ಪೊಲೀಸರ ಕೈಯಲ್ಲಿ ಲಾಕ್‌ ಆದ ಕನ್ನಡದ ಖ್ಯಾತ ಯುಟ್ಯೂಬರ್‌!

ಕನ್ನಡಿಗರು ಯೂಟ್ಯೂಬ್‌ನಲ್ಲಿ ಸಖತ್‌ ಸದ್ದು ಮಾಡುತ್ತಿರುವುದು ಗೊತ್ತೇ ಇದೆ. ಅದರಲ್ಲೂ ಮೋಟೋವ್ಲಾಗಿಂಗ್‌ (motovlogging) ಸೆಗ್ಮೆಂಟ್‌ ಅಲ್ಲಂತೂ ಕನ್ನಡಿಗರು ದೊಡ್ಡ ಹೆಸರು ಮಾಡಿ, ಲಕ್ಷಾಂತರ ಮಂದಿಯನ್ನು ಅಭಿಮಾನಿಗಳನ್ನು ಕೂಡ ಸಂಪಾದಿಸಿಕೊಂಡಿದ್ದಾರೆ. ಈಗ ಇದೇ ಯೂಟ್ಯೂಬರ್‌ಗಳ ನಡುವೆ ನಡೆದಿದೆ ಎನ್ನಲಾದ ಗಲಾಟೆಯು ಕನ್ನಡದ ಖ್ಯಾತ ಯೂಟ್ಯೂಬರ್‌ ಅನ್ನು ಪೊಲೀಸ್‌ ಠಾಣೆಯವರೆಗೂ ಬರುವಂತೆ ಮಾಡಿದೆ.

ಯೂಟ್ಯೂಬ್‌ ಬಳಕೆದಾರರಿಗೆ "DV in kannada" ಅನ್ನೋ ಚಾನಲ್‌ ಗೊತ್ತೇ ಇರುತ್ತೆ. ಇದನ್ನು ನಡೆಸಿಕೊಡುವವರ ಹೆಸರು ದೀಪಕ್. ನಮ್ಮ ಬೆಂಗಳೂರಿನವರೇ ಆದ ಇವರು ಕನ್ನಡದಲ್ಲಿ ಮೋಟೋವ್ಲಾಗಿಂಗ್‌ ಮಾಡುತ್ತಾ ಹೆಚ್ಚು ಖ್ಯಾತಿ ಕೂಡ ಆಗಿದ್ದಾರೆ. ದುಬಾರಿ ಹಾಗೂ ಅಪರೂಪದ ಬೈಕ್‌ ಹಾಗೂ ಕಾರುಗಳ ಕಲೆಕ್ಷನ್‌ ಹೊಂದಿರುವ ಇವರು, ಅವುಗಳನ್ನು ರಿವ್ಯೂ ಮಾಡುತ್ತಲೇ ಯೂಟ್ಯೂಬ್‌ನಲ್ಲಿ ತನ್ನದೇ ಸಾಮ್ರಾಜ್ಯ ಕೂಡ ಕಟ್ಟಿಕೊಂಡಿದ್ದಾರೆ.

A Famous Kannada YouTuber Was Taken Into Police Custody On Charges Of Intimidation

ಇವರು ಯೂಟ್ಯೂಬ್‌ನಲ್ಲಿ ಸಖತ್‌ ಸೌಂಡ್‌ ಮಾಡ್ತಿದ್ದ ಯೂಟ್ಯೂಬರ್‌ ಕೂಡ ಹೌದು. ಆದರೆ, ಇತ್ತೀಚೆಗೆ ಕನ್ನಡದ ಯೂಟ್ಯೂಬರ್‌ಗಳ ನಡುವೆಯೇ ಯಾವುದೋ ವಿಚಾರಕ್ಕೆ ಶುರುವಾಗಿರುವ ಜಗಳವು ಇಂದು ದೀಪಕ್‌ ಅವರು ಪೊಲೀಸ್‌ ಠಾಣೆ ಮೆಟ್ಟಿಲೇರುವಂತೆ ಮಾಡಿದೆ. ಇವರು ವಿಡಿಯೋದಲ್ಲಿ ಬೇರೆ ಯೂಟ್ಯೂಬರ್‌ಗಳಿಗೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪದ ಮೇರೆಗೆ ಪೊಲೀಸರು ಇವರನ್ನು ಠಾಣೆಗೆ ಕರೆಸಿಕೊಂಡಿದ್ದಾರೆ.

