Actor Darshan: ರೇಣುಕಾಸ್ವಾಮಿ ಕೇಸ್‌: ದರ್ಶನ್‌ಗೆ ಮತ್ತೆ ಹೈಕೋರ್ಟ್ ಮೊರೆ, ಖುದ್ದು ಹಾಜರಿಗೆ ಮನವಿ!

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿ ಪ್ರದೂಷ್ ತಾನು ಮಾಫಿ ಸಾಕ್ಷಿ ಆಗುವುದಾಗಿ ತಿಳಿಸಿದ ಬೆನ್ನಲ್ಲೆ ಪ್ರಮುಖ ಆರೋಪಿ ನಟ ದರ್ಶನ್‌ ತೂಗುದೀಪ್‌ಗೆ ಮತ್ತೊಂದು ಸಂಕಷ್ಟ ಎದುರಾಗಿತ್ತು. ಮಾಫಿ ಸಾಕ್ಷಿ ಪಡೆಯುವ ಕುರಿತು ಹೈಕೋರ್ಟ್‌ನಿಂದ ಆದೇಶ ಬರಬೇಕಿದೆ. ಈ ನಡುವೆ ನಟ ದರ್ಶನ್ ಮತ್ತೊಂದು ರಿಟ್ ಅರ್ಜಿ ಸಲ್ಲಿಸುವ ಮೂಲಕ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಆರೋಪಿಗಳ ವಿಚಾರಣೆಯನ್ನು ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ನಡೆಯುತ್ತಿದ್ದು, ಪ್ರದೂಷ್ ಮಾಫಿ ಸಾಕ್ಷಿಯ ಹೇಳಿಕೆ ನೀಡುವುದಾಗಿ ತಿಳಿಸಿದ ಬೆನ್ನಲ್ಲೇ ನಟ ದರ್ಶನ್ ಅವರು, ಹೇಳಿಕೆ ನೀಡಲು, ಕೇಳಿಸಿಕೊಳ್ಳಲು ನಮಗೆ ಖುದ್ದು ಕೋರ್ಟ್‌ಗೆ ಹಾಜರಾಗಲು ಆದೇಶಿಸುವಂತೆ ಕೋರಿದ್ದ ಅರ್ಜಿಯನ್ನು 59 ನೇ ಸಿಸಿಹೆಚ್ ನ್ಯಾಯಾಯಲ ತಿರಸ್ಕರಿಸಿತ್ತು. ಬಳಿಕ ಅವರು ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಈ ಅರ್ಜಿ ವಿಚಾರಣೆಗೆ ದಿನ ನಿಗದಿ ಆಗಬೇಕಿದೆ.

Actor Darshan

ಖುದ್ದು ಹಾಜರಾತಿಗೆ ಜೈಲಾಧಿಕಾರಿಗಳಿಗೆ ನಿರ್ದೇಶಿಸಲು ಕೋರಿಕೆ

ಖುದ್ದು ಹಾಜರಿಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಸಾಕ್ಷ್ಯ ವಿಚಾರಣೆ ವೇಳೆ ಖುದ್ದಾಗಿ ಹಾಜರುಪಡಿಸಲು ಜೈಲಾಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದಾರೆ. ಸಾಕ್ಷ್ಯ ವಿಚಾರಣೆ ಆಲಿಸುವುದು, ವೀಕ್ಷಿಸುವುದು ತಮ್ಮ ಹಕ್ಕು ಎಂದಿರು ಅವರು, ಆರೋಪಿಯ ಸಮಕ್ಷಮದಲ್ಲಿ ಸಾಕ್ಷಿ ತನ್ನ ಹೇಳಿಕೆಯನ್ನು ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಜೈಲಲ್ಲಿ ತಾಂತ್ರಿಕ ಅಡಚಣೆ ಇದೆ: ದರ್ಶನ್

ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ವೇಳೆ ತಮಗೆ ಒಂದಷ್ಟು ಸಮಸ್ಯೆ ಆಗುತ್ತಿದೆ. ವಕೀಲರೊಂದಿಗೆ ಆರೋಪಿ ನೇರ ಸಂವಹನಕ್ಕೆ ಸೂಕ್ತ ವ್ಯವಸ್ಥೆಗಳಿಲ್ಲ. ಪರಪ್ಪನ ಅಗ್ರಹಾರ ಜೈಲು ಹಾಗೂ ಕೋರ್ಟ್ ನಲ್ಲಿ ಸೂಕ್ತ ಉಪಕರಣಗಳಿಲ್ಲ. ತಾಂತ್ರಿಕ ಉಪಕರಣಗಳನ್ನು ಇನ್ನೂ ಉನ್ನತೀಕರಿಸಲಾಗಿಲ್ಲ ಇದರಿಂದ ಸಮಸ್ಯೆ ಆಗುತ್ತಿದೆ. ಹೀಗಾಗಿ ನಮಗೆ ಖುದ್ದು ಹಾಜರಾತಿಗೆ ಅವಕಾಶ ನೀಡಲು ಸೂಚಿಸುವಂತೆ ಅವರು ಅರ್ಜಿಯಲ್ಲಿ ಕೇಳಿದ್ದಾರೆ.

ಸೆಷೆನ್ಸ್ ಕೋರ್ಟ್ ಆದೇಶ ರದ್ದತಿಗೆ ಮನವಿ

ವಿಡಿಯೋ ಕಾನ್ಫ್‌ರೆನ್ಸ್ ನಲ್ಲಿ ತಾಂತ್ರಿಕ ಅಡಚಣೆಗಳಿದ್ದು, ಕಾಲಕಾಲಕ್ಕೆ ನಮ್ಮ ವಕೀಲರಿಗೆ ಸೂಚನೆಗಳನ್ನು ನೀಡಲಾಗುತ್ತಿಲ್ಲ. ಈ ಪ್ರಕರಣವು 2024 ಜುಲೈ 1ಕ್ಕಿಂತ ಮೊದಲ ನಡೆದಿರುವ ಹಿನ್ನೆಲೆಯ ಈ ಹಿಂದಿದ್ದ ಹಳೆಯ ಅಪರಾಧ ಪ್ರಕ್ರಿಯಾ ಸಂಹಿತೆ(ಸಿಆರ್​ಪಿಸಿ) ನಿಯಮಗಳೇ ಅನ್ವಯವಾಗುತ್ತವೆ. ಆಗಸ್ಟ್ 17ರಂದು ವಿಚಾರಣಾ ನ್ಯಾಯಾಲಯ ಹೊರಡಿಸಿದ ಆದೇಶ ರದ್ದುಗೊಳಿಸಿ, ಮುಂದಿನ ಎಲ್ಲ ವಿಚಾರಣೆ ವೇಳೆ ನನ್ನನ್ನು ಖುದ್ದು ಹಾಜರುಪಡಿಸಲು ಜೈಲಾಧಿಕಾರಿಗಳಿಗೆ ಸೂಚಿಸಬೇಕು ಎಂದು ದರ್ಶನ್ ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+