ಸಂಚಾರ ನಿಯಮ ಉಲ್ಲಂಘನೆ; 15 ಸಾವಿರ ದಂಡ ಕಟ್ಟಿದ ವ್ಯಾಪಾರಿ

ಬೆಂಗಳೂರು, ಡಿಸೆಂಬರ್ 15: ಎರಡು ವರ್ಷಗಳಿಂದ ಸಂಚಾರಿ ದಂಡ ಕಟ್ಟದೇ ಓಡಾಡುತ್ತಿದ್ದ ವ್ಯಾಪಾರಿಯೊಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. 15,400 ರೂ. ದಂಡ ಕಟ್ಟಿ ಬೈಕ್ ಬಿಡಿಸಿಕೊಂಡು ಹೋಗಿದ್ದಾನೆ.

ಬೆಂಗಳೂರಿನ ತರಕಾರಿ ವ್ಯಾಪಾರಿ ಮಂಜುನಾಥ್ ಬೈಕ್ ಮೇಲೆ 71 ಕೇಸುಗಳು ದಾಖಲಾಗಿದ್ದವು. 2 ವರ್ಷಗಳಿಂದ ಪೊಲೀಸರು ಚಲನ್ ಕಳಿಸಿದರೂ ಅವರು ದಂಡ ಕಟ್ಟಿರಲಿಲ್ಲ. ರಾಜಾಜಿನಗರ ಸಂಚಾರಿ ಪೊಲೀಸರ ಕೈಗೆ ಎರಡು ದಿನಗಳ ಹಿಂದೆ ಸಿಕ್ಕಿಬಿದ್ದಿದ್ದಾರೆ.

ಪೊಲೀಸರು ತಪಾಸಣೆ ಮಾಡಿದಾಗ 15,400 ರೂ. ದಂಡ ಬಾಕಿ ಇತ್ತು. ಪೊಲೀಸರು ಬೈಕ್ ವಶಕ್ಕೆ ಪಡೆದುಕೊಂಡರು. ಠಾಣೆಗೆ ಹೋಗಿ ದಂಡ ಕಟ್ಟಿದ ಮಂಜುನಾಥ್ ಬೈಕ್ ಬಿಡಿಸಿಕೊಂಡು ಹೋಗಿದ್ದಾರೆ. ಬೈಕ್ ಮೇಲೆ ಇದ್ದ ಕೇಸುಗಳನ್ನು ನೋಡಿ ಪೊಲೀಸರು ಅಚ್ಚರಿಗೊಂಡಿದ್ದಾರೆ.

71 Violations Traffic Police Fined Rs 15400 For Man

ಮೂವರ ಪ್ರಯಾಣ, ಹೆಲ್ಮೆಟ್ ಇಲ್ಲದೇ ಪ್ರಯಾಣ, ಒನ್ ವೇ ಸಂಚಾರ, ಸಿಗ್ನಲ್ ಜಂಪ್ ಸೇರಿದಂತೆ ಮಂಜುನಾಥ್ ಬೈಕ್ ವಿರುದ್ಧ 71 ಪ್ರಕರಣವಿತ್ತು. ಪೊಲೀಸರು ಎರಡು ವರ್ಷಗಳಿಂದ ನೋಟಿಸ್ ಕಳಿಸಿದರೂ ದಂಡವನ್ನು ಪಾವತಿ ಮಾಡಿರಲಿಲ್ಲ.

ಪೊಲೀಸರು ಮಂಜುನಾಥ್ ಬೈಕ್ ಹಿಡಿದು ಗಾಡಿ ನಂಬರ್ ಹಾಕಿದಾದ ದಂಡದ ಲಿಸ್ಟ್ ಬಂದಿದೆ. ಸುಮಾರು 5.1 ಅಡಿ ಉದ್ದ ಬಿಲ್ ಬಂದಿದೆ. 20 ಕ್ಕೂ ಹೆಚ್ಚು ಬಾರಿ ಮಂಜುನಾಥ್ ಹೆಲ್ಮೆಟ್ ಇಲ್ಲದೇ ಪ್ರಯಾಣ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

2017ರ ನವೆಂಬರ್‌ನಲ್ಲಿ ಬೈಕ್ ತೆಗೆದುಕೊಂಡಿದ್ದ ಮಂಜುನಾಥ್ ಹೆಲ್ಮೆಟ್ ಕೊಂಡು ಕೊಂಡಿರಲಿಲ್ಲ. ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ದಾಖಲಿಸಿಕೊಂಡಿದ್ದ ಪೊಲೀಸರು ನೋಟಿಸ್‌ಗಳನ್ನು ಮನೆಗೆ ಕಳಿಸಿದ್ದರು.

ಪೊಲೀಸ್ ಠಾಣೆಗೆ ದಂಡ ಕಟ್ಟಲು ಬಂದಾಗ ಮಂಜುನಾಥ್ ಹೆಲ್ಮೆಟ್ ತಂದಿದ್ದರು. "ಭಾರಿ ದಂಡ ಕಟ್ಟಿದ್ದೇನೆ. ಇನ್ನು ನಿಯಮ ಪಾಲನೆ ಮಾಡುತ್ತೇನೆ" ಎಂದು ಮಂಜುನಾಥ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+