ಆರು ದಿನ ಪೊಲೀಸ್‌ ಕಸ್ಟಡಿಗೆ ದರ್ಶನ್‌: ಕೋರ್ಟ್‌ ಹಾಲ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ 'ಡೇವಿಲ್‌'

ನಟ ದರ್ಶನ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಇಂದು ಅವರನ್ನು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಲಾಯಿತು. ಈ ವೇಳೆ ದರ್ಶನ ಪರ ಹಾಗೂ ದರ್ಶನ ವಿರುದ್ಧ ಪ್ರತಿ ವಾದಗಳು ನಡೆದವು. ನ್ಯಾಯಾಧೀಶರು ವಾದ ಪ್ರತಿವಾದನವನ್ನು ಆಲಿಸಿ ನಟ ದರ್ಶನ್‌ರನ್ನು ಆರು ದಿನ ಪೋಲಿಸ್‌ ಕಸ್ಟಡಿಗೆ ನೀಡಿದ್ದಾರೆ.

ಜಡ್ಜ್‌ ಎದುರು ಎ.1 ಪವಿತ್ರಾ ಹಾಗೂ ಎ.2 ದರ್ಶನ ಬಳ ಬಳನೆ ಕಣ್ಣೀರು ಇಟ್ಟರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 13 ಜನ ಕೋರ್ಟ್‌ಗೆ ಹಾಜರಾದರು. ಈ ವೇಳೆ ದರ್ಶನ ಜಡ್ಜ್‌ ಎದುರು ಕೈ ಕಟ್ಟಿ ನಿಂತಿದ್ದರು. ಕೋರ್ಟ್‌ನಲ್ಲಿ ಪೊಲೀಸರು ಮೊಬೈಲ್‌ ಡಾಟಾ ಸಂಗ್ರಹಿಸಬೇಕು, ಕೃತ್ಯಕ್ಕೆ ಬಳಸಿದ ವೆಪನ್‌ ಸಂಗ್ರಹಿಸಬೇಕು ಎಂದು ವಾದಿಸಿದರು. ಅಲ್ಲದೆ ಇವರನ್ನು ಬಿಟ್ಟರೆ ಸಾಕ್ಷಿ ನಾಶ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

Actor Darshan in police custody He Cried in front of judge

ಕೋರ್ಟ್‌ನಲ್ಲಿ ವಾದ ಪ್ರತಿವಾದಗಳು ನಡೆಯುತ್ತಿದ್ದರೆ ಇತ್ತ ದರ್ಶನ್ ಕೋರ್ಟ್‌ ಹಾಲಿನಲ್ಲಿ ಕಣ್ಣೀರು ಹಾಕಿದರು. ಅರೆಸ್ಟ್ ಆಗಿದ್ದರ ಬಗ್ಗೆ ಮನೆಯವರಿಗೆ ಮಾಹಿತಿ ಕೊಟ್ರಾ? ವಕೀಲರನ್ನು ನೇಮಿಸಕೊಂಡ್ರಾ? ಪೊಲೀಸರು ಏನಾದ್ರೂ ತೊಂದರೆ ಕೊಟ್ರಾ ಎನ್ನುವ ಹಲವು ಪ್ರಶ್ನೆಗಳನ್ನು ದರ್ಶನ್‌ಗೆ ಜಡ್ಜ್‌ ಕೇಳಿದ್ದಾರೆ.

ನ್ಯಾಯಾಧೀಶರ ಮುಂದೆ ಹಾಜರು ಪಡಿಸುವಾಗ ಪೊಲೀಸರು ಕಸ್ಟಡಿಗೆ ಕೇಳಿ ರಿಮ್ಯಾಂಡ್‌ ಅರ್ಜಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ವಾದ ಮಂಡಿಸಿ 14 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಕೊಲೆಯಾದ ಸ್ಥಳ ಮಹಜರು ಮಾಡಬೇಕಿದೆ. ಹಾಗಾಗಿ 14 ದಿನ ಕಸ್ಟಡಿಗೆ ನೀಡುವಂತೆ ಮನವಿಯನ್ನು ಸಲ್ಲಿಸಲಾಗಿತ್ತು. ಇನ್ನು ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ಪೊಲೀಸರು ಅರ್ಜಿಯನ್ನು ಸಲ್ಲಿಸಿದರು.

ದರ್ಶನ ಪರ ವಕೀಲ 14 ದಿನ ಪೊಲೀಸ್‌ ಕಸ್ಟಡಿಗೆ ಏಕೆ ಬೇಕು. ಈಗಾಗಲೇ ದರ್ಶನ ಮೊಬೈಲ್ ಸೀಜ್ ಆಗಿದೆ. ಅವರಿಗೆ ಕಿರುಕುಳ ನೀಡಬಾರದು. ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂದು ಮನವಿಯನ್ನು ಸಹ ಮಾಡಿದ್ದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು, ಆರು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು.

ನ್ಯಾಯಾಲಯಕ್ಕೆ ಹಾಜರು ಪಡಿಸುವ ಮುನ್ನ ದರ್ಶನರನ್ನು ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ನಟ ದರ್ಶನ, ಸೇರಿದಂತೆ 13 ಜನರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಯಾರಿಗೂ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂದು ಬೌರಿಂಗ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+