Ramya: ಕರ್ನಾಟಕ ರೈತ ಹೋರಾಟಕ್ಕೆ ಕೈ ಜೋಡಿಸಿದ ನಟಿ ರಮ್ಯಾ, ಕಾಂಗ್ರೆಸ್ ಸರ್ಕಾರದ ವಿರುದ್ಧ ಗರಂ!
ಬೆಂಗಳೂರು, ಜುಲೈ 02: ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿನ KIADB ಯಿಂದ ಭೂಮಿ ಸ್ವಾಧಿನ ವಿರುದ್ಧ ರೈತರು ಹೋರಾಟ ಮುಂದುವರಿಸಿದ್ದಾರೆ. ರೈತರ ಪರ ಬಹುಭಾಷಾ ನಟ ಪ್ರಕಾಶ್ ರೈ ಅವರು ಧ್ವನಿ ಎತ್ತಿದ್ದರು. ಅವರ ಬೆನ್ನಲ್ಲೇ ಮೋಹಕತಾರೆ ನಟಿ ರಮ್ಯಾ (Ramya -Divya Spandana)ಅವರು ಸಹ ರೈತರ ಪರವಾಗಿ ರಾಜ್ಯ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಕಾಂಗ್ರೆಸ್ ಪರ ಮಾತನಾಡುತ್ತಿದ್ದ ಈ ಇಬ್ಬರು ಸ್ಟಾರ್ ಕಲಾವಿದರೂ ಇದೀಗ ಸಿಎಂ ಸಿದ್ದರಾಮಯ್ಯ ವಿರುದ್ಧ ರೈತರ ಪರವಾಗಿ ಗಟ್ಟಿ ಧ್ವನಿಯಿಂದ ಮಾತನಾಡಿದ್ದಾರೆ. ಸರ್ಕಾರದ ನಡೆ, ನಿರ್ಧಾರಗಳನ್ನು ಪ್ರಶ್ನೆ ಮಾಡಿದ್ದಾರೆ.
''ಹೈಟೆಕ್ ಡಿಫೇನ್ಸ್ ಆಂಡ್ ಏರೋಸ್ಪೇಸ್ ಪಾರ್ಕ್' ನಿರ್ಮಿಸಲು ದೇವನಹಳ್ಳಿಯ ಸುಮಾರು 13 ಗ್ರಾಮಗಳ 1770 ಅಧಿಕ ಎಕರೆ ಭೂಮಿ ವಶಕ್ಕೆ ಮುಂದಾಗಿದ್ದ ರಾಜ್ಯ ಸರ್ಕಾರ ನಡೆ ಖಂಡಿಸಿ ರೈತರು ಹೋರಾಟ ಆರಂಭಿಸಿದ್ದಾರೆ. ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ನಟಿ ರಮ್ಯಾ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಟ್ಯಾಗ್ ಮಾಡಿ ಪೋಸ್ಟ್ ಹಾಕಿದ್ದಾರೆ. ರೈತರ ಸಮಸ್ಯೆಗೆ ಸ್ಪಂದಿಸಿ ಅವರ ಬಗ್ಗೆಯು ಕರುಣೆ ಇರಲಿ ಎಂದು ಕೇಳಿಕೊಂಡಿದ್ದಾರೆ. ರೈತರಿಗೆ ಒಳ್ಳೆಯದನ್ನು ಮಾಡಬೇಕು. ಈ ಕಥೆ ಬರೀ ಕರ್ನಾಟಕದ ರೈತರದ್ದಲ್ಲ, ದೇಶಾದ್ಯಂತ ಒಂದೇ ಆಗಿರುತ್ತದೆ. ಕೈಗಾರಿಕೆಗಳು ಉದ್ಯೋಗಗಳನ್ನು ಸೃಷ್ಟಿಸುವಾಗ, ರೈತರ ಜೀವನೋಪಾಯವನ್ನು ಸಹ ನಾವು ಖಚಿತಪಡಿಸಿಕೊಳ್ಳಬೇಕು'' ಎಂದು ಅವರು ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಟ್ಯಾಗ್ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿಯೇ ಗುರುತಿಸಿಕೊಂಡಿದ್ದ ನಟಿ ರಮ್ಯಾ ಅವರು ಇದೀಗ ರೈತರ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದನ್ನು ಖಂಡಿಸಿ ಸರ್ಕಾರದ ವಿರುದ್ಧ ಮೂರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾಗಿ ಧ್ವನಿಯಾಗಿದ್ದಾರೆ. ಇತ್ತೀಚೆಗೆ ನಟ ಪ್ರಕಾಶ್ ರೈ ಅವರು ಸಹ ರೈತರ ಪರ ಪ್ರತಿಭಟನಾ ವೇದಿಕೆಯಲ್ಲಿಯೇ ಬಹಿರಂಗವಾಗಿ ಮಾತನಾಡಿದ್ದರು. ರೈತ ಮುಖಂಡ ಜತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಂದಿದ್ದರು.
