ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಲಚೇನಹಳ್ಳಿ-ನಾಗಸಂದ್ರ ಮಾರ್ಗದಲ್ಲಿ 6 ಬೋಗಿ ಮೆಟ್ರೋ ರೈಲು ಸಂಚಾರ

|
Google Oneindia Kannada News

ಬೆಂಗಳೂರು, ಜನವರಿ 28: ಯಲಚೇನಹಳ್ಳಿ-ನಾಗಸಂದ್ರ ಹಸಿರು ಮಾರ್ಗದಲ್ಲಿ ಇಂದಿನಿಂದ ಆರು ಬೋಗಿಗಳ ನಮ್ಮ ಮೆಟ್ರೋ ಸಂಚರಿಸಲಿದೆ.

ಸಂಪಿಗೆ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಆರು ಬೋಗಿಗಳ ಮೆಟ್ರೋ ರೈಲಿಗೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸೋಮವಾರ ಚಾಲನೆ ನೀಡಿದ್ದಾರೆ. ಮೈಸೂರು ರಸ್ತೆ -ಬೈಯಪ್ಪನಹಳ್ಳಿ ನೇರಳೆ ಮಾರ್ಗಕ್ಕೆ ಈಗಾಗಲೇ 6 ಬೋಗಿಯ ಮೂರು ರೈಲುಗಳು ಸಂಚರಿಸುತ್ತಿದೆ. ಇದೇ ಮೊದಲ ಬಾರಿಗೆ ಹಸಿರು ಮಾರ್ಗಕ್ಕೆ ಆರು ಬೋಗಿಯ ಮೆಟ್ರೋ ರೈಲು ಲಭ್ಯವಾಗಲಿದೆ.

ಹಸಿರು ಮಾರ್ಗದಲ್ಲಿ ಜನವರಿ 28ರಿಂದ ಆರು ಬೋಗಿಯ ಮೆಟ್ರೋ ಸಂಚಾರ ಹಸಿರು ಮಾರ್ಗದಲ್ಲಿ ಜನವರಿ 28ರಿಂದ ಆರು ಬೋಗಿಯ ಮೆಟ್ರೋ ಸಂಚಾರ

ಹಸಿರು ಮಾರ್ಗದಲ್ಲಿ ಈಗಾಗಲೇ ಪರೀಕ್ಷಾರ್ಥ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಮೊದಲ ಆರು ಬೋಗಿ ರೈಲಿಗೆ ಸೋಮವಾರ ಚಾಲನೆ ನೀಡಲಾಗುತ್ತಿದೆ. ಸಂಪಿಗೆ ರಸ್ತೆಯಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ.

6 coach metro service in Green lane resume Today

ಯಾವುದೇ ಮೆಟ್ರೋ ನಿಲ್ದಾಣದಿಂದ ಲಾಲ್ ಬಾಗ್‌ಗೆ 30 ರೂ. ಯಾವುದೇ ಮೆಟ್ರೋ ನಿಲ್ದಾಣದಿಂದ ಲಾಲ್ ಬಾಗ್‌ಗೆ 30 ರೂ.

ನೇರಳೆ ಮಾರ್ಗದಲ್ಲಿ ದಟ್ಟಣೆ ಹೆಚ್ಚಿರುವುದರಿಂದ ಮೊದಲ ಮೂರು ರೈಲುಗಳನ್ನು ಅಲ್ಲಿಗೆ ನೀಡಲಾಗಿದೆ. ಈಗ ನೇರಳೆ ಮಾರ್ಗದಲ್ಲಿ ಸ್ವಲ್ಪ ಮಟ್ಟಿಗೆ ದಟ್ಟಣೆ ಕಡಿಮೆಯಾಗಿದೆ. ಆದ್ದರಿಂದ ನಾಲ್ಕನೇ ಆರು ಬೋಗಿ ರೈಲನ್ನು ಹಸಿರು ಮಾರ್ಗಕ್ಕೆ ನೀಡಲಾಗುತ್ತದೆ. ಆರು ಬೋಗಿಯ ರೈಲಿನಲ್ಲಿ ಒಮ್ಮೆ 2,004 ಮಂದಿ ಪ್ರಯಾಣಿಸಬಹುದಾಗಿದೆ.

English summary
BMRCL started 6 coach metro service between yelchenahalli-Nagasandra green lane from today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X