ಕೆಲಸಕ್ಕೆ ನೇಮಿಸಿಕೊಳ್ಳಲಿಲ್ಲವೆಂದು ಟಿಸಿಎಸ್ ಕ್ಯಾಂಪಸ್‌ಗೆ ಬಾಂಬ್ ಹಾಕಿರುವುದಾಗಿ ಕರೆ ಮಾಡಿದ ಮಹಿಳೆ!
ಬೆಂಗಳೂರು, ನವೆಂಬರ್ 16: ಬೆಂಗಳೂರಿನ ಟಿಸಿಎಸ್ ಕಚೇರಿಗೆ ಬಾಂಬ್ ಹಾಕಿರುವುದಾಗಿ ಬೆದರಿಕೆ ಕರೆ ಮಾಡಿದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮಾಜಿ ಉದ್ಯೋಗಿಯೊಬ್ಬರನ್ನು ಪರಪ್ಪನ ಅಗ್ರಹಾರ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಮಹಿಳೆಯನ್ನು ಬೆಳಗಾವಿಯ ಶಾಹು ನಗರದ ನಿವಾಸಿ ಶ್ರುತಿ ಶೆಟ್ಟಿ ಎಂದು ಗುರುತಿಸಲಾಗಿದೆ. ಎರಡನೇ ಬಾರಿಗೆ ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗಲೂ ಕಂಪನಿಯು ತನ್ನನ್ನು ನೇಮಿಸಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಆಕೆ ತನ್ನ ತಾಯಿಯ ಫೋನ್‌ನಿಂದ ಬಾಂಬ್ ಹಾಕಿರುವುದಾಗಿ ಕರೆ ಮಾಡಿದಳು ಎಂದು ಒಪ್ಪಿಕೊಂಡಿದ್ದಾಳೆ.

ಕ್ಯಾಂಪಸ್‌ನಿಂದ ಓಡಿದ ನೌಕರರು:
ಟಿಸಿಎಸ್ ಕ್ಯಾಂಪಸ್‌ನಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಉದ್ಯೋಗಿಗಳಿಗೆ ಬೆದರಿಕೆ ಕರೆ ಬಂದ ನಂತರ ಹೊರ ಹೋಗುವಂತೆ ಸೂಚನೆ ನೀಡಲಾಯಿತು. ಬಾಂಬ್ ಬೆದರಿಕೆ ಕರೆ ಕುರಿತು ಕಚೇರಿ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಬಾಂಬ್ ನಿಷ್ಕ್ರಿಯ ದಳ ಮತ್ತು ಸ್ನಿಫರ್ ಡಾಗ್‌ನೊಂದಿಗೆ ಪೊಲೀಸರು ಭೇಟಿ ನೀಡಿದರು. ಕಚೇರಿಯಲ್ಲಿ ಪರಿಶೀಲನೆ ನಡೆಸಿದಾಗ ಯಾವುದೇ ಬಾಂಬ್ ಪತ್ತೆಯಾಗಲಿಲ್ಲ. ಈ ಬಗ್ಗೆ ತನಿಖೆ ನಡೆಸಿದಾಗ ಬೆಳಗಾವಿಯಿಂದ ಕರೆ ಮಾಡಿರುವುದು ಪೊಲೀಸರಿಗೆ ಗೊತ್ತಾಯಿತು.
ಇತ್ತೀಚೆಗಷ್ಟೇ ಶೃತಿ ಶೆಟ್ಟಿಯನ್ನು ಕಂಪನಿಯಿಂದ ತಿರಿಸ್ಕರಿಸಲಾಗಿತ್ತು ಎಂದು ಗೊತ್ತಾಯಿತು. ಶೆಟ್ಟು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದಳು. ಅಲ್ಲದೆ ಟಿಸಿಎಸ್‌ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಳು. ಆದರೆ ಕಂಪೆನಿಯವರು ಆಕೆಯನ್ನು ಕೆಲಸಕ್ಕೆ ತೆಗೆದುಕೊಂಡಿರಲಿಲ್ಲ.
2023 ರಲ್ಲಿ ಎರಡೆರಡು ಕರೆ:
ಮೇ ತಿಂಗಳಲ್ಲಿ ಹೈದರಾಬಾದ್‌ನ ಟಿಸಿಎಸ್ ಕ್ಯಾಂಪಸ್‌ಗೆ ಮಾಜಿ ಉದ್ಯೋಗಿಯೊಬ್ಬರಿಂದ ಹುಸಿ ಬಾಂಬ್ ಕರೆ ಬಂದಿತ್ತು. ಹುಸಿ ಕರೆಯನ್ನು ಬೆಂಗಳೂರಿನಿಂದ ಮಾಡಲಾಗಿತ್ತು. ಬೆದರಿಕೆ ಕರೆ ಬಂದಾಗ ಕಂಪನಿಯು ಕೆಲಸ ಮಾಡುತ್ತಿದ್ದ 1,500 ಉದ್ಯೋಗಿಗಳನ್ನು ಕ್ಯಾಂಪಸ್‌ನಿಂದ ಹೊರ ಹೋಗುವಂತೆ ಸೂಚಿಸಿತ್ತು.












Click it and Unblock the Notifications