ಮೈ ಲಾರ್ಡ್! ಮೀಟೂ ಆರೋಪ ಮಾಡಿದ್ದ ಯುವ ವಕೀಲೆ ನಿಗೂಢ ಸಾವು
ಬೆಂಗಳೂರು, ನವೆಂಬರ್ 25: ವಕೀಲರ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ್ದ ವಕೀಲೆ ನಿಗೂಢವಾಗಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ವಕೀಲಿಕೆ ಮಾಡುತ್ತಿದ್ದ ಅಂಡಮಾನ್-ನಿಕೋಬಾರ್ ಮೂಲದ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ, ಮಲ್ಲೇಶ್ವರದ ಲುಕುಸೋಮ್ ಪಿಜಿ ನಿವಾಸ ಪುಷ್ಪಾಅರ್ಚನಾ ಲಾಲ್ ಮೃತೆ.
ಪುಷ್ಪಾ 2 ವರ್ಷಗಳ ಹಿಂದೆ ವ್ಯಾಸಂಗಕ್ಕಾಗಿ ನಗರಕ್ಕೆ ಬಂದು ಮಲ್ಲೇಶ್ವರದಲ್ಲಿರುವ ಹಿರಿಯ ವಕೀಲರೊಬ್ಬರ ಬಳಿ ಕೆಲಸ ಮಾಡುತ್ತಿದ್ದಳು. ಶನಿವಾರ ಬೆಳಗ್ಗೆ 11.15ಕ್ಕೆ ಕೆಲಸದ ಮಹಿಳೆ ಈಕೆಯ ಕೊಠಡಿಯನ್ನು ಶುಚಿಗೊಳಿಸಲೆಂದು ಬಂದಾಗ ಪುಷ್ಪಾ ಬಾಗಿಲು ತೆಗೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆ ಕಿಟಕಿಯಲ್ಲಿ ನೋಡಿದಾಗ ಕೆಳಗೆ ಬಿದ್ದಿರುವುದು ಕಂಡು ಬಂದಿದೆ. ವಿಚಾರ ತಿಳಿದ ಪಿಜಿ ಮಾಲೀಕರು ಕೊಠಡಿಗೆ ತೆರಳಿ ಪರೀಕ್ಷಿಸಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಪುಷ್ಪಾ ಅವರು ಜಯಂತ್ ಎಂ ಪಟ್ಟಣಶೆಟ್ಟಿ ಅಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ವಕೀಲಿಕೆ ಕಲಿಯುತ್ತಿದ್ದ ಈಕೆ ವಕೀಲ ಟಿ ಚಂದ್ರನಾಯ್ಕ ಮತ್ತು ಸರ್ಕಾರಿ ಪ್ಲೀಡರ್ ಚೇತನ್ ದೇಶಾಯಿ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದರು.
ದೂರನ ಬೆನ್ನಲ್ಲೇ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ನವೆಂಬರ್ 20ರಂದು ಎಫ್‌ಐಆರ್ ದಾಖಲಾಗಿತ್ತು. ದೂರಿಗೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ಆರಂಭಿಸಿದ ನಡುವೆಯೇ ಶನಿವಾರ ಮಧ್ಯಾಹ್ನ ವೈಯಾಲಿಕಾವಲ್ ಲುಕ್ಸ್ ಪಿಜಿಯಲ್ಲಿ ವಕೀಲೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ವಕೀಲ ಸಮುದಾಯದಲ್ಲಿ ಈ ಸಾವು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಪುಷ್ಪ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಪರೀಕ್ಷಾ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications