• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜನರಿಗೆ ಆರೋಗ್ಯ ಒದಗಿಸುವಲ್ಲಿ ಹಿಂದುಳಿದ ರಾಜ್ಯ ಸರ್ಕಾರ: ಎಎಪಿ

|

ಬೆಂಗಳೂರು, ಏಪ್ರಿಲ್ 2: ಕೊರೋನಾ (ಕೋವಿಡ್ 19) ಪರಿಣಾಮ ಇಡೀ ದೇಶ ಲಾಕ್ ಡೌನ್ ಆಗಿದೆ. ರಾಜ್ಯದಲ್ಲಿ ತಡವಾಗಿಯಾದರೂ ಒಂದಷ್ಟು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಜನರ ಆತಂಕವನ್ನು ದೂರ ಮಾಡಲು ಒಂದಷ್ಟು ಕ್ರಮ ತೆಗೆದುಕೊಳ್ಳಲಾಗಿದೆ ಇದು ಶ್ಲಾಘನೀಯ ವಿಚಾರ. ಆದರೆ ಇದೇ ಸಂದರ್ಭದಲ್ಲಿ ನಾವುಗಳು ವೈದ್ಯಕೀಯ ಕ್ಷೇತ್ರದಲ್ಲಿ ಎಷ್ಟು ಹಿಂದೆ ಉಳಿದಿದ್ದೇವೆ ಎನ್ನುವುದು ಸಹ ಬಟಾಬಯಲಾಗಿದೆ.

ಅತ್ಯಂತ ಹೆಚ್ಚು ಮೆಡಿಕಲ್ ಕಾಲೇಜುಗಳನ್ನು ಹೊಂದಿರುವ ಹಾಗೂ ಹೆಚ್ಚು ವೈದ್ಯರನ್ನು ಸೃಷ್ಟಿಸುತ್ತಿರುವ ಕರ್ನಾಟಕ ರಾಜ್ಯ ತನ್ನ ಜನರಿಗೆ ಉತ್ತಮ ಆರೋಗ್ಯವನ್ನು ಒದಗಿಸುವ ನಿಟ್ಟಿನಲ್ಲಿ ತೀರ ಹಿಂದೆ ಬಿದ್ದಿದ್ದು 8 ನೇ ಸ್ಥಾನದಲ್ಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಎಚ್ಚೆತ್ತುಕೊಳ್ಳದ ನಮ್ಮ ರಾಜ್ಯದ ಆರೋಗ್ಯ ಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಮಕ್ಕಳಂತೆ ಮುನಿಸಿಕೊಂಡು ಕುಳಿತಿದ್ದಾರೆ. ಇಲಾಖೆಗಳ ನಡುವೆ ಸಮನ್ವಯವನ್ನು ಸಾಧಿಸದೆ ಪರಿಸ್ಥಿತಿಯ ಲಾಭವನ್ನು ಪಡೆದು ವೈಯುಕ್ತಿಕ ಪ್ರತಿಷ್ಠೆಗಾಗಿ ಕೆಲಸ ಮಾಡುತ್ತಿರುವುದು ದುರದೃಷ್ಟಕರ.

ಜನವರಿ ತಿಂಗಳ ಕೊನೆಯಲ್ಲಿ ಕಾಣಿಸಿಕೊಂಡ ಈ ರೋಗ ಈಗ ವ್ಯಾಪಕವಾಗಿ ಹರಡಿದ್ದು, ಕೊರೊನಾ ಸೊಂಕಿಗೆ ಮೊದಲು ಬಲಿಯಾಗಿದ್ದು ನಮ್ಮ ಕರ್ನಾಟಕದ ಕಲಬುರ್ಗಿಯಲ್ಲಿ. ಗುತ್ತಿಗೆ ಆಧಾರದಲ್ಲಿ 6 ತಿಂಗಳ ಮಟ್ಟಿಗೆ ವೈದ್ಯರನ್ನು ಹಾಗೂ ಶುಶ್ರೂಷಕರನ್ನು ಸರ್ಕಾರ ನೇಮಿಸಿಕೊಳ್ಳಲು ಟೆಂಡರ್ ಕರೆದಿರುವುದು ಮಾರ್ಚ್ ತಿಂಗಳ ಕೊನೆಯಲ್ಲಿ. ಇದನ್ನು ನೋಡಿದರೆ ಆಳುವವರಿಗೆ ಇನ್ನೂ ಸಹ ರೋಗದ ಗಂಭೀರತೆ ಅರ್ಥವಾಗಿಲ್ಲ ಎನ್ನಬಹುದು.

