ಬೆಂಗಳೂರಲ್ಲಿ ನಟಿ ಶ್ರುತಿ ಬಂಧಿಸಿದ ಚೆನ್ನೈ ಪೊಲೀಸರು

ಬೆಂಗಳೂರು , ಸೆ.6: ಪತಿಯನ್ನು ಕೊಲೆ ಮಾಡಿ ಕಳೆದ ಕೆಲವು ತಿಂಗಳುಗಳಿಂದ ತಲೆ ಮರೆಸಿಕೊಂಡಿದ್ದ ಚಿತ್ರ ನಟಿ ಶ್ರುತಿ ಚಂದ್ರಲೇಖಾ ಅವರನ್ನು ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿ ಗುರುವಾರ ತಡರಾತ್ರಿ ಬಂಧಿಸಿದ್ದಾರೆ. ಕನ್ನಡ ಮತ್ತು ತಮಿಳಿನ ಕೆಲವು ಚಿತ್ರಗಳಲ್ಲಿ ನಟಿಸಿದ್ದ ಶ್ರುತಿ ಚಂದ್ರಲೇಖಾ ಕಳೆದ ಜನವರಿಯಲ್ಲಿ ತನ್ನ ಗಂಡನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಆರೋಪ ಹೊತ್ತಿದ್ದಾಳೆ.

ಶ್ರುತಿ ಚಂದ್ರಲೇಖಾ ಜತೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಗಾಂಧಿ ಮತಿನಾಥನ್, ವಿಜಯ್, ವಿನೋತ್, ಜಾನ್ ಪ್ರಿಸನ್ ಮತ್ತು ರಫೀಕ್ ಎಂಬುವರನ್ನು ಬಂಧಿಸಲಾಗಿದ್ದು, ಉಮಾ ಚಂದ್ರನ್ ಮತ್ತು ಎಲಿಶಾ ಎಂಬುವರು ತಲೆ ಮರೆಸಿಕೊಂಡಿದ್ದಾರೆ. ಕಳೆದ 8 ತಿಂಗಳ ಹಿಂದೆಯಷ್ಟೇ ತಮಿಳಿನ 'ಮಧುರಾ ಓಯಲ್' ಎಂಬ ಚಿತ್ರದಲ್ಲಿ ನಟಿಸಿದ್ದ ತನ್ನ ಸಹಚರರ ಜೊತೆ ಸೇರಿ ಶ್ರುತಿ ಚಂದ್ರಲೇಖಾ ತನ್ನ ಪತಿ ರೊನಾಲ್ಡೋ ಪೀಟರ್ ಪ್ರಿಂಜೋನನ್ನು ತಿರುನಲ್ವೇಲಿ ಜಿಲ್ಲೆಯ ಪಲಾಯಂ ಕೊಟ್ಟೈ ಎಂಬ ಬಳಿ ಕೊಲೆ ಮಾಡಿದ್ದರು.

ಅಕ್ಕಿ, ಬೆಳೆ, ದಿನಸಿ ವ್ಯಾಪಾರವನ್ನು ಆನ್ ಲೈನ್ ಟ್ರೆಡಿಂಗ್ ಮೂಲಕ ಮಾಡಲು ಹೊರಟು ಕೈ ಸುಟ್ಟುಕೊಂಡಿದ್ದ ಎಸ್.ರೊನಾಲ್ಡೋ ಪೀಟರ್ ಪ್ರಿಂಜೋ ತನ್ನ ಗೆಳತಿ ಶ್ರುತಿಯನ್ನು ಹೈಟೆಕ್ ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ. ತ್ವರಿತಗತಿಯಲ್ಲಿ ಹಣ ಮಾಡಿ ಸಾಲ ತೀರಿಸಲು ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಇಳಿದ. ಇದಕ್ಕಾಗಿ ಶ್ರುತಿಗೆ ಒತ್ತಾಯ ಮಾಡಿದ. ಅದರೆ, ಇದಕ್ಕೆ ಒಪ್ಪದ ಶ್ರುತಿ ಈತನ ಬಿಸಿನೆಸ್ ಪಾಲುದಾರರ ಜೊತೆ ಸೇರಿ ಡೀಲ್ ಕುದುರಿಸಿಕೊಂಡು ರೊನಾಲ್ಡೋ ಕೊಲ್ಲುವ ಸ್ಕೆಚ್ ಹಾಕಿದಳು...

