ಬೆಂಕಿ ದುರಂತ ನಂತರ ಚೇತರಿಕೆಯತ್ತ ಕೆ.ಆರ್. ಮಾರ್ಕೆಟ್: ಚಿತ್ರಗಳು
Recommended Video

ಬೆಂಗಳೂರು, ಜನವರಿ 08: ನಗರದ ಕೆ.ಆರ್. ಮಾರುಕಟ್ಟೆ ಸಮೀಪದಲ್ಲಿರುವ ಕೈಲಾಶ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಸೋಮವಾರ ಬೆಳಗಿನ ಜಾವ ಅಗ್ನಿ ದುರಂತ ಸಂಭವಿಸಿದೆ. ಅವಘಡದಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದ್ದು ಇಬ್ಬರು ಬೆಂಕಿ ತಗುಲಿ ಮೃತಪಟ್ಟರೆ ಇನ್ನುಳಿದ ಮೂರು ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬೆಳಗಿನ ಜಾವ 2.30 ರ ವೇಳೆಗೆ ಅವಘಡ ಸಂಭವಿಸಿದೆ. ಘಟನೆಯಲ್ಲಿ ಸ್ವಾಮಿ, ಪ್ರಸಾದ್, ಮಹೇಶ್, ಮಂಜುನಾಥ್ ಕೀರ್ತಿ ಮೃತಪಟ್ಟವರು. ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಘಟನೆ ಸಂಭವಿಸಿದ ಸಂದರ್ಭದಿಂದ ಬಾರ್ ಮಾಲೀಕ ಹಾಗೂ ಮ್ಯಾನೇಜರ್ ಮೊಬೈಲ್ ನ್ನು ಬಂದು ಮಾಡಿಟ್ಟುಕೊಂಡಿದ್ದರು. ಪೊಲೀಸರು ಬಾರ್ ಮಾಲೀಕ ದಯಾಶಂಕರ್ ಅವರನ್ನು ಬಂಧಿಸಿದ್ದಾರೆ. ದಯಾಶಂಕರ ಪರ ವಕೀಲ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ಮೃತರ ಕುಟುಂಬಕ್ಕೆ ತಲಾ 1.5 ಲಕ್ಷ ಪರಿಹಾರ ನೀಡಿದ್ದಾರೆ. ಅಗ್ನಿ ದುರಂತದ ನಂತರ ಕೊಂಚ ಚೇತರಿಕೆ ಕಾಣುತ್ತಿದೆ.

ಅಗ್ನಿ ದುರಂತದ ಬಳಿಕ ಕೈಲಾಶ್ ಬಾರ್ ಸ್ಥಿತಿ:
ಸೋಮವಾರ ನಸುಕಿನ ಜಾವ ಕೆ.ಆರ್. ಮಾರುಕಟ್ಟೆಯ ಸಮೀಪದಲ್ಲಿರು ಕೈಲಾಶ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ನಡೆದ ಅಗ್ನಿ ದುರಂತದ ನಂತರ ರೆಸ್ಟೋರೆಂಟ್ ಸ್ಥಿತಿಯನ್ನು ನೋಡುತ್ತಾ ಸಾಗಿದ ದಾರಿಹೋಕರು.

ಅಗ್ನಿ ದುರಂತದ ಬಳಿಕ ಪೊಲೀಸರ ಭೇಟಿ:
ಕೈಲಾಶ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಸೋಮವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ಮೂರುಮಂದಿ ಮೃತಪಟ್ಟಿದ್ದಾರೆ. ನಂತರ ವಿಧಿ ವಿಜ್ಞಾನ ಪ್ರಯೋಗಾಲಯ ತಂಡದವರು ಬಂದು ಪರಿಶೀಲನೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಪೊಲೀಸರು ಸ್ಥಳೀಯರ ತನಿಖೆ ನಡೆಸುತ್ತಿರುವುದು.

ಅಗ್ನಿ ದುರಂತ ಸಂಭವಿಸಿದ ಕೈಲಾಶ್ ಬಾರ್ ಗೆ ಮೇಯರ್ ಭೇಟಿ:
ಸೋಮವಾರ ನಸುಕಿನ ಜಾವ ಬೆಂಗಳೂರಿನ ಕೈಲಾಶ್ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ನಡೆದ ಅಗ್ನಿ ದುರಂತದ ಬಳಿಕ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿರುವುದು.

ತರಕಾರಿ ತ್ಯಾಜ್ಯ ತೆರವುಗೊಳಸುತ್ತಿರುವ ಕಾರ್ಮಿಕರು:
ಸೋಮವಾರ ಬೆಳಗಿನ ಜಾವ ಕೈಲಾಶ್ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಅಗ್ನಿ ದುರಂತ ಸಂಭವಿಸಿದ ಬಳಿಕ ಬೆಳಗ್ಗೆ ಬೆಂಗಳೂರಿನ ಕೆಆರ್ ಮಾರುಕಟ್ಟೆ ಬಳಿ ಬಿಬಿಎಂಪಿ ಕಾರ್ಮಿಕರು ತರಕಾತಿ ತ್ಯಾಜ್ಯವನ್ನು ತೆರವುಗೊಳಸುವುದರಲ್ಲಿ ನಿರತರಾಗಿದ್ದರು. ಗುಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಹೊರಟಂತಾಗಿದೆ ಎಂದು ವರ್ತಕರು ಅಲವತ್ತುಕೊಳ್ಳುತ್ತಿದ್ದಾರೆ.

ಡಿಡಿಟಿ ಸಿಂಪಡಿಸುತ್ತಿರುವ ಬಿಬಿಎಂಪಿ ಕಾರ್ಮಿಕರು:
ಸೋಮವಾರ ನಸುಕಿನ ಜಾವ ಕೈಲಾಶ್ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಅಗ್ನಿ ಅನಾಹುತ ಸಂಭವಿಸಿದ ಬಳಿಕ ಬೆಳಗ್ಗೆ ಬೆಂಗಳೂರಿನ ಕೆ,.ಆರ್. ಮಾರ್ಕೆಟ್ ನ ಹೋಲ್ ಸೇಲ್ ಮಾರುಕಟ್ಟೆ ಬಳಿ ಬಿಬಿಎಂಪಿ ಕಾಮೀ್ಕರು ಡಿಡಿಟಿ ಸಿಂಪಡಿಸುವಲ್ಲಿ ನಿರತರಾಗಿರುವುದು.

ತ್ಯಾಜ್ಯ ತೆರವುಗೊಳಿಸುತ್ತಿರುವ ಯಂತ್ರ:
ಬೆಂಗಳೂರಿನಲ್ಲಿ ಪ್ರಮುಖ ಸಮಸ್ಯೆಯೇ ತ್ಯಾಜ್ಯವಾಗಿದೆ. ಅದರಲ್ಲೂ ಕೆ.ಆರ್. ಮಾರುಕಟ್ಟೆಯ ಸುತ್ತಮುತ್ತ ಪ್ರತಿನಿತ್ಯ ನೂರಾರು ಜನ ರೈತರು ತಮ್ಮ ಮಳಿಗೆಗಳನ್ನು ತೆರೆದಿರುತ್ತಾರೆ. ಅಲ್ಲಿ ಸಾಕಷ್ಟು ತ್ಯಾಜ್ಯ ಶೇಖರಣೆಯಾಗಿರುತ್ತದೆ. ಬಿಬಿಎಂಪಿ ಕಾರ್ಮಿಕರಿಗೆ ತ್ಯಾಜ್ಯ ತೆರವುಗೊಳಿಸುವುದೇ ದೊಡ್ಡ ತಲೆನೋವಾಗಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications