ಬಿಎಂಟಿಸಿ ಕಂಡಕ್ಟರ್‌ಗೆ ಚಾಕುವಿನಿಂದ ಚುಚ್ಚಿದ ವಲಸಿಗ, ಕಾರಣ ಕೇಳಿ ಎಲ್ಲರೂ ಶಾಕ್!
ಬೆಂಗಳೂರಿನತ್ತ ಬರುತ್ತಿರುವ ವಲಸಿಗರ ದಂಡನ್ನು ತಡೆಯಬೇಕು ಎಂದು ಮೊದಲಿನಿಂದಲೂ ಒತ್ತಾಯ ಕೇಳಿಬರುತ್ತಿದೆ. ಇತ್ತೀಚೆಗೆ ಹೊರರಾಜ್ಯಗಳಿಂದ ಬಂದಿರುವವರಿಂದ ಅಪರಾಧ ಕೃತ್ಯಗಳು ಕೂಡ ಹೆಚ್ಚಾಗುತ್ತಿವೆ. ಇದೀಗ ವಲಸಿಗನೊಬ್ಬ ಹಾಡಹಗಲೇ ಬಿಎಂಟಿಸಿ ವೋಲ್ವೋ ಬಸ್ ಕಂಡಕ್ಟರ್‌ಗೆ ಚಾಕುವಿನಿಂದ ಇರಿದು ಅಟ್ಟಹಾಸ ಮೆರೆದಿದ್ದಾನೆ.
ನಿನ್ನೆ ಸಂಜೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವೈಟ್‌ಫೀಲ್ಡ್ ವ್ಯಾಪ್ತಿಯ ವೈದೇಹಿ ಬಸ್ ನಿಲ್ದಾಣದ ಈತ ವೋಲ್ವೋ ಬಸ್ ಹತ್ತಿಕೊಂಡಿದ್ದ. ಆದರೆ, ಒಳಗೆ ಹೋಗದೆ ಈತ ಪ್ರವೇಶದ್ವಾರದಲ್ಲೇ ನಿಂತಿದ್ದ. ಇದನ್ನು ಪ್ರಶ್ನಿಸಿದ ಕಂಡಕ್ಟರ್, ಬಸ್ ಒಳಭಾಗಕ್ಕೆ ಹೋಗುವಂತೆ ಹೇಳಿದ್ದರು. ಇದರಿಂದ ಕೋಪಗೊಂಡ ಪ್ರಯಾಣಿಕ ಚಾಕು ತೆಗೆದು, ಕಂಡಕ್ಟರ್ ಯೋಗೇಶ್ ಅವರ ಹೊಟ್ಟೆ ಭಾಗಕ್ಕೆ ಎರಡು ಮೂರು ಬಾರಿ ಚುಚ್ಚೇಬಿಟ್ಟಿದ್ದಾನೆ.

ಬಸ್‌ನಲ್ಲಿ ಇದನ್ನು ಕಣ್ಣಾರೆ ಕಂಡವ ಸಹ ಪ್ರಯಾಣಿಕರು ಬೆಚ್ಚಿಬಿದ್ದು, ಬಸ್‌ನಿಂದ ಇಳಿದು ಓಡಿದ್ದಾರೆ. ಬಳಿಕ ಆತ ಬಸ್ಗಾಜು ಪುಡಿ ಮಾಡುತ್ತಾ ಹುಚ್ಚನಂತೆ ವರ್ತಿಸಿದ್ದಾನೆ. ಈ ವೇಳೆ ಅಲ್ಲಿದ್ದವರು ಜೋರಾಗಿ ಕೂಗಾಟ ನಡೆಸಿದ್ದರಿಂದ ಹೆದರಿ ಅಲ್ಲಿಂದ ಎಸ್ಕೇಪ್ ಆಗಲು ಮುಂದಾಗಿದ್ದ. ಕೂಡಲೇ ಅಲ್ಲಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ವೈಟ್‌ಫೀಲ್ಡ್ ಪೊಲೀಸರು ಎಂಟ್ರಿ ಕೊಟ್ಟು ಆತನನ್ನು ವಶಕ್ಕೆ ಪಡೆದಿದ್ದಾರೆ.
ಚಾಕು ಇರಿತದಿಂದ ಪ್ರಾಣಾಪಾಯದಲ್ಲಿದ್ದ ಕಂಡಕ್ಟರ್ ಯೋಗೇಶ್ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ. ಚಾಕು ಇರಿದಿದ್ದ ಪುಂಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಹರ್ಷ್ ಸಿನ್ಹ (25) ಜಾರ್ಖಂಡ್ ಮೂಲದವನು ಎಂದು ತಿಳಿದುಬಂದಿದೆ.

ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಈತ ನಿನ್ನೆ ಖಾಸಗಿ ಕಂಪನಿಯೊಂದಕ್ಕೆ ಇಂಟರ್ವ್ಯೂಗೆ ಹೋಗಿದ್ದ. ಅಲ್ಲಿ ಆತನಿಗೆ ಕೆಲಸ ಸಿಗಲಿಲ್ಲ ಎಂಬ ಕಾರಣಕ್ಕೆ ಕೋಪದಿಂದ ಬಸ್ ಹತ್ತಿದ್ದ. ನನಗೆ ಕೆಲಸ ಸಿಗುತ್ತಿಲ್ಲ. ಹಾಗಾಗಿ ಹೊರಗೆ ಇರುವ ಬದಲು ಜೈಲಿಗೆ ಹೋಗುತ್ತೇನೆ ಎಂದು ಈ ರೀತಿ ಕೊಲೆಗೆ ಮುಂದಾಗಿದ್ದಾನೆ ಎನ್ನಲಾಗಿದೆ.
