ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೇಳ್ಕೊಳ್ಳೋಕೆ ಬೆಂಗ್ಳೂರಲ್ಲಿ 80 ಲಕ್ಷ ವಾಹನ, ಬಿಎಂಟಿಸಿ ಮಾತ್ರ ಕೆಲವೇ ಸಾವಿರ

|
Google Oneindia Kannada News

ಬೆಂಗಳೂರು, ಮೇ 13: ರಾಜಧಾನಿಯಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಲೇ ಇದೆ, ಬೆಂಗಳೂರು ತುಂಬಾ ಲಕ್ಷಾಂತರ ವಾಹನಗಳು ಓಡಾಡುತ್ತಿದೆ ಆದರೆ ಎಂತಾ ವಿಪರ್ಯಾಸ ನೋಡಿ, ದಿನನಿತ್ಯ ಸಾಮಾನ್ಯ, ಮಧ್ಯಮ ವರ್ಗದವರ ಪಾಲಿಗಿರುವ ಬಿಎಂಟಿಸಿ ಬಸ್‌ಗಳ ಸಂಖ್ಯೆ ಮಾತ್ರ ಕೇವಲ 6,529.

21ವರ್ಷಗಳಿಂದೀಚೆಗೆ ಶೇ.560ರಷ್ಟು ಜನಸಂಖ್ಯೆ ಹೆಚ್ಚಳವಾಗಿದೆ. ಅದಕ್ಕೆ ತಕ್ಕಂತೆ ವಾಹನಗಳ ಖರೀದಿ ಕೂಡ ಹೆಚ್ಚಾಗುತ್ತಿದೆ.

ಬಿಎಂಟಿಸಿ ಬಸ್‌ಗೆ ಬಿಯರ್ ಬಾಟಲಿ ಎಸೆದ ಕಿಡಿಗೇಡಿಗಳು, ಯುವತಿಗೆ ಗಾಯ ಬಿಎಂಟಿಸಿ ಬಸ್‌ಗೆ ಬಿಯರ್ ಬಾಟಲಿ ಎಸೆದ ಕಿಡಿಗೇಡಿಗಳು, ಯುವತಿಗೆ ಗಾಯ

1997ರಿಂದ ಫೆಬ್ರವರಿ 2019ರ ವರೆಗೆ ಬಿಎಂಟಿಸಿ ಕೇವಲ 4431 ಬಸ್‌ಗಳನ್ನು ಹೆಚ್ಚಳ ಮಾಡಿದೆ. ಆಗಸ್ಟ್ 15, 1997ರಲ್ಲಿ ಬಿಎಂಟಿಸಿಯನ್ನು ಬಿಟಿಎಸ್ ಎಂದು ಕರೆಯಲಾಗುತ್ತಿತ್ತು. ಬಿಎಂಟಿಸಿಯಾಗಿ ಪರಿವರ್ತನೆಯಾದಾಗ 1,036 ಮಾರ್ಗಗಳಿಗೆ 2,098 ಬಸ್‌ಗಳ ಕಾರ್ಯಾಚರಣೆ ಆರಂಭಿಸಲಾಗಿತ್ತು.

80 lakh vehicles in Bengaluru BMTC fleet accounts for just 6 529

ಬಸ್‌ಗಳ ಸಂಖ್ಯೆ ಇದೀಗ 6,259 ಬಸ್‌ಗಳಾಗಿ ಏರಿಕೆಯಾಗಿದ್ದು 2,253 ಮಾರ್ಗಗಳಿಗೆ ಬಸ್ ಸಂಚರಿಸುತ್ತಿವೆ. ಬೆಂಗಳೂರಿನಲ್ಲಿ 80 ಲಕ್ಷ ವಾಹನಗಳಿದ್ದರೂ ಸಾರ್ವಜನಿಕ ಸಾರಿಗೆ ಕೇವಲ 6,259 ಬಸ್‌ಗಳು ಮಾತ್ರವಿದೆ.

ಕೇವಲ ಇಷ್ಟೇ ಬಸ್‌ಗಳು ಸಂಚರಿಸಿದರೆ ಪ್ರಯಾಣಿಕರ ಬೇಡಿಕೆ ವರೆಗೆ ತಲುಪಲು ಸಾಧ್ಯವಿಲ್ಲ. ಬೆಂಗಳೂರಿಗೆ ಇದೀಗ 110 ಹಳ್ಳಿಗಳ ಸೇರ್ಪಡೆಯಾಗಿದೆ. ಹಾಗಾಗಿ ಬೇಡಿಕೆ ಕೂಡ ಹೆಚ್ಚಾಗಿದೆ.

ಆದರೆ ಬಿಎಂಟಿಸಿ ಮಾತ್ರ 2007ರ ಬೇಡಿಕೆಗೆ ತಕ್ಕಂತೆಯೇ ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ. ಆದರೆ ಈಗಿರುವ ಪ್ರಯಾಣಿಕರ ಬೇಡಿಕೆಯನ್ನು ಗಮನಿಸಿದರೆ ಬೆಂಗಳೂರಿಗೆ ಕನಿಷ್ಠ 10 ಸಾವಿರ ಬಸ್‌ಗಳಾದರೂ ಬೇಕು. ಬಿಎಂಆರ್‌ಸಿಎಲ್ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 2031ರೊಳಗೆ ಕನಿಷ್ಠವೆಂದರೆ 14ಸಾವಿರ ಬಸ್‌ಗಳಾದರೂ ಕಾರ್ಯಾಚರಣೆಗೊಳಿಸಬೇಕು ಎಂದು ಹೇಳಿದೆ.

2019ರ ಫೆಬ್ರವರಿವರೆಗೆ ಬಿಎಂಟಿಸಿ ಕೇವಲ 6,529 ಬಸ್‌ಗಳನ್ನು ಹೊಂದಿದೆ. ಬೆಂಗಳೂರಿನ ಹಲವು ಪ್ರದೇಶಗಳಿಂದ ಬಸ್‌ ಬಿಡುವಂತೆ ಈಗಲೂ ನೂರಾರು ಅರ್ಜಿಗಳು ಬಿಎಂಟಿಸಿ ಕಚೇರಿಗೆ ಬಂದು ಬೀಳುತ್ತಿವೆ. ಆದರೆ ಅಧಿಕಾರಿಗಳು ಅದರ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಬಸ್‌ ಟಿಕೆಟ್ ದರ ಕಡಿಮೆ ಮಾಡಬೇಕು. ಬಸ್ ಟಿಕೆಟ್ ದರ ಹೆಚ್ಚಿದ್ದರೆ ಪ್ರಯಾಣಿಕರು ದ್ವಿಚಕ್ರ ವಾಹನ ಬಳಕೆ ಮಾಡುತ್ತಾರೆ ಅದರಿಂದ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಪರಿಸರ ಮಾಲಿನ್ಯವೂ ಆಗುತ್ತದೆ ಎಂದು ಸಾರಿಗೆ ತಜ್ಞರ ಅಭಿಪ್ರಾಯಪಟ್ಟಿದ್ದಾರೆ.

English summary
Over the past 21 years, the State capital’s vehicular population has increased by more than 560percent but important mass transit systems, namely the Bangalore Metropolitan Transport Corporation (BMTC), have failed to keep up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X