Ramya Divya Spandana: ಬೀದಿ ನಾಯಿಗಳ ಹಿಂಸೆಗೆ ವಿರೋಧ: ರಸ್ತೆಗಿಳಿದು ಕಣ್ಣೀರು ಹಾಕಿದ ನಟಿ ರಮ್ಯಾ, ಇಲ್ಲಿದೆ ವೈರಲ್ ವಿಡಿಯೋ
Ramya Divya Spandana: ಬೀದಿ ನಾಯಿಗಳ ಸುರಕ್ಷೆ ಹಾಗೂ ರಕ್ಷಣೆಗೆ ಸಂಬಂಧಿಸಿದಂತೆ ನಟಿ ಮತ್ತು ಮಾಜಿ ಸಂಸದೆ ರಮ್ಯಾ ಅವರು ಕಣ್ಣೀರು ಹಾಕಿದ್ದಾರೆ. ಬೀದಿ ನಾಯಿಗಳ ರಕ್ಷಣೆಗೆ ಸಂಬಂಧಿಸಿದಂತೆ ನಟಿ ರಮ್ಯಾ ಅವರು ಕಣ್ಣೀರು ಹಾಕಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೀದಿ ನಾಯಿಗಳ ವಿಚಾರವಾಗಿ ನಟಿ ರಮ್ಯಾ ಅವರು ಇತ್ತೀಚಿನ ದಿನಗಳಲ್ಲಿ ದನಿ ಎತ್ತುತ್ತಿದ್ದು, ಇದೀಗ ಪ್ರತಿಭಟನೆಯಲ್ಲೂ ಭಾಗವಾಹಿಸಿದ್ದಾರೆ. ಬೆಂಗಳೂರಿನಲ್ಲಿ ಬೀದಿ ನಾಯಿ ಮೇಲೆ ಆಡಿ ಕಾರ್ ಹತ್ತಿಸಿ ಸಾಯಿಸಿದ ಪ್ರಕರಣದಲ್ಲಿ ಲಾರಾ ಎನ್ನುವ ನಾಯಿ ಪ್ರಾಣಬಿಟ್ಟಿದೆ. ಈ ನಾಯಿಯ ಅಂತ್ಯಸಂಸ್ಕಾರದಲ್ಲಿ ನಟಿ ರಮ್ಯಾ ಭಾಗವಹಿಸಿದ್ದರು.
ಬೆಂಗಳೂರಿನ ಕಗ್ಗದಾಸಪುರದಲ್ಲಿ ಬೀದಿನಾಯಿಗಳ ನಾಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಅವರು ಆಕ್ರೋಶ ಹೊರ ಹಾಕಿದ್ದಾರೆ. ನಾಯಿಗಳ ಮೇಲಿನ ಹಿಂಸೆ ನೆನೆದು ರಮ್ಯಾ ಅವರು ನಡು ರಸ್ತೆಯಲ್ಲೇ ಕಣ್ಣೀರು ಹಾಕಿದ್ದಾರೆ. ಫ್ರೀಡಂಪಾರ್ಕ್‌ನಲ್ಲಿ ಬೀದಿ ನಾಯಿಗಳನ್ನು ಬಲವಂತವಾಗಿ ಸ್ಥಳಾಂತರ ಮಾಡುವುದರ ವಿರುದ್ಧವಾಗಿ ನಡೆದ ಪ್ರತಿಭಟನೆಯಲ್ಲಿ ನಟಿ ರಮ್ಯಾ ಅವರು ಭಾಗಿಯಾಗಿದ್ದು, ನಾಯಿಗಳನ್ನು ಚೀಲಗಳಲ್ಲಿ ಕಟ್ಟಿ ಸಾಗಿಸುತ್ತಿರುವುದು ತೀರ ಅಮಾನವೀಯವಾದ ಬೆಳವಣಿಗೆ ಎಂದು ಕಣ್ಣೀರು ಹಾಕಿದ್ದಾರೆ.

ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾಣೆಯಾಗಿರುವ ನಾಯಿಗಳಿಗೆ ಏನಾಗಿರಬಹುದು ಎಂಬುದನ್ನು ಕಲ್ಪಿಸಿಕೊಂಡರೆನೇ ನೋವಾಗುತ್ತದೆ. ಇಷ್ಟೊಂದು ಕ್ರೂರ ಬೆಳವಣಿಗೆ ನೋಡಿ, ನನಗೆ ಆಘಾತ ಆಯಿತು ಎಂದು ರಮ್ಯಾ ಅವರು ಹೇಳಿಕೊಂಡಿದ್ದಾರೆ. ನಿರ್ದಿಷ್ಟ ಸಂಸ್ಥೆಯೊಂದು ಇಷ್ಟು ಬೇಜವಾಬ್ದಾರಿಯಾಗಿ ನಡೆದುಕೊಂಡಿರುವುದು ಸರಿಯಲ್ಲ ಎಂದೂ ಅವರು ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೈಕೋರ್ಟ್‌ನಲ್ಲಿ ಈ ವಿಷಯ ವಿಚಾರಣೆ ಹಂತದಲ್ಲಿದ್ದು ಏಪ್ರಿಲ್ 16ರಂದು ಮುಂದಿನ ವಿಚಾರಣೆ ನಡೆಯಲಿದೆ ಎಂದು ಹೇಳಲಾಗಿದೆ.
