'ಸೆಕೆಂಡ್ ಅಂದ ಮಾತ್ರಕ್ಕೆ ಪವಿತ್ರಾ ಗೌಡ ಕೆಟ್ಟವಳಾ? ದರ್ಶನ್ ಸರ್ ಬಂದು ಹೇಳಿದ್ರಾ?'
ಬೆಂಗಳೂರು, ಜೂನ್ 24: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಎ-೧ ಆರೋಪಿ ಪವಿತ್ರಾ ಗೌಡ ಹಾಗೂ ನಟ ದರ್ಶನ್ ಜೈಲುಪಾಲಾಗಿದ್ದಾರೆ. ಈ ಮಧ್ಯ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಬಗ್ಗೆ ಚರ್ಚೆ ಮಾಡುವವರ ಬಗ್ಗೆ ನಟಿ ಚಿತ್ರಾಲ್ ರಂಗಸ್ವಾಮಿ ಮಾತನಾಡಿದ್ದು, ಕೆಟ್ಟದಾಗಿ ಕಾಮೆಂಟ್ ಮಾಡುವವರ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಮಾತನಾಡಿರುವ ಚಿತ್ರಾಲ್, ಕಮೆಂಟ್ಸ್ ಅಲ್ಲಿ ಬೇರೆಯವರ ಜೀವನದ ಬಗ್ಗೆ ಮಾತನಾಡಬೇಡಿ. ಈಗೇನೋ ಅವರ ಟೈಮ್ ಸರಿ ಇಲ್ಲ ಅಂದರೆ ಅವರ ಬಗ್ಗೆ ಮಾತನಾಡುವುದು ತುಂಬಾ ತಪ್ಪು. ಜನಗಳು ತುಂಬಾ ತುಂಬಾ ತಪ್ಪು ಮಾಡುತ್ತಿದ್ದಾರೆ. ಇಂತಹ ಜನಗಳ ಮಧ್ಯ ನಾವು ಬದುಕುತ್ತಿದ್ದೇವೆ ಅಂತಾ ಬೇಸರವಾಗುತ್ತಿದೆ ಎಂದರು.

ಯಾವುದೋ ವ್ಯಕ್ತಿ ಇನ್ನೊಬ್ಬರ ಜೀವನದಲ್ಲಿ ಸೆಕೆಂಡ್ ಆಗಿ ಹೋಗಿದ್ದಾರೆ ಅಂದರೆ ಅದರ ಅರ್ಥ ಅವರು ಕೆಟ್ಟವರಲ್ಲ. ಕೆಟ್ಟವರಾಗಿದ್ದರೆ ಅವರು ಹತ್ತು ವರ್ಷ ಇರುತ್ತಿರಲಿಲ್ಲ. ಅವರ ನಡುವೆ ಆ ಬಾಡಿಂಗ್ ಇಲ್ಲದೇ ಇದ್ದರೆ ಅವರು ಹತ್ತು ವರ್ಷ ಜೊತೆಯಾಗಿ ಇರುತ್ತಿರಲಿಲ್ಲ. ಅವರ ಬಗ್ಗೆ ಮಾತನಾಡೋಕೆ ನಾವು ಯಾರೂ ಅಲ್ಲ. ನಾನು ಯಾರೂ ಅಲ್ಲ.. ನೀವು ಯಾರೂ ಅಲ್ಲ.