ವೆಂಟಿಲೇಟರ್ ಬಗ್ಗೆ ಸ್ಪಷ್ಟಣೆ ಸಿಕ್ಕಿಲ್ಲ

ವೆಂಟಿಲೇಟರ್ ಬಗ್ಗೆ ಸ್ಪಷ್ಟಣೆ ಸಿಕ್ಕಿಲ್ಲ

1ಸಾವಿರ ವೆಂಟಿಲೇಟರ್‌ಗಳನ್ನು ಖರೀದಿಸುವುದಾಗಿ ಹೇಳಿದ್ದ ಸರ್ಕಾರ ಆನಂತರ ಕೇವಲ 100 ಕ್ಕೆ ಅದನ್ನು ಇಳಿಸಿದ ಉದಾಹರಣೆಯಿಂದಲೇ ನಾವು ನೋಡಬಹುದು ಯಡಿಯೂರಪ್ಪನವರ ಸರ್ಕಾರ ಎಷ್ಟು ಸಮರ್ಥವಾಗಿ ಕೆಲಸ ಮಾಡುತ್ತಿದೆ ಎಂದು.

ರಾಜ್ಯ ಹೈಕೋರ್ಟ್ ಕೊರೊನಾ (ಕೋವಿಡ್ 19) ನಿಯಂತ್ರಣಕ್ಕೆ ಏನು ಮಾಡಿದ್ದೀರಿ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ ಹಾಗೂ ಏಪ್ರಿಲ್ 3 ನೇ ತಾರೀಕಿನ ಒಳಗೆ ಸಮಗ್ರ ಯೋಜನೆಯೊಂದಿಗೆ ಬನ್ನಿ ಎಂದು ಛೀಮಾರಿ ಹಾಕಿದೆ.

ಸರ್ಕಾರಕ್ಕೆ ಚುಚ್ಚುಮದ್ದು ಬೇಕಾಗಿದೆ

ಸರ್ಕಾರಕ್ಕೆ ಚುಚ್ಚುಮದ್ದು ಬೇಕಾಗಿದೆ

ಪ್ರಾಥಮಿಕ ಆರೋಗ್ಯ ಸೇವೆ ಸಲ್ಲಿಸಲು ರಾಜ್ಯದಲ್ಲಿ ಒಟ್ಟು 8871 ಉಪ ಕೇಂದ್ರಗಳು, 2359 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 207 ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ 146 ತಾಲ್ಲೂಕು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. 41 ಸಾವಿರ ಜನ ಆಶಾ ಕಾರ್ಯಕರ್ತೆಯರು ಇದ್ದಾರೆ ಇದಕ್ಕಿಂತ ಹೆಚ್ಚಿನದಾಗಿ ಖಾಸಗಿ ಆಸ್ಪತ್ರೆಗಳಿವೆ ಆದರೂ ಸರ್ಕಾರದ ಕಾರ್ಯವೈಖರಿ ಚುರುಕುಗೊಳ್ಳದೆ ಇರುವುದು ನೋಡಿದರೆ ಸರ್ಕಾರಕ್ಕೆ ಚುಚ್ಚುಮದ್ದು ಬೇಕಾಗಿದೆ.

