ಳುವ ಸಾಧ್ಯತೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಫೆಬ್ರವರಿ 10ರಿಂದ 16ರವರೆಗೆ ವೈಮಾನಿಕ ಪ್ರದರ್ಶನದ ಪೂರ್ವ ಸಿದ್ಧತೆಗಳು ನಡೆಯಲಿದ್ದು, ಈ ದಿನಗಳಲ್ಲಿ ಪ್ರತಿದಿನ ಮಧ್ಯಾಹ್ನ 12.30ರಿಂದ 3ಗಂಟೆವರೆಗೆ ಕೆಐಎ ಕಾರ್ಯಾಚರಣೆ ಸ್ಥಗಿತ ಗೊಳ್ಳಲಿದೆ. ಫೆ. 19 ರಿಂದ 22ರವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 2ರಿಂದ 5ರವರೆಗೆ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವಿಮಾನ ವೇಳಾ ಪಟ್ಟಿಯಲ್ಲಿ ಆಗುವ ಬದಲಾವಣೆಗಳ ಕುರಿತು www.bengaluruairport.com ವೆಬ್‌ಸೈಟ್‌ನಲ್ಲೂ ವಿವರ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+