Get Updates
Get notified of breaking news, exclusive insights, and must-see stories!

ಪ್ರಜ್ವಲ್ ರೇವಣ್ಣ ಕೇಸ್: ವಿಡಿಯೋ ನೋಡಿ ನಟಿ ಹರ್ಷಿಕಾ ಪೂರ್ಣಚ್ಚ ಪ್ರತಿಕ್ರಿಯೆ

ಬೆಂಗಳೂರು, ಮೇ 05: ಭಾರೀ ಸದ್ದು ಮಾಡುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂರ್ಣಚ್ಚ ಅವರು ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೊಟ್ಟಿ ಮೊದಲ ಮಹಿಳಾ ಸೆಲೆಬ್ರೆಟಿ ಆಗಿದ್ದಾರೆ.

ಪ್ರಕರಣ ಕುರಿತು ಬೆಳಕಿಗೆ ಬಂದ 2,976 ವೀಡಿಯೊಗಳಲ್ಲಿ ಒಂದನ್ನು ನಾನು ನೋಡಿದೆ. ಆ ವಿಡಿಯೋ ನೋಡುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ವೀಡಿಯೋಗಳು ಕಾನೂನುಬದ್ಧ ಮತ್ತು ನೈಜವಾಗಿದ್ದರೆ, ಅಂತಹ ಕೊಳಕು ಕೃತ್ಯಗಳನ್ನು ಸೃಷ್ಟಿಸಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Actress Harshika Poonacha First Reaction About Prajwal Revanna Sexual Abuse Case

ಈ ಕುರಿತು ನಟಿ ಹರ್ಷಿಕಾ ಪೂರ್ಣಚ್ಚಾ ಅವರು ಸರಣಿ ಟ್ವೀಟ್ (X) ಮಾಡಿ ಪ್ರತಿಕ್ರಿಯಿಸಿದ್ದಾರೆ. ಪೆನ್‌ಡ್ರೈವ್ ಪ್ರಕರಣದ ಈ ವೀಡಿಯೊಗಳಲ್ಲಿ ಕಾಣಿಸಿಕೊಂಡಿರುವ ಅನೇಕ ಮಹಿಳೆಯರ ನೆನೆದರೆ ನೋವುಂಟಾಗುತ್ತದೆ. ಸಂತ್ರಸ್ತ ಮಹಿಳೆಯರು ಎಲ್ಲರೂ ಸಭ್ಯ ಮತ್ತು ಸರಳ ಕುಟುಂಬದವರಂತೆ ಕಾಣಿಸುತ್ತಾರೆ.

ವಿಡಿಯೋ ರಾಜಕೀಯ ಬಳಕೆ ದುರದೃಷ್ಟಕರ

ಸಭ್ಯ ಸಂತ್ರಸ್ತ ಮಹಿಳೆಯರ ಮುಖಗಳನ್ನು ಕೆಲವರು ರಾಜಕೀಯಕ್ಕೆ, ರಾಜಕೀಯ ಚರ್ಚೆಗೆ ಬಳಸಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಅವರು ಮಹಿಳೆಯರ ಭವಿಷ್ಯ ಕುರಿತು ವಿಷಾದ ವ್ಯಕ್ತಪಡಿಸಿದರು.

ಪೆನ್‌ಡ್ರೈವ್‌ನಲ್ಲಿರುವ ಮಹಿಳೆಯರ ಮುಖಗಳನ್ನು ಕನಿಷ್ಠಪಕ್ಷ ಬ್ಲರ್ ಸಹ ಮಾಡಬಹುದಿತ್ತು. ಆದರೆ ಇಲ್ಲಿ ಹಾಗೆ ಮಾಡಿಲ್ಲವಾದ್ದರಿಂದ ಆ ಮಹಿಳೆಯರು ಭವಿಷ್ಯದಲ್ಲಿ ಸಮಾಜವನ್ನು ಹೇಗೆ ಎದುರಿಸುತ್ತಾರೆ? ಎಂದು ಪ್ರಶ್ನೆ ಮಾಡಿದರು.

Actress Harshika Poonacha First Reaction About Prajwal Revanna Sexual Abuse Case

ಮಾನಸಿಕ ಆಘಾತ ಅನುಭವಿಸುತ್ತಿರುವ ಸಂತ್ರಸ್ತೆಯರು

ಸಮಾಜ ಸಂತ್ರಸ್ತ ಮಹಿಳೆಯರನ್ನು ಮುಂದೆ ಯಾವ ದೃಷ್ಟಿಯಲ್ಲಿ ನೋಡುತ್ತದೆ. ಅವರ ಕುಟುಂಬ ಮತ್ತು ಮಕ್ಕಳ ಗತಿ ಏನು? ಸದ್ಯ ಪ್ರಕರಣದಿಂದಾಗಿ ಮಹಿಳೆಯರು ಅನುಭವಿಸುತ್ತಿರುವ ಮಾನಸಿಕ ಆಘಾತ, ಆತಂಕವನ್ನು ಊಹಿಸಿ ಎಂದು ನಟಿ ತಿಳಿಸಿದ್ದಾರೆ.

ಹೀಗಾಗುತ್ತದೆ ಎಂದೆ ನೀವೆಲ್ಲರೂ ಯೋಚನೆ ಮಾಡಿದ್ದೀರಾ? ಈ ವೀಡಿಯೋಗಳನ್ನು ಸಾರ್ವಜನಿಕವಾಗಿ ಪಸರಿಸಲು ಯಾರು ಕಾರಣ? ಆ ವ್ಯಕ್ತಿಗಳಿಗೆ ಮತ್ತು ಇಂತಹ ಭಯಾನಕ ಕೃತ್ಯಗಳನ್ನು ಎಸಗಿದ ವ್ಯಕ್ತಿಗೂ ಎಲ್ಲರಿಗೂ ಕಾನೂನಿನ ಪ್ರಕಾರ ಸಮಾನ ಶಿಕ್ಷೆ ನೀಡಬೇಕು.

ಮಹಿಳೆಯರ ಗೌರವ, ಸಮಾನತೆ ಪರ ನನ್ನ ಧ್ವನಿ

ಮಹಿಳೆಯರ ಗೌರವ, ಸುರಕ್ಷತೆ ಮತ್ತು ಅವರ ಸಮಾನತೆಗಾಗಿ ನಾನು ಸದಾ ನಿಲ್ಲಲು ಸಿದ್ಧಳಿದ್ದೇನೆ. ಮಹಿಳೆಯರ ಪರ ನನ್ನ ಧ್ವನಿ ಮುಂದುವರಿಯುತ್ತದೆ. ಈ ಪೆನ್‌ಡ್ರೈವ್ ಪ್ರಕರಣದ ಸಂತ್ರಸ್ತ ಮತ್ತು ಅಮಾಯಕ ಎಲ್ಲ ಕುಟುಂಬಗಳಿಗೆ ಶಕ್ತಿ ಮತ್ತು ಧೈರ್ಯವನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಜೈ ಹಿಂದ್ ಎಂದು ನಟಿ ಹರ್ಷಿಕಾ ಬರೆದುಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+