ನೆಟ್ಟಿಗರು ಹೇಳಿದ್ದೇನು
ಇನ್ನು ನಾಯಿಗಳ ರಕ್ಷಣೆಗೆ ಸಂಬಂಧಿಸಿದಂತೆ ನಟಿ ರಮ್ಯಾ ಅವರು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ನಾಯಿ ಸಾವಿವೆ ಕಂಬನಿ ಮಿಡಿದಿದ್ದರೆ. ಇನ್ನೂ ಕೆಲವರು ಅರ್ಥವೇ ಇಲ್ಲದೆ ರಮ್ಯಾ ಅವರನ್ನು ಟೀಕೆ ಮಾಡಿದ್ದಾರೆ. ರಮ್ಯಾ ಅವರು ಈ ಹಿಂದೆ ಮಾಡಿದ್ದ ಅಭಿಯಾನಕ್ಕೂ, ಈ ಪ್ರತಿಭಟನೆಯು ಭಿನ್ನವಾಗಿದೆ. ಆದರೆ, ಕೆಲವರು ಎರಡನ್ನೂ ಸೇರಿಸಿ ಪ್ರತಿಕ್ರಿಯೆ ಕೊಡುತ್ತಿದ್ದಾರೆ.
ಸುರೇಶ್ ಬಿ.ವಿ ಎನ್ನುವವರು ಮೇಡಂ ರಮ್ಯಾ ಅವರೇ.. ಬೀದಿನಾಯಿಗಳ ಮೇಲೆ ನಿಮಗಿರೋ ಕಾಳಜಿಗೆ ನನ್ನದೊಂದು ನಮಸ್ಕಾರ.. ಪ್ರಾಣಿಗಳ ಮೇಲೆ ದಯೆ ಅನ್ನೋದು ಪ್ರತಿಯೊಬ್ಬರಿಗೂ ಇರಲೇಬೇಕು. ಅದೇ ರೀತಿ ನಿಮಗೆ ನಾಯಿಗಳನ್ನ ಕಂಡ್ರೆ ಕೊಂಚ ಪ್ರೀತಿ ಜಾಸ್ತಿಯೇ ಇದೆ ಅನ್ನೋದು ಗೊತ್ತು.
Ramya Divya Spandana: ನಿಮಗೆ ನನ್ನ ಪ್ರಶ್ನೆಗಳು
- ಮನುಷ್ಯನ ಮೇಲೆರಗೋ ನಾಯಿಗಳನ್ನ ಏನು ಮಾಡಬೇಕು? ಎಂದು ಸುರೇಶ್ ಎನ್ನುವವರು ಕೇಳಿದ್ದಾರೆ.
- ನಾಯಿ ಕಚ್ಚಿಸಿಕೊಂಡು #ರೇಬೀಸ್ ಸೋಂಕಿಗೀಡಾಗಿ ಪ್ರತಿಭಾನ್ವಿತ #ವಾಲಿಬಾಲ್ #ಪ್ಲೇಯರ್ ನಾಯಿಯಂತೆ ಬೊಗಳುತ್ತಾ, ಒದ್ದಾಡಿ ಪ್ರಾಣಬಿಟ್ಟನಲ್ಲ ಅದಕ್ಕೆ ಯಾವ ಪರಿಹಾರ ಸೂಚಿಸುತ್ತೀರಿ?
- ಬೀದಿನಾಯಿಗಳಿಗಾಗಿ ಶೆಲ್ಟರ್ ಮಾಡುವುದಕ್ಕೂ ನಿಮ್ಮ ವಿರೋಧವೇಕೆ?
- ಬೀದಿನಾಯಿಗಳ ರಕ್ಷಣೆಗೆ ನಿಮ್ಮ ಕೊಡುಗೆ ಏನು? ಎಷ್ಟು (ಬೀದಿ) ನಾಯಿಗಳಿಗೆ ನಿಮ್ಮ ಮನೆಯಲ್ಲಿ ಆಶ್ರಯ ನೀಡಿದ್ದೀರಿ?
- ನಿಮಗೆ ಬೆಂಗಳೂರಿನ #ಶ್ರೀರಾಂಪುರ, #ಗೊಲ್ಲರಹಟ್ಟಿ, #ಕಾಮಾಕ್ಷಿಪಾಳ್ಯದಂತಹ ಏರಿಯಾಗಳಿಗೆ ರಾತ್ರಿ ಸಮಯದಲ್ಲಿ ಸ್ಕೂಟಿಯಲ್ಲೋ? ನಡೆದುಕೊಂಡೋ ಸಂಚಾರ ಮಾಡಿಬರುವಿರಾ ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications