ನಿವೃತ್ತ ಯೋಧನಿಗೆ ಸಚಿವರ ಕಾರು ಡಿಕ್ಕಿ, ಸ್ಥಿತಿ ಗಂಭೀರ
ಬೆಂಗಳೂರು, ಅಕ್ಟೋಬರ್ 28: ಸಚಿವ ಪ್ರಭು ಚೌಹಾಣ್ ಅವರ ಕಾರು ನಿವೃತ್ತ ಯೋಧರೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಬೆಂಗಳೂರಿನ ಮೌರ್ಯ ವೃತ್ತದ ಬಳಿ ನಿವೃತ್ತ ಯೋಧ ಶ್ರೀನಿವಾಸ್ ತೆರಳುತ್ತಿದ್ದ ಸಮಯದಲ್ಲಿ ಕಾರು ಡಿಕ್ಕಿ ಹೊಡೆದಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಚಾಲಕ ಅವರನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಕಾರಿನಲ್ಲಿ ಸಚಿವರು ಇದ್ದರೋ ಇಲ್ಲವೋ ಎನ್ನುವ ಕುರಿತು ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಆದರೆ ಸೌಜನ್ಯಕ್ಕಾದರೂ ಅವರ ಆರೋಗ್ಯ ವಿಚಾರಿಸಬೇಕಿತ್ತು, ಆಸ್ಪತ್ರೆಗೆ ಭೇಟಿ ನೀಡಬೇಕಿತ್ತು ಎಂದು ನಿವೃತ್ತ ಯೋಧ ಕಣ್ಣೀರು ಹಾಕಿದ್ದಾರೆ. ಜೊತೆಗೆ ಕಾರು ಸಚಿವ ಪ್ರಭು ಚೌಹಾಣ್ ಗೆ ಸೇರಿರುವ ಕಾರಣ ಅವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಸ್ವತಃ ಶ್ರೀನಿವಾಸ್ ಅವರೇ ಹೇಳಿಕೊಂಡಿದ್ದಾರೆ.












Click it and Unblock the Notifications