ಸೇಲಂನ ಉದ್ಯಮಿ ರೊನಾಲ್ಡೊ ಪತಿಯಂತ್ತಿದ್ದ

ಸೇಲಂನ ಉದ್ಯಮಿ ರೊನಾಲ್ಡೊ ಪತಿಯಂತ್ತಿದ್ದ

22 ವರ್ಷ ವಯಸ್ಸಿನ ತಮಿಳು ಹಾಗೂ ಕನ್ನಡ ನಟಿ ಶುತ್ರಿಗೆ ಎರಡು ಮದುವೆಯಾಗಿತ್ತು. ಆದರೆ, ಎರಡು ಅಧಿಕೃತ ಮದುವೆಯೇ? ಅಲ್ಲವೇ? ಗೊತ್ತಿಲ್ಲ. ಮೊದಲು 16ವರ್ಷ ವಯಸ್ಸಿನಲ್ಲಿ ಮಂಜುನಾಥ್ ಎಂಬಾತನನ್ನು ವರಿಸಿದ್ದಳು. ನಂತರ ಆತನನ್ನು ಬಿಟ್ಟು ತಿರುನಲ್ವೇಲ್ವಿಯಲ್ಲಿ ಆನ್ ಲೈನ್ ದಿನಸಿ ಅಂಗಡಿ ಇಟ್ಟುಕೊಂಡಿದ್ದ 37 ವರ್ಷ ವಯಸ್ಸಿನ ರೋನಾಲ್ಡೋ ಪ್ರಿಂಜೋನನ್ನು ಮದುವೆಯಾದಳು.

ಆನ್ ಲೈನ್ ಮಳಿಗೆಗೆ ಉಮಾಚಂದ್ರನ್ ಹಾಗೂ ಪ್ರಿನ್ಸನ್ ಈತನ ಪಾಲುದಾರರಾಗಿದ್ದರು. ಆದರೆ, ಬಿಸಿನೆಸ್ ಡಲ್ ಆಗಿ ನೆಲಕಚ್ಚಿತು. ನಷ್ಟವನ್ನು ತುಂಬಿಕೊಡು, ಬಂಡವಾಳವನ್ನು ಹಂಚಿಬಿಡು ಎಂದು ಪಾಲುದಾರರು ಹೇಳಿದರು. ಅದರೆ, ಇದಕ್ಕೆ ಕಿವಿಗೊಡದ ರೊನಾಲ್ಡೋ ತನ್ನ ಸಖಿ ಶ್ರುತಿ ಜೊತೆ ಬೆಂಗಳೂರಿಗೆ ಬಂದು ಬಿಟ್ಟ

ದುಡ್ಡು ಕೊಡು ಎಂದರೆ ಬ್ಲೂ ಫಿಲಂ ರೀಲು ತೋರಿಸಿದ

ದುಡ್ಡು ಕೊಡು ಎಂದರೆ ಬ್ಲೂ ಫಿಲಂ ರೀಲು ತೋರಿಸಿದ

ತನಗಾದ ನಷ್ಟವನ್ನು ಭರ್ತಿ ಮಾಡಿಕೊಳ್ಳಲು ಅಶ್ಲೀಲ ಚಿತ್ರಗಳನ್ನು ನಿರ್ಮಿಸಲು ನಿರ್ಧರಿಸಿದ ರೊನಾಲ್ಡ್ ಅದರಲ್ಲಿ ನಟಿಸುವಂತೆ ಶ್ರುತಿ ಮೇಲೆ ಒತ್ತಡ ಹೇರುತ್ತಿದ್ದ. ಅಷ್ಟೇ ಅಲ್ಲದೆ ಆತ ಸಿನಿಮಾಕ್ಕಾಗಿ ಸಾಮೂಹಿಕಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಬಲವಂತ ಮಾಡತೊಡಗಿದಾಗ ನಾನು ಬಲವಾಗಿ ನಿರಾಕರಿಸಲಾರಂಭಿಸಿದ್ದಾಳೆ. ಕೊನೆಗೆ ಇವನ ಕಾಟ ತಡೆಯಲಾರದೆ ಈತನ ಬಿಸಿನೆಸ್ ಪಾಲುದಾರರ ಜೊತೆ ಸೇರಿ ಡೀಲ್ ಕುದುರಿಸಿಕೊಂಡು ರೊನಾಲ್ಡೋ ಕೊಲ್ಲುವ ಸ್ಕೆಚ್ ಹಾಕಿದಳು ಎಂದು ಪೊಲೀಸರು ಹೇಳಿದ್ದಾರೆ.

ಪತಿ ರೊನಾಲ್ಡೊ ಕೊಲೆ ಸಂಚಿಗೆ ಸ್ಕೆಚ್

ಪತಿ ರೊನಾಲ್ಡೊ ಕೊಲೆ ಸಂಚಿಗೆ ಸ್ಕೆಚ್

ಈ ನಡುವೆ ಬೆಂಗಳೂರು ಪ್ರವಾಸಕ್ಕೆ ಹೋಗಿದ್ದ ರೊನಾಲ್ಡ್ ವಾಪಸ್ ಬರುವಷ್ಟರಲ್ಲಿ ಶ್ರುತಿ ಕೊಲೆಯ ಸಂಚು ಸಿದ್ಧವಾಗಿತ್ತು. ಇದಕ್ಕಾಗಿ ಉಮಾಚಂದ್ರನ್ ಹಾಗೂ ಪ್ರಿನ್ಸನ್‌ರ ನೆರವು ಪಡೆಯಲು ನಿರ್ಧರಿಸಿದಳು. ಪರಪ್ಪಾಡಿಲ್ಲಕುಲಂ ಮುಖ್ಯರಸ್ತೆ ಬಳಿ ಜ.18ರಂದು ಹಾಲಿನಲ್ಲಿ ವಿಷ ಹಾಕಿ ಪ್ರಿಂಜೋಗೆ ಕುಡಿಸಲಾಗಿದೆ. ಪ್ರಜ್ಞೆ ತಪ್ಪಿದ ಪ್ರಿಂಜೋ ಕುತ್ತಿಗೆ ಹಿಸುಕಿ ಉಮಾಚಂದ್ರನ್ ಹಾಗೂ ಪಿನ್ಸನ್ ಹತ್ಯೆ ಮಾಡಿದ್ದಾರೆ.

ಶವವನ್ನು ಹೂಳಲು ನೆರವು ಕೋರಿದ ಶ್ರುತಿ

ಶವವನ್ನು ಹೂಳಲು ನೆರವು ಕೋರಿದ ಶ್ರುತಿ

ಶವವನ್ನು ಹೂಳಲು ನೆರವು ಕೋರಿದ ಶ್ರುತಿಗೆ ವಿಜಯ್, ವಿನೋತ್, ನಿರ್ಮಲ್, ಎಲಿಶಾ, ರಫೀಕ, ಗಾಂಧಿಮಥಿನಾಥನ್ ನೆರವಿಗೆ ಬಂದಿದ್ದಾರೆ. ಪಲಾಯಂಕೊಟ್ಟೈನಲ್ಲಿರುವ ಅಶೀರ್ವಾದ ನಗರಕ್ಕೆ ಕಾರಿನಲ್ಲಿ ಶವವನ್ನು ಹೂತು ಹಾಕಿದ್ದಾರೆ. ಬಳಿಕ ರೊನಾಲ್ಡ್ ಮನೆಯಲ್ಲಿದ್ದ 75 ಲಕ್ಷ ರು. ನಗದು ಹಾಗೂ ಅಮೂಲ್ಯ ವಸ್ತುಗಳನ್ನು ಆರೋಪಿಗಳು ಹೊತ್ತೊಯ್ದಿದ್ದರು ಎಂದು ತನಿಖಾಧಿಕಾರಿ ಹೇಳಿದ್ದಾರೆ.

ಘಟನೆ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿತ್ತು

ಘಟನೆ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿತ್ತು

ಪತಿಯನ್ನು ಹತ್ಯೆ ಮಾಡಿ ಹೂತು ಹಾಕಿದ ಮೇಲೆ ಪತಿ ನಾಪತ್ತೆ ಎಂದು ಶ್ರುತಿ ದೂರು ನೀಡಿದ್ದಳು. ವಿಷಯ ತಿಳಿದ ರೊನಾಲ್ಡೋ ಸೋದರ ಜಸ್ಟೀನ್ ಕೂಡಾ ಪೊಲೀಸರಿಗೆ ಪ್ರತಿ ದೂರು ನೀಡಿ ಘಟನೆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೆ, ನನ್ನ ಸೋದರನ ಕಾರನ್ನು ಪಿನ್ಸನ್ ಓಡಿಸಿಕೊಂಡು ಹೋಗುವುದನ್ನು ಕಣ್ಣಾರೆ ನೋಡಿದ್ದಾಗಿ ಹೇಳಿಕೆ ನೀಡಿದ್ದರು. ತಕ್ಷಣವೇ ಪಿನ್ಸನ್ ಪತ್ತೆ ಹಚ್ಚಿದ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿತ್ತು. ಅದರೆ, ನಟಿ ಶ್ರುತಿ ಗುರುವಾರ ತನಕ ನಾಪತ್ತೆಯಾಗಿದ್ದವಳು ಬೆಂಗಳೂರಿನಲ್ಲಿ ಫೈನಾನ್ಶಿಯರ್ ಯೊಬ್ಬರ ಮನೆಯಲ್ಲಿ ಸಿಕ್ಕಿಬಿದ್ದಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+