ಈಗ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಗಂಡಸರು ಹಾಗೂ ಹೆಂಗಸರು ಏನು ಕಮೆಂಟ್ ಹಾಕುತ್ತಿದ್ದರಲ್ಲ ಅವರನ್ನು ಬೈದುಕೊಂಡು ಹಾಕುತ್ತಿದ್ದೀರ. ಅವರ ಮಗ ಅಥವಾ ಮಗಳು ನಿಮ್ಮ ಕಮೆಂಟ್‌ಗಳನ್ನು ನೋಡಿದಾಗ ಅವರ ಎಳೆ ಮನಸ್ಸಿಗೆ ಎಷ್ಟು ನೋವಾಗುತ್ತದೆ. ಅವರು ಏನೋ ಒಂದು ಮಾಡಿಕೊಂಡರೆ ನೀವು ಹೊಣೆಯಾಗುತ್ತಿರಾ..? ಇಲ್ಲ ಅಲ್ವಾ. ಈ ವಿಷಯದಲ್ಲಿ ಅವಳನ್ನು ಬೈದುಕೊಂಡು ಕಮೆಂಟ್ ಮಾಡುತ್ತೀರಾ..ನಿಮಗೆ ಏನು ಗೊತ್ತು ಅವಳು ಹೇಗೆ ಏನು ಅಂತಾ ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ನಿಮ್ಮ ಅಕೌಂಟ್ಗಳನ್ನು ಪ್ರೈವೇಟ್ ಇಟ್ಟುಕೊಂಡಿರುತ್ತೀರಾ. ಜೀರೋ ಪೋಸ್ಟ್ ಹಾಕಿ ಇರುತ್ತೀರಾ. ನಿಮ್ಮನ್ನೆಲ್ಲಾ ಒಂದು ಕಾಮೆಂಟ್ನಲ್ಲೂ ಮೆನ್ಷನ್ ಮಾಡೋದಕ್ಕೆ ಆಗಲ್ಲ. ನೀವು ಬಂದು ಇನ್ನೊಬ್ಬರ ಜೀವನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತೀರಾ. ಇದೆಲ್ಲಾ ಎಷ್ಟರ ಮಟ್ಟಿಗೆ ಸರಿ ನೀವೆ ಹೇಳಿ? ನಿಮಗೆ ಬುದ್ಧಿ ಇದ್ದರೆ ಬೇರೆಯವರ ಪರ್ಸನಲ್ ಬಗ್ಗೆ ಸಾರ್ವಜನಿಕವಾಗಿ ಮಾತನಾಡಬೇಡಿ.
ಆಕೆಯನ್ನು ಜಡ್ಜ್ ಮಾಡಲು ನೀವ್ಯಾರು? ಕಾಮೆಂಟ್ನಲ್ಲಿ ಮಾತಾಡುವುದರಿಂದ ನಿಮಗೆ ಏನು ಸಿಗುತ್ತದೆ. ನೀವು ಹೇಗೆ ಡಿಸೈಡ್ ಮಾಡುತ್ತೀರಾ? ಸೆಕೆಂಡ್ ಎನ್ನುವ ಕಾರಣಕ್ಕೆ ಅವಳು ಕೆಟ್ಟವಳು ಅಂತಾ ಹೇಗೆ ನಿರ್ಧಾರ ಮಾಡುತ್ತೀರಾ? ಮೊದಲು ಅದನ್ನು ಹೇಳಿ..? ದರ್ಶನ್ ಸರ್ ಬಂದು ನಿಮಗೆ ಹೇಳಿದ್ರಾ? ಇವ್ಳು ಬಂದು ನನ್ನ ಲೈಫ್ ಹಾಳು ಮಾಡಿದಳು ಅಂತಾ? ಬೇರೆಯವರ ಪರ್ಸನಲ್ ವಿಚಾರವನ್ನು ಅಷ್ಟು ಕೆಟ್ಟದಾಗಿ ಚರ್ಚೆ ಮಾಡುತ್ತೀರಾ ಅಂದರೆ ಏನು ನಿಮಗೆ ಕಮೆಂಟ್ ಮಾಡುವುದೇ ಕೆಲಸನಾ..? ಇನ್ನೊಬ್ಬರ ಪರ್ಸನಲ್ ಬಗ್ಗೆ ಮಾತನಾಡುವುದೇ ಕೆಲಸನಾ..? ಅವರ ವೈಯಕ್ತಿಕ ವಿಚಾರ ತಿಳಿದುಕೊಂಡು ನಿಮಗೇನು ಆಗಬೇಕಿದೆ ಎಂದು ನಟಿ ಚಿತ್ರಾಲ್ ಕಿಡಿಕಾರಿದರು.












Click it and Unblock the Notifications