Bengaluru Weather: ನಗರಕ್ಕೆ 4 ದಿನ ವ್ಯಾಪಕ ಮಳೆ ಎಚ್ಚರಿಕೆ, ಹವಾಮಾನ ಮುನ್ಸೂಚನೆ ವರದಿ

ಬೆಂಗಳೂರು, ಜನವರಿ 27: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಳಿ ಹವಾಮಾನದ ಏರಿಳಿತ ಮುಂದುವರಿದಿದೆ. ಒಣ ಹವೆ ಜೊತೆಗೆ ತೀವ್ರ ಚಳಿ ದಾಖಲಾಗುತ್ತಿದೆ. ಈ ಮಧ್ಯೆ ಮೂರರಿಂದ ನಾಲ್ಕು ದಿನ ವ್ಯಾಪಕ ಮಳೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿನ ಜನರು ಈ ವಾರ ಮಳೆಗಾಲ, ಬೇಸಿಗೆ ಮತ್ತು ಚಳಿಗಾಲ ಒಟ್ಟೊಟ್ಟಿಗೆ ಅನುಭವಿಸಲಿದ್ದಾರೆ. ಮುಂದಿನ ಎರಡು ದಿನ ವ್ಯಾಪಕ ಚಳಿ ಆವರಿಸುವ ಸಾಧ್ಯತೆ ಇದ್ದು, ನಂತರ ಸಾಧಾರಣದಿಂದ ಭಾರೀ ಮಳೆ ಸುರಿಯುವ ಮುನ್ಸೂಚನೆ ಇದೆ.

ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟ ಪ್ರಕಾರ, ಜನವರಿ 29ರವರೆಗೆ ನೀಲಿ ಆಕಾಶ, ಬೆಳಗ್ಗೆ ಮತ್ತು ರಾತ್ರಿ ಮಂಜಿನ ವಾತಾವರಣ ಕಂಡು ಬರಲಿದೆ. ನಂತರ ಜನವರಿ 30ರಿಂದ ಫೆಬ್ರವರಿ 2ರವರೆಗೆ ಬೆಂಗಳೂರಿನಲ್ಲಿ ವ್ಯಾಪಕ ಮಳೆ ಸುರಿಯುವ ಸಾಧ್ಯತೆ ಇದೆ. ಮಳೆ ಎದುರಾಗುವ ಹೊತ್ತಿಗೆ ಮಂಜು ಇಳಿಕೆ ಆಗಿ, ಮೋಡ ಕವಿದ ವಾರಾವರಣ ಸೃಷ್ಟಿಯಾಗಲಿದೆ.

Across Bengaluru will See Heavy Rain 3 days from Jan 31st to Feb 2nd Weather Forecast

ಮುಂದಿನ ಕೆಲ ದಿನ ತಾಪಮಾನ ಹೇಗಿರಲಿದೆ?

ನಗರದಲ್ಲಿ ಸದ್ಯ ಕನಿಷ್ಠ 14-15 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರುತ್ತಿದೆ. ಸೋಮವಾರ ಇದು 16 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಆಗಿದೆ. ತಾಪಮಾನವು ಸಹಜ ಸ್ಥಿತಿಗೆ ಬರುತ್ತಿದ್ದಂತೆ ಮಳೆಯು ನಗರಾದ್ಯಂತ ಆವರಿಸಿಕೊಳ್ಳಲಿದೆ. ಈ ವೇಳೆ ನಗರದ ತಾಪನಾನ ಕನಿಷ್ಠ 16 ಮತ್ತು ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಐಎಂಡಿ ವರದಿ ತಿಳಿಸಿದೆ.

ಈಗಷ್ಟೇ ಬಂಗಾಳಕೊಲ್ಲಿ ಸಮುದ್ರದ ಮೇಲ್ಮೈನಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದ ತೀವ್ರತೆ ಇಳಿಕೆ ಆಗಿತ್ತು. ಅದರ ಬೆನ್ನಲ್ಲಿ ಉಂಟಾದ ಸ್ಟ್ರಫ್, ಸುಳಿಗಾಳಿ ಫೆಬ್ರವರಿ ಹೊತ್ತಿಗೆ ಮತ್ತಷ್ಟು ತೀವ್ರತೆ ಪಡೆಯಲಿದೆ. ಆಗ ಉಂಟಾಗುವ ಹವಾಮಾನ ವೈಪರಿತ್ಯಗಳ ತೀವ್ರ ಸ್ವರೂಪದ ಪ್ರಭಾವವು ಮಳೆಗೆ ಕಾರಣವಾಗುತ್ತದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಒಟ್ಟು ನಾಲ್ಕು ದಿನ ಮಳೆ ಆಗಲಿದೆ. ಇನ್ನೇನು ಮಳೆ ಕಡಿಮೆ ಆಯಿತು ಎಂದುಕೊಂಡಿದ್ದ ಜನರಿಗೆ ಐಎಂಡಿ ಮುನ್ಸೂಚನೆ ಆಘಾತ ನೀಡಿದೆ. ಚಳಿಗೆ ತತ್ತರಿಸಿದ್ದ ಜನರು ಅನಾರೋಗ್ಯದ ಬಗ್ಗೆ ಆತಂಕದಲ್ಲಿದ್ದರು. ಇದೀಗ ಜಿಟಿ ಜಿಟಿ ಮಳೆ ಹಿಡಿದುಕೊಂಡರೆ ಮತ್ತೆ ಅನಾರೋಗ್ಯಕ್ಕೆ ತುತ್ತಾಗಬಹುದು ಎಂಬ ಚಿಂತೆ ಕಾಡುತ್ತಿದೆ.

ನಗರದಲ್ಲಿ ಒಂದು ವಾರದ ಹಿಂದೆ ಭಾನುವಾರ ತುಂತುರು ಮಳೆ ಆಗಿತ್ತು. ನಂತರ ಚಳಿ ತೀವ್ರವಾಗಿ ಏರಿಕೆ ಕಂಡಿತ್ತು. ಕಳೆದ ಎರಡು ದಿನಗಳಿಂದ ಚಳಿ ಸಹಜ ಸ್ಥಿತಿಗೆ ಬಂದಿದ್ದು, ಮಧ್ಯಾಹ್ನ ಶುಷ್ಕ ವಾತಾವರಣ ಸಹ ದಾಖಲಾಗುತ್ತಿದೆ. ಇದು ಜನವರಿ 29ರವರೆಗೆ ಮುಂದುವರಿಯಲಿದೆ. ನಂತರ ಮಳೆಯ ಆಗಮದಿಂದ ವಾತಾವರಣದಲ್ಲಿ ಬದಲಾವಣೆಗೆ ಜನರು ಸಾಕ್ಷಿಯಾಗಲಿದ್ದಾರೆ.

ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಮಳೆ ನಿರೀಕ್ಷೆ

ಬೆಂಗಳೂರು ಸೇರಿ ಕರ್ನಾಟಕದ 20 ಜಿಲ್ಲೆಗಳಲ್ಲಿ ಫೆಬ್ರವರಿ ಮೊದಲ ವಾರವೇ ಮಳೆಯ ಆರ್ಭಟ ಕಂಡು ಬರಲಿದೆ. ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಮಲೆನಾಡು ಭಾಗದ ಎಲ್ಲ ಜಿಲ್ಲೆಗಳಲ್ಲೂ ಮಳೆ ಆಗಲಿದೆ. ಕೆಲವೆಡೆ ಸಾಧಾರಣ ಮಳೆ, ಮತ್ತೆ ಕೆಲವು ಕಡೆಗಳಲ್ಲಿ ವ್ಯಾಪಕ ಮಳೆ ಸುರಿಯುವ ಲಕ್ಷಣಗಳು ಇವೆ. ಸದ್ಯ ರಾಜ್ಯದಲ್ಲಿ ಒಣಹವೆ ಪರಿಸ್ಥಿತಿ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+