ಆದರೆ, ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿ ಹರ್ಷ್ ಸಿನ್ಹ ಬೇರೆ ವಿಚಾರ ಹೇಳಿದ್ದಾನೆ. ಈತ ಕಳೆದ ತಿಂಗಳು ಬಿಪಿಒ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ ಪರ್ಫಾರ್ಮೆನ್ಸ್ ಸರಿ ಇಲ್ಲದ ಕಾರಣ ತನ್ನನ್ನು ಕಂಪನಿಯಲ್ಲಿ ಕೆಲಸದಿಂದ ಕಿತ್ತು ಹಾಕಲಾಗಿತ್ತು. ಇದೇ ವಿಚಾರಕ್ಕೆ ಮ್ಯಾನೇಜರ್ ಮೇಲೆ ಈತನಿಗೆ ಬಹಳ ಕೋಪವಿತ್ತು. ಈ ಕೋಪದಲ್ಲೇ ಈ ರೀತಿ ಮಾಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಹರ್ಷ ಸಿನ್ಹ ಎಂಬ ಜಾರ್ಖಂಡ್ ಮೂಲದ
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) October 2, 2024
ಈ ವ್ಯಕ್ತಿ ಬಿಎಂಟಿಸಿ ಕಂಡಕ್ಟರ್ ಅವರಿಗೆ ಚಾಕುವಿನಲ್ಲಿ ಚುಚ್ಚಿದ್ದಾನೆ.
ಕಂಡಕ್ಟರ್ ವೈದೇಹಿ ಆಸ್ಪತ್ರೆಯಲ್ಲಿದ್ದಾರೆ.@BMTC_BENGALURU ನಮ್ಮ ಕನ್ನಡಿಗ ಡ್ರೈವರ್ ವಿಚಾರ ಬಂದಾಗ ದಿಡೀರ್ ಕ್ರಮ ತೆಗೆದುಕೊಳ್ಳೋರು ಇದು ಕಂಡಿಲ್ಲವೇ?
ಕನ್ನಡಿಗರ ವಿಚಾರ ಅಂದಾಗ ಬಾಯಿ ಬಡಿಯೋ ಮೂರ್ಖರಿಗೆ ಇದು ಕಾಣುತ್ತಿಲ್ಲವೇ? pic.twitter.com/VGfBVqUcRi
ಇನ್ನು ಚಾಕು ಇರಿತಕ್ಕೆ ಒಳಗಾದ ಕಂಡಕ್ಟರ್ ಯೋಗೇಶ್ ಅವರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ. ಘಟನೆ ಸಂಬಂಧ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಘಟನೆಯಿಂದ ಸಿಲಿಕಾನ್ ಸಿಟಿ ಮಂದಿ ಬೆಚ್ಚಿಬಿದ್ದಿದ್ದಾರೆ. ಇಂತವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಈ ವಿಡಿಯೋ ಹಂಚಿಕೊಂಡಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, ಹರ್ಷ ಸಿನ್ಹ ಎಂಬ ಜಾರ್ಖಂಡ್ ಮೂಲದ ಈ ವ್ಯಕ್ತಿ ಬಿಎಂಟಿಸಿ ಕಂಡಕ್ಟರ್ ಅವರಿಗೆ ಚಾಕುವಿನಲ್ಲಿ ಚುಚ್ಚಿದ್ದಾನೆ. ಕಂಡಕ್ಟರ್ ವೈದೇಹಿ ಆಸ್ಪತ್ರೆಯಲ್ಲಿದ್ದಾರೆ.
ನಮ್ಮ ಕನ್ನಡಿಗ ಡ್ರೈವರ್‌ಗೆ ಇಂತಹ ಆಪತ್ತು ಎದುರಾದಾಗಲೂ ಧಿಡೀರ್ ಕ್ರಮ ತೆಗೆದುಕೊಳ್ಳೋರು ಇದು ಕಂಡಿಲ್ಲವೇ? ಕನ್ನಡಿಗರ ವಿಚಾರ ಅಂದಾಗ ಬಾಯಿ ಬಡಿಯೋ ಮೂರ್ಖರಿಗೆ ಇದು ಕಾಣುತ್ತಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ವಲಸಿಗರಿಂದ ಬೆಂಗಳೂರು ಉದ್ಧಾರ ಆಗಿದ್ದು ಸಾಕು, ಅವರು ಇಲ್ಲಿಗೆ ಬಂದು ಮಾಡುತ್ತಿರುವ ಇಂತಹ ಘನಂದಾರಿ ಕೆಲಸಗಳೂ ಸಾಕು! ಮೊದಲು ಬೆಂಗಳೂರಿಗೆ ವಲಸಿಗರನ್ನು ತಡೆಯಿರಿ. ಇಲ್ಲದಿದ್ದರೆ ಮುಂದೊಂದು ದಿನ ಬೆಂಗಳೂರಿನಲ್ಲಿ ಇವರದ್ದೇ ರೌಡಿಸಂ ಶುರುವಾಗಲಿದೆ' ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications