Bollywood: ಐಶ್ವರ್ಯ ರೈಗೆ ಡಿವೋರ್ಸ್‌ ನೀಡುವ ಬಗ್ಗೆ ಷೇಕ್ ಬಚ್ಚನ್ ಹೇಳಿಕೆಯ ವಿಡಿಯೋ ವೈರಲ್

ಬಾಲಿವುಡ್ ತಾರಾ ದಂಪತಿ ಮತ್ತು ಹಿರಿಯ ನಟ ಅಮಿತಾಬ್ ಬಚ್ಚನ್ ಪುತ್ರ ನಟ ಅಭಿಷೇಕ್ ಬಚ್ಚನ್ ಹಾಗೂ ನಟಿ ಐಶ್ವರ್ಯ ರೈ ಅವರ ವಿಚ್ಛೇದನ ವಿಚಾರ ಆಗಾಗ ಸುದ್ದಿ ಆಗುತ್ತಲೇ ಇದೆ. ಇದೀಗ ಡಿವೋರ್ಸ ಕುರಿತು ಅಭಿಷೇಕ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಈ ಮೂಲಕ ಇಬ್ಬರ ನಡುವಿನ ಮನಸ್ತಾಪ ಅಧಿಕೃತಗೊಳುವ ಮುನ್ಸೂಚನೆ ಇದಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಹೌದು, ಸ್ಟಾರ್ ದಂಪತಿಯಾದ ಅಭಿಷೇಕ್ ಮತ್ತು ಐಶ್ವರ್ಯ ದಂಪತಿ ಮಧ್ಯೆ ಎಲ್ಲುವ ಸರಿಯಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಇದನ್ನು ನಂಬುವಂತಹ ಸಂಗತಿ ಇತ್ತೀಚೆಗೆ ನಡೆದಿತ್ತು. ಸಾವಿರಾರು ಕೋಟಿ ವೆಚ್ಚದಲ್ಲಿ ಇತ್ತೀಚೆಗೆ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರೆಟಿಗಳಿಗೆ ಆಹ್ವಾನ ನೀಡಲಾಗಿತ್ತು.

Abhishek Bachchan and Aishwarya Rai Bachchan Divorce related Video Viral

ದಂಪತಿ ಮಧ್ಯೆ ಹೊಂದಾಣಿಕೆ ಕೊರತೆ

ಈ ಮದುವೆಗೆ ಬಚ್ಚನ್ ಫ್ಯಾಮಿಲಿಗೂ ಆಹ್ವಾನ ನೀಡಲಾಗಿತ್ತು. ಈ ವೇಳೆ ನಟಿ ಐಶ್ವರ್ಯ ರೈ ಕುಟುಂಬ ಜೊತೆಗೆ ಹೋಗದೇ ಪ್ರತ್ಯೇಕವಾಗಿ ಹೋಗಿದ್ದರು. ಈ ಮೂಲಕ ಪತಿ ಮೇಲಿನ ಅಥವಾ ಬಚ್ಚನ್ ಕುಟುಂಬದೊಂದಿಗೆ ಹೊಂದಾಣಿಕೆ ಸರಿ ಇಲ್ಲ ಎಂಬುದು ಬಹಿರಂಗವಾಗಿತ್ತು.

ಈ ಘಟನೆ ಬಳಿಕ ಐಶ್ವರ್ಯ ಮತ್ತು ಅಭಿಷೇಕ್ ಮಧ್ಯೆ ಡಿವೋರ್ಸ್ ವಿಚಾರವಾಗಿ ಹಿಂದಿನಿಂದ ಇದ್ದ ಹಲವು ವದಂತಿಗಳಿಗೆ ರೆಕ್ಕೆ ಪುಕ್ಕ ಬಂದಿವೆ. ಅಲ್ಲದೇ ಅಭಿಮಾನಿಗಳು ಇದನ್ನು ವದಂತಿ ಅಲ್ಲ, ನಿಜ ಎನ್ನುತ್ತಿದ್ದಾರೆ. ಇದಕ್ಕೀಗ ಮತ್ತೋಂದು ಸೇರ್ಪಡೆ ಆಗಿದೆ. ಅದೇನೆಂದರೆ ಅಭಿಷೇಕ್ ಬಚ್ಚನ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ನಟ ಅಭಿಷೇಕ್ ಬಚ್ಚನ್ ಅವರು ತಾವು ಮತ್ತು ಪತ್ನಿ ಐಶ್ವರ್ಯಾ ಇಬ್ಬರು ವೈವಾಹಿಕ ಜೀವನ ಅಂತ್ಯಗೊಳಿಸಲು ನಿರ್ಧರಿಸಿದ್ದೇವೆ. ಇಬ್ಬರು ವಿಚ್ಛೇದನ ಪಡೆಯುತ್ತಿದ್ದೇವೆ ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿದೆ. ಮೂಲಗಳ ಪ್ರಕಾರ ಇದು ಹಳೇಯ ವಿಡಿಯೋ ಎಂದು ತಿಳಿದು ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Abhishek Bachchan and Aishwarya Rai Bachchan Divorce related Video Viral

ವಿಡಿಯೋಗೆ ಅಭಿಮಾನಿಗಳು ಹೇಳಿದ್ದೇನು?

ಅಭಿಷೇಕ್ ಬಚ್ಚನ್ ಮಾತನಾಡಿರುವ ವಿಡಿಯೋ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ವಿಡಿಯೋ ಆಗಿದೆ. ಅಭಿಷೇಕ್ ಬಚ್ಚನ್ ಮುಖ ಬಳಸಿ ಎಐ ತಂತ್ರಜ್ಞಾನದಿಂದ ಮಾಡಲಾದ ವಿಡಿಯೋ ಇದಾಗಿದೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ.

ಅಭಿಷೇಕ್ ಬಚ್ಚನ್ ಅವರು ಲೈಕ್ ಮಾಡಿದ್ದ ಹಾರ್ಟ್ ಬ್ರೋಕನ್ ಪೋಸ್ಟ್ ವೊಂದನ್ನು ಲೇಖಕಿ ಹೀನಾ ಖಂಡೇಲ್ವಾಲ್ ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಮಾಡಿದ ಪ್ರೀತಿಯು ಸುಲಭವಾಗಿ ಅಂತ್ಯಗೊಂಡಾಗ ಮದುವೆಯಾದ ಜೋಡಿಗಳು ಬೇರೆಯಾಗುತ್ತವೆ ಎಂದು ಬರೆದುಕೊಂಡಿದ್ದಾರೆ. ಏಕೆ ವಿಚ್ಛೇದನಗಳು ಹೆಚ್ಚುತ್ತಿವೆ ಎಂದು ಅವರು ಬರೆದುಕೊಂಡಿದ್ದಾರೆ.

ಸದ್ಯ ಅಭಿಷೇಕ್ ಬಚ್ಚನ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋ ಆನ್‌ಲೈನ್‌ ನಲ್ಲಿ ಹರಿದಾಡುತ್ತಿದೆ. ಐಶ್ವರ್ಯ, ಅಭಿಷೇಕ್ ಬಚ್ಚನ್ ಮಧ್ಯೆ ಯಾವುದು ಸರಿಯಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಅಭಿಮಾನಿಗಳ ಮನದಲ್ಲಿ ಇಂತಹ ಗೊಂದಲ ಇರುವಾಗಲೇ ಹಳೆಯದ್ದೋ, ಇಲ್ಲ ಎಡಿಟೆಡ್ ವಿಡಿಯೋಗಳು ಆಗಾಗ ಸದ್ದು ಮಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+