ಇನ್ಫೋಸಿಸ್ ಫೌಂಡೇಷನ್‍ನಿಂದ 100 ಹಾಸಿಗೆಗಳ ಕ್ವಾರಂಟೈನ್ ಸೌಲಭ್ಯ

ಸಾಮಾಜಿಕ ಆರೋಗ್ಯ ವ್ಯವಸ್ಥೆ ಬಲಗೊಳಿಸಿ

ಸಾಮಾಜಿಕ ಆರೋಗ್ಯ ವ್ಯವಸ್ಥೆ ಬಲಗೊಳಿಸಿ

ನಮ್ಮ ಆರೋಗ್ಯ ವ್ಯವಸ್ಥೆ ದಿನದಿಂದ ದಿನಕ್ಕೆ ಖಾಸಗಿ ಕ್ಷೇತ್ರದ ಮೇಲೆ ಅವಲಂಬನೆ ಕ್ರಮೇಣ ಹೆಚ್ಚುತ್ತಿದೆ. ಇದರಿಂದ ಸಾಂಕ್ರಮಿಕ ಖಾಯಿಲೆಗಳು ವ್ಯಾಪಕವಾದಾಗ ನಿಭಾಯಿಸುವುದು ಕಷ್ಟವಾಗುತ್ತದೆ. ಈಗಲಾದರೂ ಎಚ್ಚೆತ್ತುಕೊಂಡು ಸಮಗ್ರ ಸಾಮಾಜಿಕ ಆರೋಗ್ಯ ವ್ಯವಸ್ಥೆಯನ್ನು ಬಲ ಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸುತ್ತದೆ.

ಇದಲ್ಲದೇ ಆಹಾರ ಸಹಾಯ ವಾಣಿ 155214 ಹೊಣೆ ಹೊತ್ತ ಬಿಬಿಎಂಪಿ ಕ್ಷಿಪ್ರವಾಗಿ ಕಾರ್ಯ ನಿರ್ವಹಿಸದೆ ತನ್ನ ಹಳೇ ಚಾಳಿಯಲ್ಲೆ ಕೆಲಸ ಮಾಡುತ್ತಿದೆ.

ದೇಣಿಗೆ ಕೇಳುವುದು ಎಷ್ಟುಸರಿ?

ದೇಣಿಗೆ ಕೇಳುವುದು ಎಷ್ಟುಸರಿ?

ಇನ್ನೊಂದು ವಿಚಾರಕ್ಕೆ ಬಂದರೆ ರಾಜ್ಯದ ಮುಖ್ಯಮಂತ್ರಿಯೊಬ್ಬರು ಸೋಂಕು ಪೀಡಿತರಿಗೆ ಚಿಕಿತ್ಸೆ ಒದಗಿಸಲು ಹಾಗೂ ಇತರೆ ಸೌಕರ್ಯಗಳನ್ನು ನೀಡಲು ಹಣವಿಲ್ಲ ಆದ ಕಾರಣ ಸಾರ್ವಜನಿಕರ ಬಳಿ ದೇಣಿಗೆ ಕೇಳುವುದು ಎಷ್ಟು ಸರಿ?. ಆರ್ಥಿಕ ಹಿಂಜರಿತ, ಮುಗ್ಗಟ್ಟನಿಂದ ವಹಿವಾಟಿನಲ್ಲಿ ತೊಂದರೆ ಅನುಭವಿಸುತ್ತಿರುವ ಜನಸಾಮಾನ್ಯರಿಂದ ಮತ್ತೆ ಹಣವನ್ನು ಕೇಳುವುದು ಎಷ್ಟು ಔಚಿತ್ಯ ಎನ್ನವುದು ನಮ್ಮ ಪ್ರಶ್ನೆ.

ಅಲ್ಲದೆ ಕಳೆದ ವರ್ಷ ಭೀಕರ ನೆರೆ ಬಂದಾಗ ಜನರೇ ಮುಂದೆ ನಿಂತು ಲಕ್ಷಾಂತರ ರೂಪಾಯಿಗಳನ್ನು, ಆಹಾರಧಾನ್ಯಗಳನ್ನು ದಿನಬಳಕೆಯ ವಸ್ತುಗಳನ್ನು ನೀಡಿದ್ದಾರೆ ಈಗ ಮತ್ತೆ ಜನರ ಬಳಿ ದೇಣಿಗೆ ಕೇಳುತ್ತಿರುವುದನ್ನು ನೋಡಿದರೆ, ಇಂತಹ ಕಷ್ಟ ಕಾಲದಲ್ಲೂ ಜನಸಾಮಾನ್ಯರ ಜೇಬಿಗೆ ಕೈ ಹಾಕುತ್ತಿರುವುದು ರಾಜ್ಯ ಬಿಜೆಪಿ ಅವರ ಅಸಹಾಯಕತೆ ತೋರಿಸುತ್ತದೆ ಎಂದು ಆಮ್ ಆದ್ಮಿ ಪಕ್ಷದ ಜಂಟಿ ಕಾರ್ಯದರ್ಶಿ ದರ್ಶನ್ ‌ಜೈನ್

ಎಂದಿದ್ದಾರೆ.

English summary
AAP Karnataka has given suggestion to CM Yedyiruppa about the measure to be taken in order to tackle Covid19 menance and to improve state health department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X