ಕೊರೊನಾ ವೈರಸ್ ಹತ್ತಿಕ್ಕಲು ಲಸಿಕೆ ಸಿದ್ದ ಎಂದ ವೈದ್ಯರು
ಬೆಂಗಳೂರು, ಮಾರ್ಚ್ 27: ಕೊರೊನಾ ವೈರಸ್‌ಗೆ ಮದ್ದು ಅರಿಯಲು ವೈದ್ಯರು ವಿಜ್ಞಾನಿಗಳು ದಿನನಿತ್ಯ ತಲೆ ಕಡೆಸಿಕೊಳ್ಳುತ್ತಿದ್ದಾರೆ. ಈ ಮಾರಕ ವೈರಸ್‌ಗೆ ಎಚ್‌ಐವಿ ವೈರಾಣು ಕೊಲ್ಲಲು ಬಳಸುವ ಲಸಿಕೆ ಹಾಗೂ ಮಲೇರಿಯಾಗೆ ಬಳಸುವ ಲಸಿಕೆಯನ್ನು ಬಳಸಬಹುದು ಎಂದು ಹೇಳಲಾಗುತ್ತಿದೆ.
Recommended Video
ಆದರೆ, ಇದಕ್ಕೆ ಇನ್ನೂ ಅಂತಿಮ ಹಸಿರು ನಿಶಾನೆ ಸಿಕ್ಕಿಲ್ಲ. ಆದರೆ, ಕೊರೊನಾ ವೈರಸ್ ಮಾನವ ದೇಹದಲ್ಲಿ ಹೋಗಿ, ಅವನ ರೋಗನಿರೋಧಕ ಶಕ್ತಿಯನ್ನು ಹಾಳು ಮಾಡುವುದನ್ನು ತಡೆಗಟ್ಟಲು ಲಸಿಕೆ ಕಂಡು ಹಿಡಿಯಲಾಗಿದೆ ಎಂದು ಖ್ಯಾತ ಗ್ರಂಥಿಶಾಸ್ತ್ರಜ್ಞರೊಬ್ಬರು ತಿಳಿಸಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎಚ್‌ಸಿಜಿ ಸಮೂಹ ಆಸ್ಪತ್ರೆಗಳ ವೈದ್ಯ ಡಾ ವಿಶಾಲ್ ರಾವ್ ಅವರು ಎಎನ್‌ಐ ನೊಂದಿಗೆ ಮಾತನಾಡಿ, ಮಾನವ ಶರೀರದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕೊರೊನಾ ವೈರಸ್ ಕೊಂದು ಹಾಕುತ್ತದೆ. ಇದು ಮಾನವ ದೇಹದ concoction of cytokines ನ್ನು ಕೊರೊನಾ ವೈರಸ್ ಹಾಳು ಮಾಡುತ್ತದೆ. ಈ concoction of cytokines ನ್ನು ಮಾನವ ದೇಹದಲ್ಲಿ ಹೆಚ್ಚಿಸಲು ಲಸಿಕೆಯನ್ನು ಕಂಡು ಕೊಂಡಿದ್ದೇವೆ ಎಂದಿದ್ದಾರೆ.
#WATCH We have built a concoction of cytokines which can be injected to reactivate the immune system in #COVID19 patients. We're in a very initial stage&hope to be ready with its first set by this weekend. We have applied to the govt for an expedited review: Oncologist Vishal Rao pic.twitter.com/vymRyTrL0R
— ANI (@ANI) March 27, 2020

ನಮ್ಮ ಸಂಶೋಧನೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಇದನ್ನು ಬಳಸಲು ನಾವು ಸಿದ್ದರಿದ್ದೇವೆ. ಇನ್ನೂ ಅಂತಿಮ ಮುದ್ರೆ ಸಿಕ್ಕಿಲ್ಲ. ಸರ್ಕಾರ ಇದಕ್ಕೆ ಒಪ್ಪಿಗೆ ಕೊಡುತ್ತದೆ ಎನ್ನುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications