ಲಕ್ಷ್ಮೀ ಕಲ್ಯಾಣಕ್ಕೆ ನಟ ದುನಿಯಾ ವಿಜಯ್ ಸಾರಥ್ಯ
Recommended Video

ಬೆಂಗಳೂರು, ಮಾರ್ಚ್ 09: ಪೋಷಕರ ವಿರೋಧದ ನಡುವೆ ನಿನ್ನೆ ಮೈಸೂರಿನಲ್ಲಿ ವಿವಾಹವಾದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯಕ್ ಮಗಳು ಲಕ್ಷ್ಮಿ ನಾಯಕ್ ಅವರಿಗೆ ದುನಿಯಾ ವಿಜಿ ಸಾಥ್ ನಿಡಿದ್ದಾರೆ.
ನವ ವಿವಾಹಿತ ಜೋಡಿಗೆ ತಮ್ಮದೆ ಮನೆಯಲ್ಲಿ ನಿನ್ನೆ ಆಶ್ರಯ ನೀಡಿದ್ದ ದುನಿಯಾ ವಿಜಿ ಅವರು ಇಂದು ಅವರನ್ನು ತಮ್ಮ ನೇತೃತ್ವದಲ್ಲೇ ಯಲಹಂಕ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಹೇಳಿಕೆ ದಾಖಲು ಮಾಡಿಸಿದ್ದಾರೆ. ಇಂದೇ ಅಧಿಕೃತವಾಗಿ ಅವರಿಬ್ಬರ ಮದುವೆಯನ್ನು ಅಧಿಕೃತವಾಗಿ ನೊಂದಾವಣಿ ಮಾಡಿಸುವ ಸಾಧ್ಯತೆಯೂ ಇದೆ.
ದುನಿಯಾ ವಿಜಯ್ ಹಾಗೂ ಸುಮದರ್ ಗೌಡ ಉತ್ತಮ ಸ್ನೇಹಿತರಾಗಿದ್ದು, ದುನಿಯಾ ವಿಜಯ್ ನಟಿಸಿದ್ದ ಮಾಸ್ತಿಗುಡಿ ಚಿತ್ರವನ್ನು ಸುಂದರ್ ಗೌಡ ಅವರು ನಿರ್ಮಿಸಿದ್ದರು. ಹಾಗಾಗಿ ದುನಿಯಾ ವಿಜಯ್ ಅವರು ಗೆಳೆಯನ ಮದುವೆ ಪ್ರಕರಣದಲ್ಲಿ ಅವರ ಬೆನ್ನಿಗೆ ನಿಂತಿದ್ದಾರೆ.

ಲಕ್ಷ್ಮಿ ನಾಯಕ್ ಅವರು ನಿನ್ನೆ (ಮಾರ್ಚ್ 08) ರಂದು ಚಿತ್ರ ನಿರ್ಮಾಪಕ ಸುಂದರ್ ಗೌಡ ಅವರನ್ನು ಮೈಸೂರಿನಲ್ಲಿ ಮದುವೆ ಆಗಿದ್ದರು, ತಮ್ಮ ಸಂಪೂರ್ಣ ಒಪ್ಪಿಗೆಯ ಮೇರೆಗೆ ಮದುವೆ ಆಗಿದ್ದು, ಯಾರ ಒತ್ತಡವೂ ಇಲ್ಲ ಎಂದು ಅವರು ಹೇಳಿದ್ದರು.
ಈ ನಡುವೆ ಶಾಸಕ ಶಿವಮೂರ್ತಿ ನಾಯಕ್ ಅವರು ತಮ್ಮ ಮಗಳು ಕಾಣೆ ಆಗಿರುವುದಾಗಿ ಯಲಹಂಕ ಠಾಣೆಯಲ್ಲಿ ದೂರು ನಿಡಿದ್ದರು. ಶಾಸಕರ ಕುಟುಂಬಸ್ಥರು ಹಾಗೂ ಬೆಂಬಲಿಗರು ಲಕ್ಷ್ಮಿ ಹಾಗೂ ಸುಂದರ್ ಗೌಡ ಅವರಿಗಾಗಿ ಸಾಕಷ್ಟು ಹುಡುಕಾಟವನ್ನೂ ನಡೆಸಿದ್ದರು.

ಇದೀಗ ನವ ವಿವಾಹಿತರಿಗೆ ಆಕ್ಷನ್ ಸ್ಟಾರ್ ಬೆಂಬಲ ನೀಡಿದ್ದು, ಕುಟುಂಬಗಳ ಸಂಧಾನ ಕೂಡಾ ದುನಿಯಾ ವಿಜಿ ಅವರೇ ಮಾಡುವ ಸಾಧ್ಯತೆ ಇದೆ.












Click it and Unblock the Notifications