ಆದರೆ ರೈತ ಮುಖಂಡರು ಮತ್ತು ಪ್ರಕಾಶ್ ರೈ ಅವರನ್ನು ತುಂಬಾ ಹೊತ್ತು ಕಾಯಿಸಿ ನಂತರ ಸಿಎಂ ಭೇಟಿಗೆ ಅವಕಾಶ ಮಾಡಿಕೊಡಲಾಯಿತು. ರೈತರ ಭೂಮಿ ಸ್ವಾಧೀನ ತಪ್ಪು. ಈ ನಿರ್ಧಾರ ಸರಿಯಲ್ಲ. ಬೆಳೆ ಬೆಳೆಯುವ ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ನೀಡಬಾರದು. ಹೋರಾಟಗಾರ ರೈತರ ಬಂಧನ ಖಂಡನೀಯ ಎಂದರು. ಅನ್ನ ಹಾಕುವ ಭೂಮಿ ಕಸಿದುಕೊಳ್ಳದಂತೆ ಅವರು ಸಿಎಂ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದರು.
KIADB: ಎಂಬಿ ಪಾಟೀಲ್ ಸ್ಪಷ್ಟನೆ ಏನು?
ಇತ್ತೀಚೆಗೆ ಎಂಬಿ ಪಾಟೀಲ್ ಅವರು ಮಾತನಾಡಿ 13 ಗ್ರಾಮಗಳ ವ್ಯಾಪ್ತಿಯಲ್ಲಿ ಹೈಟೆಕ್ ಪಾಕ್ ನಿರ್ಮಾಣಕ್ಕೆ ಭೂಮಿ ಸ್ವಾಧಿನಕ್ಕಾಗಿ 2021ರಲ್ಲಿ ಅಧಿಸೂಚನೆ ಹೊರಡಿಸಿತ್ತು. 2022ರಲ್ಲಿ ಭೂಸ್ವಾಧಿನಕ್ಕೆ ಅನುಮೋದಿಸಿತ್ತು. ಅಂದಿನಿಂದ ಇದರ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಚೆನ್ನರಾಯಪಟ್ಟಣದ ಮೂರು ಹೂಬಳಿಯಲ್ಲಿನ 495 ಎಕರೆ ಭೂಮಿ ವಶಕ್ಕೆ ಪಡೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಕೈಗಾರಿಕೆ ಉದ್ದೇಶಗಳಿಂದ ವಶಕ್ಕೆ ಪಡೆಯಲ್ಲ ಎಂದು ಸ್ಪಷ್ಟಪಡಿಸಿದ್ದರು ಇದಕ್ಕು ಜಗ್ಗದ ರೈತರು ಧರಣಿ ಮುಂದುವರಿಸಿದ್ದ ರೈತರಿಗೆ ನಟ ಪ್ರಕಾಶ್ ರೈ ಅವರು ಬೆಂಬಲ ವ್ಯಕ್ತಪಡಿಸಿದರು. ಇದೀಗ ನಟಿ ರಮ್ಯಾ ರೈತರ ಧ್ವನಿಯಾಗಿ ರಾಜ್ಯ ಸರ್ಕಾರ ಪ್ರಶ್ನಿಸಿದ್ದಾರೆ.












Click it and Unblock the Notifications