GIM 2025: ಕರ್ನಾಟಕದಲ್ಲಿನ ₹6.23 ಲಕ್ಷ ಕೋಟಿ ಹೂಡಿಕೆಯಲ್ಲಿ ₹4.03 ಲಕ್ಷ ಕೋಟಿ ಹೂಡಿಕೆಗೆ ಒಪ್ಪಿಗೆ

ಬೆಂಗಳೂರು, ಮಾರ್ಚ್ 04: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಜಾಗತಿಕ ಹೂಡಿಕೆದಾರರ ಸಮಾವೇಶ 2025 ನಡೆದಿತ್ತು. ಹತ್ತಾರು ವಿದೇಶಿ ಕಂಪನಿಗಳು, ಬಂಡವಾಳ ಹೂಡಿಕೆದಾರರು ಪಾಲ್ಗೊಂಡು ಯಶಸ್ವಿಯಾಗಿದ್ದಾರೆ. ಹಾಗಾದ್ರೆ ಒಟ್ಟಾರೆ ಹೂಡಿಕೆ ಆಗಿದ್ದೆಷ್ಟು? ಎಲ್ಲೆಲ್ಲಿ ಹೂಡಿಕೆ ಆಗಿದೆ. ಒಪ್ಪಂದಗಳ ಕುರಿತು ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೀಡಿದ ವಿವರ ಇಲ್ಲಿದೆ.

ಜಾಗತಿಕ ಹೂಡಿಕೆದಾರರ ಸಮಾವೇಶ 2025ದಲ್ಲಿ 98 ಕಂಪನಿಗಳು ಸರ್ಕಾರದೊಂದಿಗೆ ಹೂಡಿಕೆ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದಗಳ ಮೂಲಕ 6,23,970 ಕೋಟಿ ರೂ. ಬಂಡವಾಳ ಹರಿದು ಬರಲಿದೆ. ಉಳಿದಂತೆ, 1,101 ಕಂಪನಿಗಳಿಂದ 4,03,533 ಕೋಟಿ ರೂ. ಹೂಡಿಕೆ ಆಗಲಿದೆ. ಈ ಸಂಬಂಧಿಸಿದ ಸಮಿತಿಗಳು ಇದಕ್ಕೆ ಅನುಮೋದನೆ ನೀಡಿವೆ ಎಂದು ಬಿಜೆಪಿ ಎಂಎಲ್‌ಸಿ ಎಸ್.ವಿ ಸುಂಕನೂರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

98 Companies Sign Investment Deals Worth Rs 6 23 Lakh Crore at GIM Rs 4 03 lakh Cr Approved

'ಇನ್ವೆಸ್ಟ್ ಕರ್ನಾಟಕ-2025' ರಲ್ಲಿ ರಾಜ್ಯದ 2,892, ಹೊರ ರಾಜ್ಯಗಳ 286 ಮತ್ತು ವಿದೇಶಗಳ 72 ಹೂಡಿಕೆದಾರ ಉದ್ಯಮಿಗಳು ಪಾಲ್ಗೊಂಡಿದ್ದರು. ಈಗಾಗಲೇ ಒಡಂಬಡಿಕೆಗೆ ಅಂಕಿತ ಹಾಕಿರುವ 98 ಕಂಪನಿಗಳು ಏರೋಸ್ಪೇಸ್, ಆಟೋ ಮತ್ತು ಇ.ವಿ, ಸಿಮೆಂಟ್ ಮತ್ತು ಉಕ್ಕು, ಇಎಸ್ಡಿಎಂ, ಆಹಾರ ಸಂಸ್ಕರಣೆ ಮತ್ತು ಕೃಷಿ, ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್, ಆರ್ &ಡಿ ಮತ್ತು ಜಿಸಿಸಿ, ಮರುಬಳಕೆ ಇಂಧನ ಹಾಗೂ ಔಷಧ ತಯಾರಿಕೆ ವಲಯಗಳಿಗೆ ಸೇರಿವೆ ಎಂದು ಸಚಿವರು ತಿಳಿಸಿದರು.

ಕರ್ನಾಟಕದ ಎಷ್ಟು ಜಿಲ್ಲೆಗಳಲ್ಲಿ ಹೂಡಿಕೆ?

