• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಿಂದ ಕಣ್ಣೂರಿಗೆ ವಾರಕ್ಕೆ 6 ವಿಮಾನಗಳ ಹಾರಾಟ

|

ಬೆಂಗಳೂರು, ಡಿಸೆಂಬರ್ 7: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ಬಳಿಕ ಬೆಂಗಳೂರಿನಿಂದ ಕಣ್ಣೂರಿಗೆ ವಾರಕ್ಕೆ 6 ವಿಮಾನಗಳು ಹಾರಾಟ ನಡೆಸಲಿವೆ.

ಬೆಂಗಳೂರಿನಿಂದ ಕಣ್ಣೂರಿಗೆ 80 ನಿಮಿಷಗಳಲ್ಲಿ ತಲುಪಬಹುದಾಗಿದೆ. G8 624 ವಿಮಾನವು ಕಣ್ಣೂರು ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹೊರಡಲಿದ್ದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2.20ಕ್ಕೆ ಬಂದು ತಲುಪಲಿದೆ. ಹಾಗೆಯೇ ಹಿಂದಿರುಗಿ ಬರಲಿದೆ.

ಕಣ್ಣೂರು ಹೊಸ ಏರ್‌ಪೋರ್ಟ್ ವಿಶೇಷತೆಗಳೇನು?ರಾಜ್ಯಕ್ಕೆ ಏನು ಪ್ರಯೋಜನ?

G8 625 ವಿಮಾನವು ಮಧ್ಯಾಹ್ನ 2.50ಕ್ಕೆ ಕೆಐಎನಿಂದ ಹೊರಡಲಿದ್ದು, 4.10ಕ್ಕೆ ಕಣ್ಣೂರು ತಲುಪಲಿದೆ.

ಕಣ್ಣೂರು ವಿಮಾನ ನಿಲ್ದಾಣ ಉದ್ಘಾಟನೆ

ಕಣ್ಣೂರು ವಿಮಾನ ನಿಲ್ದಾಣ ಉದ್ಘಾಟನೆ

ಕಣ್ಣೂರು ನೂತನ ಏರ್‌ಪೋರ್ಟ್ ಡಿಸೆಂಬರ್ 9ಕ್ಕೆ ಉದ್ಘಾಟನೆಗೊಳ್ಳಿದ್ದು ಮೊದಲು ಅಬುಧಾಬಿಗೆ ಹಾರಾಟ ನಡೆಸಲಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದು, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಹಾಗಾದರೆ ಕಣ್ಣೂರು ಏರ್‌ಪೋರ್ಟ್‌ ನಿಂದ ರಾಜ್ಯಕ್ಕೆ ಏನು ಪ್ರಯೋಜನವಾಗಲಿದೆ, ಸದ್ಯದಲ್ಲಿಯೇ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಲಿದ್ದು, ವಿಸ್ತರಣೆಯಾಗಲಿದೆ , ಕಣ್ಣೂರು ವಿಮಾನ ನಿಲ್ದಾಣದಿಂದ ಕೊಡಗು, ಮೈಸೂರು, ಹಾಸನ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕಕ್ಕೆ ಸಾಕಷ್ಟು ಪ್ರಯೋಜನವಾಗಲಿದೆ. ಅಲ್ಲಿನ ಕಾಫಿ, ಪುಷ್ಪೋದ್ಯಮ, ಕರಿಮೆಣಸು, ಕೃಷಿ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ದೊರೆಯಲಿದೆ.

