ನಟ ದರ್ಶನ್, ಭವಾನಿ, ಪ್ರಜ್ವಲ್, ಸೂರಜ್ ರೇವಣ್ಣ ಫೋಟೋ ಭಾರೀ ವೈರಲ್
Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಈ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ, ಎ2 ಆರೋಪಿ ನಟ ದರ್ಶನ್ ಹಾಗೂ ಪಟಲಾಂ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿದೆ. ಅಲ್ಲದೆ, ನಟ ದರ್ಶನ್‌ನ ಒಂದೊಂದೇ ಕರಾಳ ಕೃತ್ಯಗಳುಗಳು ಬಯಲಾಗುತ್ತಲೇ ಇವೆ. ಇನ್ನು ಮತ್ತೊಂದೆಡೆ ಭವಾನಿ ರೇವಣ್ಣ, ಪ್ರಜ್ವಲ್, ಸೂರಜ್ ರೇವಣ್ಣ ಜೊತೆ ಇರುವ ನಟ ದರ್ಶನ್‌ನ ಹಳೆಯ ಫೋಟೋ ಭಾರೀ ವೈರಲ್ ಆಗುತ್ತಿದೆ.
ಕೆಲವು ದಿನಗಳ ಹಿಂದೆಯಷ್ಟೇ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ್ದಾರೆ ಎನ್ನುವ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಬಂಧನಕ್ಕೊಳಗಾಗಿದ್ದರು. ನಂತರ ಪ್ರಜ್ವಲ್ ರೇವಣ್ಣ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿದ್ದು, ಈ ಬೆನ್ನಲ್ಲೇ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣಗೂ ಎಸ್‌ಐಟಿ ನೋಟಿಸ್ ಕೊಟ್ಟು ಬಂಧನಕ್ಕೆ ಮುಂದಾಗಿದ್ದು, ಬಳಿಕ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಇದರ ನಡುವೆಯೇ ಅತ್ಯಾಚಾರ ಕೇಸ್‌ನಲ್ಲಿ ಸೂರಜ್ ರೇವಣ್ಣನ ಬಂಧನವಾಗಿದೆ.

ಹೀಗೆ ಎಚ್.ಡಿ.ರೇವಣ್ಣ ಅವರ ಕುಟುಂಬದವರಿಗೆ ಒಂದಲ್ಲ ಒಂದು ಸಂಕಷ್ಟಗಳು ಎದುರಾಗುತ್ತಲೇ ಇವೆ. ಇದರ ನಡುವೆಯೇ ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಸೇರಿರುವ ದರ್ಶನ್ ಅವರ ಪೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ಫೋಟೊವನ್ನು ಗಮನಿಸಿದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕುವ ಮುನ್ನ ನಟ ದರ್ಶನ್ ಅವರು ಎಚ್.ಡಿ.ರೇವಣ್ಣ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಸೂರಜ್ ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣನ ಜೊತೆ ನಟ ದರ್ಶನ್ ಫೋಟೋ ತೆಗೆಸಿಕೊಂಡಿದ್ದು, ಈ ಹಳೇ ಫೋಟೋ ದರ್ಶನ್ ಪರಪ್ಪನ ಅಗ್ರಹಾರ ಸೇರುತ್ತಿದ್ದಂತೆ ವೈರಲ್ ಆಗುತ್ತಿದೆ.
ನಟ ದರ್ಶನ್ ಹೇಳಿದ್ದೇನು?: ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್ ಪಟಲಾಂ ಈಗಾಗಲೇ ಜೈಲು ಪಾಲಾಗಿದ್ದಾರೆ. ಇನ್ನು ನಿನ್ನೆ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಪರಪ್ಪನ ಅಗ್ರಹಾರದತ್ತ ಕೊರೆದೊಯ್ಯುವಾದ ನಟ ದರ್ಶನ್ ಪೊಲೀಸ್ ವ್ಯಾನ್‌ನಲ್ಲಿಯೇ ಅಭಿಮಾನಿಗಳ ಕಡೆ ತಿರುಗಿ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದು, ಈ ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ. ಹಾಗಾದರೆ ದರ್ಶನ್ ಏನು ಹೇಳಿದ್ದಾನೆ ಎಂದು ಇಲ್ಲಿ ತಿಳಿಯಿರಿ.
ಪೊಲೀಸ್ ಕಸ್ಟಡಿ ಅಂತ್ಯವಾಗುವವರೆಗೂ ಸುಮ್ಮನಿದ್ದ "ದಾಸ" ನಿನ್ನೆ (ಜೂನ್ 23) ಪೊಲೀಸ್ ಕಸ್ಟಡಿ ಮುಗಿದ ಬಳಿಕ ಮೊದಲ ಬಾರಿಗೆ ಅಭಿಮಾನಿಗಳ ನೋಡಿ ಪ್ರತಿಕ್ರಿಯೆ ನೀಡಿರುವ ವಿಡಿಯೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸತತ 12 ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ದರ್ನ್‌ನನ್ನು ಪೊಲೀಸರು ನಿನ್ನೆ (ಜೂನ್ 22) ಬೆಂಗಳೂರಿನ 5ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ದರ್ಶನ್ & ಗ್ಯಾಂಗ್ ಅನ್ನು 12 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು.
ಇನ್ನು ನಟ ದರ್ಶನ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಪೊಲೀಸರು ವ್ಯಾನ್‌ನಲ್ಲಿ ಪರಪ್ಪನ ಅಗ್ರಹಾರಕ್ಕೆ ಈ ದರ್ಶನ್ & ಗ್ಯಾಗ್ ಅನ್ನು ಕರೆದೊಯ್ಯುತ್ತಿದ್ದರು. ಈ ವೇಳೆ ನಟ ದರ್ಶನ್ ಪೊಲೀಸ್ ವ್ಯಾನ್‌ನಲ್ಲೇ ಮೊದಲ ಬಾರಿಗೆ ತಮ್ಮ ಅಭಿಮಾನಿಗಳತ್ತ ಕೈಬೀಸಿ ಮಾತನಾಡಿದ್ದಾರೆ. ನನಗೇನು ಆಗುವುದಿನಲ್ಲ, ಆರಾಮಗಿದ್ದೇನೆ ಎಂದು ಹೇಳುವ ಮೂಲಕ ಪ್ಲೈಯಿಂಗ್ ಕಿಸ್ ಕೊಟ್ಟಿರು ವಿಡಿಯೋ ಭಾರೀ ವೈರಲ್ ಆಗುತ್ತಿದೆ.












Click it and Unblock the Notifications