ದೀಪಕ್‌ ಅವರು ಮಾತನಾಡಿದ್ದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದರಲ್ಲಿ ದೀಪಕ್‌, ಎರಡು ನಿಮಿಷ ತನ್ನ ಕುಟುಂಬವನ್ನು ಸೈಡಿಗಿಟ್ಟರೆ, ನನಗಿಂತ ದೊಡ್ಡ ರೌಡಿ ಮತ್ತೊಬ್ಬ ಇಲ್ಲ ಎಂದು ಅವಾಜ್‌ ಹಾಕಿದ್ದರು. ಆದರೆ ಇದನ್ನು ಯಾರಿಗೆ ಹೇಳಿದ್ದಾರೆ ಎನ್ನುವ ಖಚಿತ ಮಾಹಿತಿ ಇಲ್ಲ. ಆದರೆ, ದೀಪಕ್‌ ಅವರ ವೈಯಕ್ತಿಕ ವಿಚಾರವಾಗಿ ಬೇರೊಬ್ಬ ಯೂಟ್ಯೂಬರ್‌ ಮಾತನಾಡಿದ್ದರು. ಇದಕ್ಕೆ ಸಿಟ್ಟಾಗಿ ದೀಪಕ್‌ ಈ ರೀತಿ ಮಾತನಾಡಿದ್ದಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿವೆ.

ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ದೀಪಕ್‌ ಸಾರ್ವಜನಿಕವಾಗಿ ಬೆದರಿಕೆ ಹಾಕುತ್ತಿದ್ದು, ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಬೆಂಗಳೂರು ಪೊಲೀಸರಿಗೆ ವಿಡಿಯೋ ಟ್ಯಾಗ್‌ ಮಾಡಲಾಗಿತ್ತು. ಇದರ ಬೆನ್ನಲ್ಲೇ ಕಾಡುಗೋಡಿ ಪೊಲೀಸರು ದೀಪಕ್‌ ಅವರನ್ನು ಠಾಣೆಗೆ ಕರೆಸಿಕೊಂಡು ಪ್ರಕರಣ ದಾಖಲಿಸಿರುವುದಾಗಿ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

A Famous Kannada YouTuber Was Taken Into Police Custody On Charges Of Intimidation

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಾಕಿ ಸಾರ್ವಜನಿಕರಲ್ಲಿ ಸುರಕ್ಷತಾ ಭಯವನ್ನು ಉಂಟುಮಾಡಿರುವ ದೀಪಕ್‌ ಎಂಬ ವ್ಯಕ್ತಿಯನ್ನು ಪತ್ತೆ ಮಾಡಿ, ವಶಕ್ಕೆ ಪಡೆದು, ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಜಗಳಕ್ಕೆ ಕಾರಣ ಏನು?: ಕೆಲ ಯುಟ್ಯೂಬರ್‌ಗಳು ಹಾಗೂ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ತಮ್ಮ ರೀಲ್ಸ್‌, ವಿಡಿಯೋ ಜೊತೆಗೆ ಬೆಟ್ಟಿಂಗ್‌ ಆಪ್‌ಗಳ ಬಗ್ಗೆಯೂ ಜಾಹೀರಾತು ನೀಡುತ್ತಿದ್ದಾರೆ. ದೀಪಕ್‌ ಕೂಡ ಈ ಹಿಂದೆ ಬೆಟ್ಟಿಂಗ್‌ ಆಪ್‌ ಪ್ರಮೋಟ್‌ ಮಾಡಿದ್ದರು ಎಂದು ಹೇಳಲಾಗಿದೆ. ಆದರೆ, ಕನ್ನಡದ ಯುಟ್ಯೂಬರ್‌ಗಳಲ್ಲಿ ಈ ಬೆಟ್ಟಿಂಗ್‌ ಪ್ರಮೋಷನ್‌ಗೆ ವಿರೋಧ ಕೂಡ ಇದೆ. ‌

ಇದೇ ವಿಚಾರವಾಗಿ ದೀಪಕ್‌ ಅವರಿಗೂ ಬೇರೆ ಯುಟ್ಯೂಬರ್‌ಗಳ ನಡುವೆ ಜಗಳ ನಡೆದಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಬೇರೆ ಯುಟ್ಯೂಬರ್‌ವೊಬ್ಬರು ತನ್ನ ವಿಡಿಯೋದಲ್ಲಿ ಆಡಿರುವ ಮಾತುಗಳು ಕೂಡ ದೀಪಕ್‌ ಅವರ ವೈಯಕ್ತಿಕ ವಿಚಾರಗಳಿಗೆ ಹೋಲುವಂತಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ದೀಪಕ್ ಅವರು ವಿಡಿಯೋದಲ್ಲಿ ಖಾರವಾಗಿ ಮಾತನಾಡಿದ್ದರು, ಆದರೆ ಅದು ಅವರನ್ನು ಪೊಲೀಸ್‌ ಠಾಣೆವರೆಗೂ ಕರೆತಂದಿದೆ. ಕಾಮೆಂಟ್‌ಗಳಲ್ಲಿ ಕನ್ನಡದ ಮತ್ತೊಬ್ಬ ಖ್ಯಾತ ಯೂಟ್ಯೂಬರ್‌ "ಟಿಪಿಕಲ್‌ ಕನ್ನಡಿಗ" ಅವರೊಂದಿಗೆ ಈ ಗಲಾಟೆ ನಡೆದಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಗ್ಗೆ ಸ್ಪಷ್ಟತೆ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+