ಕಣ್ಣೂರಿನಿಂದ ಎಲ್ಲೆಲ್ಲಿಗೆ ವಿಮಾನ ಹಾರಾಟ

ಕಣ್ಣೂರಿನಿಂದ ಎಲ್ಲೆಲ್ಲಿಗೆ ವಿಮಾನ ಹಾರಾಟ

ಮೊದಲ ಹಂತದಲ್ಲಿ ವಾರಕ್ಕೆ ನಾಲ್ಕು ದಿನ ಅಬುಧಾಬಿಗೆ ವಿಮಾನ ಬೆಳಗ್ಗೆ 9 ಗಂಟೆಗೆ ಹೊರಡಲಿದ್ದು, ಅಲ್ಲಿಂದ ರಾತ್ರಿ 8.20ಕ್ಕೆ ಆಗಮಿಸಲಿದೆ. ಗಲ್ಫ್ ದೇಶಗಳಿಗೆ ವಿಮಾನ ಹಾರಾಟಕ್ಕೆ ಹೆಚ್ಚಿನ ಬೇಡಿಕೆ ಇದೆ. ಕೆಲವು ದಿನಗಳ ಬಳಿಕ ನಿತ್ಯ ಪಯಣ ಬೆಳೆಸಲಿದೆ. ಅಲ್ಲದೇ, ಮಸ್ಕತ್‌, ಕುವೈತ್‌, ಶಾರ್ಜಾ ಸೇರಿದಂತೆ ವಿವಿಧ ದೇಶಗಳಿಗೆ ಸಂಪರ್ಕ ಕಲ್ಪಿಸಲು ತಯಾರಿ ನಡೆಯುತ್ತಿದೆ.

ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ

ವಿಮಾನದ ವಿಶೇಷತೆ

ವಿಮಾನದ ವಿಶೇಷತೆ

ಹಲವು ಹೊಸತನದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ನಿರ್ಮಾಣವಾಗಿರುವ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಬಳಕೆಗೆ ಸಜ್ಜಾಗಿದೆ. ಒಟ್ಟು ಆರು ಅಂತಸ್ತಿನ ಟರ್ಮಿನಲ್‌ ಕಟ್ಟಡ, ಎಲ್ಲ ವ್ಯವಸ್ಥೆಯನ್ನು ಒಳಗೊಂಡಿರುವ ಎಟಿಎಸ್‌ನ ಅಂತಿಮ ಕಾಮಗಾರಿ ಪೂರ್ಣಗೊಂಡಿದೆ.

ನೂತನ ತಂತ್ರಜ್ಞಾನ, ಎರಡನೇ ಬಾರಿಗೆ ಎಲ್ಲೆಲ್ಲಿಗೆ ಹಾರಾಟ

ನೂತನ ತಂತ್ರಜ್ಞಾನ, ಎರಡನೇ ಬಾರಿಗೆ ಎಲ್ಲೆಲ್ಲಿಗೆ ಹಾರಾಟ

ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗದಂತೆ ಆಧುನಿಕ ವ್ಯವಸ್ಥೆ ಮಾಡಲಾಗಿದೆ. ನೂತನ ಸ್ಕ್ಯಾ‌ನಿಂಗ್‌ ತಂತ್ರಜ್ಞಾನದಿಂದ ತಪಾಸಣೆ ಶೀಘ್ರವಾಗಿ ಮುಗಿಯಲಿದೆ. ಅಲ್ಲದೇ, ಲಗ್ಗೇಜ್‌ ಡ್ರಾಪಿಂಗ್‌ ಸಿಸ್ಟಮ್‌ ಎಂಬ ತಂತ್ರಜ್ಞಾನ ಕೂಡ ಮಿಂಚಿನ ವೇಗದಲ್ಲಿ ಲಗ್ಗೇಜ್‌ಗಳನ್ನು ಪರಿಶೀಲನೆ ನಡೆಸಲಿದೆ. ಪ್ರತಿ ಗಂಟೆಗೆ 2 ಸಾವಿರ ಮಂದಿ ಪ್ರಯಾಣಿಕರನ್ನು ತಪಾಸಣೆ ಮಾಡಿ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ವ್ಯವಸ್ಥೆ ಇಲ್ಲಿದೆ. ಕೆಲವು ದಿನಗಳಲ್ಲಿ ಆಂತರಿಕ ವಿಮಾನ ಹಾರಾಟ ಸೇವೆ ಆರಂಭವಾಗಲಿದೆ. ಬೆಂಗಳೂರು, ಹುಬ್ಬಳ್ಳಿ, ಚೆನ್ನೈ, ಹೈದರಾಬಾದ್‌, ಗೋವಾ, ಮುಂಬಯಿ, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಿಗೆ ಹಾರಾಟ ನಡೆಸಲು ವಿವಿಧ ವಿಮಾನಯಾನ ಸಂಸ್ಥೆಗಳು ಮುಂದೆ ಬಂದಿವೆ. ಅದೇ ರೀತಿ ಸರಕು ಸಾಗಣೆಗೆ ಕೂಡ ವ್ಯವಸ್ಥೆ ಮಾಡಲಾಗುತ್ತಿದ್ದು, ಹಂತಹಂತವಾಗಿ ಜಾರಿಗೆ ಬರಲಿದೆ.

ಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Goair will launch six flights a week between Bengaluru and Kannur beginning December 9 when the new Kannur International Airport will be opened.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more