ಈ ಹೂಡಿಕೆಗಳು ರಾಜ್ಯದ 21 ಜಿಲ್ಲೆಗಳಲ್ಲಿ ಆಗಲಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತ್ಯಧಿಕ ಎಂದರೆ 30 ಕಂಪನಿಗಳು 26,331 ಕೋಟಿ ರೂ. ಹೂಡಿಕೆ ಮಾಡಲಿದ್ದರೆ, ಬೆಂಗಳೂರು ನಗರ ಜಿಲ್ಲೆಯಲ್ಲಿ 14 ಕಂಪನಿಗಳು 35,297 ಕೋಟಿ ರೂ. ಬಂಡವಾಳ ತೊಡಗಿಸಲಿವೆ. ಉಳಿದ ಜಿಲ್ಲೆಗಳಲ್ಲಿ 54 ಯೋಜನೆಗಳಿಗೆ ವಿವಿಧ ಕಂಪನಿಗಳು ಹಣ ಹೂಡಲಿವೆ. ವಲಯಗಳ ಪೈಕಿ ಸಾಮಾನ್ಯ ಉತ್ಪಾದನಾ ವಲಯದಲ್ಲಿ ಗರಿಷ್ಠ 23 ಒಡಂಬಡಿಕೆಗಳಾಗಿವೆ ಎಂದು ಅವರು ಅಂಕಿಅಂಶಗಳನ್ನು ಒದಗಿಸಿದರು.

2022ರಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ 57 ಹೂಡಿಕೆ ಒಡಂಬಡಿಕೆಗಳ ಮೂಲಕ 5.41 ಲಕ್ಷ ಕೋಟಿ ರೂ. ಹೂಡಿಕೆ ಬರುವುದೆಂದು ಹೇಳಲಾಗಿತ್ತು. ಈ ಪೈಕಿ ಏಕಗವಾಕ್ಷಿ ಸಮಿತಿ ಸಭೆಗಳಲ್ಲಿ 20 ಕಂಪನಿಗಳ ಯೋಜನೆಗಳಿಗೆ ಅನುಮೋದನೆ ಕೊಡಲಾಗಿದೆ. ಇದರಿಂದ 2.01 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಗಲಿದೆ. ಹೆಚ್ಚಿನವು ಬೃಹತ್ ಯೋಜನೆಗಳಾಗಿವೆ. ಇವುಗಳ ನೈಜ ಅನುಷ್ಠಾನಕ್ಕೆ 3ರಿಂದ 5 ವರ್ಷ ಹಿಡಿಯುತ್ತದೆ ಎಂದು ವಿವರಿಸಿದರು.

ಹುಬ್ಬಳ್ಳಿ ಇನ್ಫೋಸಿಸ್ ಕ್ಯಾಂಪಸ್ ಶುರು ಯಾವಾಗ?

ಒಪ್ಪಂದಕ್ಕೆ ಸಹಿ‌ ಮಾಡಿದರೂ ಅನುಷ್ಠಾನ ಆಗುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಾರಿ ಆಗಿರುವ ಒಪ್ಪಂದಗಳಲ್ಲಿ ಕನಿಷ್ಠ ಶೇ 70ರಷ್ಟು ಹೂಡಿಕೆ ಆಗುವ ವಿಶ್ವಾಸವಿದೆ. ಇನ್ನೂ ಹುಬ್ಬಳ್ಳಿಯಲ್ಲಿನ‌ ಇನ್ಫೋಸಿಸ್ ಕ್ಯಾಂಪಸ್ ಇನ್ನೂ ಕಾರ್ಯಾಚರಣೆ ಆರಂಭಿಸಿಲ್ಲ ಎಂಬುದನ್ನು ಸಭಾಪತಿ ಬಸವರಾಜ‌ ಹೊರಟ್ಟಿ ಸೇರಿ ಎಲ್ಲ ಸದಸ್ಯರು ಸಚಿವರ ಗಮನಕ್ಕೆ ತಂದರು. ಈ ಸಂಬಂಧ ಮತ್ತೊಮ್ಮೆ ಸಭೆ ಮಾಡಿ, ಕ್ಯಾಂಪಸ್ ಕಾರ್ಯಾರಂಭ ಮಾಡುವಂತೆ ಸೂಚಿಸಲಾಗುವುದು ಎಂದು ಸಚಿವರು ಭರವಸೆ‌ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+