ಹೆಂಡತಿಯನ್ನು ಸುಟ್ಟು, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ವೃದ್ಧ

ಬೆಂಗಳೂರು, ಮೇ 21: 70 ವರ್ಷದ ವ್ಯಕ್ತಿಯೊಬ್ಬರು ಹೆಂಡತಿಯನ್ನು ಜೀವಂತ ದಹನ ಮಾಡಿ ಕೊನೆಗೆ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ದೊಡ್ಡ ಬಳ್ಳಾಪುರದಲ್ಲಿ ನಡೆದಿದ್ದು, ಆಸ್ತಿ ವಿಚಾರಕ್ಕೆ ಮಕ್ಕಳು ಹಾಗೂ ಗಂಡ ಹೆಂಡತಿ ನಡುವೆ ಮನಸ್ತಾಪವಿತ್ತು ಎನ್ನುವ ಮಾಹಿತಿ ಲಬ್ಯವಾಗಿದೆ.ನಾರಾಯಣಪ್ಪ ಒಂದು ವರ್ಷದ ಹಿಂದೆ ಮಕ್ಕಳಿಗೆ ತಿಳಿಸದೆ 32 ಗುಂಟೆ ಜಮೀನನ್ನು ಮಾರಾಟ ಮಾಡಿದ್ದರು.

ಈ ಕುರಿತು ಲಕ್ಷ್ಮಮ್ಮ ಹಾಗೂ ಮಕ್ಕಳು ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಾರಾಯಣಪ್ಪ ಹಳ್ಳಿಯನ್ನು ಬಿಟ್ಟು ಹೋಗಿದ್ದ, ಹಣವೆಲ್ಲವೂ ಖಾಲಿಯಾದ ಮೇಲೆ ಮತ್ತೆ ಮರಳಿದ್ದ.

70-yr-old commits suicide after setting wife on fire

ಮನೆಗೆ ಬಂದಾಗ ಲಕ್ಷ್ಮಮ್ಮ ಹಾಗೂ ಮಕ್ಕಳು ಆತನಿಗೆ ಒಳಗೆ ಬರಲು ಬಿಟ್ಟಿರಲಿಲ್ಲ. 15ದಿನಗಳ ಬಳಿಕ ಒಂದೊಮ್ಮೆ ದೂರನ್ನು ಹಿಂಪಡೆಯದಿದ್ದರೆ ನಿಮ್ಮನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ.

ನಾರಾಯಣಪ್ಪ ಹೆಂಡತಿ ಮೇಲೆ ಕೋಪಗೊಂಡಿದ್ದ, ತನ್ನ ವಿರುದ್ಧ ದೂರು ನೀಡಲು ಲಕ್ಷ್ಮಮ್ಮ ಕುಮ್ಮಕ್ಕು ನೀಡಿದ್ದಾಳೆ ಎನ್ನುವ ಕೋಪವಿತ್ತು. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸೀಮೆಎಣ್ಣೆ ತಂದು ಮಲಗಿದ್ದ ಹೆಂಡತಿ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ತಾನು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+