ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಕುಟುಂಬದ ಜೊತೆ ಸೇರಿ 164 ದರೋಡೆ, ಕೊನೆಗೂ ಸಿಕ್ಕಿಬಿದ್ದರು!

|
Google Oneindia Kannada News

ಬೆಂಗಳೂರು, ಆಗಸ್ಟ್ 28: ಐದು ರಾಜ್ಯಗಳಲ್ಲಿ 164 ದರೋಡೆಗಳನ್ನು ಮಾಡಿರುವ 54 ವರ್ಷದ ವ್ಯಕ್ತಿ ಮತ್ತು ಆತನಿಗೆ ಸಹಕಾರ ನೀಡಿದ ಆತನ ಕುಟುಂಬದವರನ್ನು ಬೆಂಗಳೂರಿನ ರಾಜಾಜಿನಗರದ ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಶಿವಮೊಗ್ಗ ಮತ್ತು ಕೋಲಾರ ಜಿಲ್ಲೆ ಸೇರಿದಂತೆ ಕರ್ನಾಟಕದ ಕೆಲವು ಭಾಗಗಳಲ್ಲಿ ಅಪರಾಧ ಚಟುವಟಿಕೆ ನಡೆಸಿದ್ದು, 40 ವರ್ಷಗಳ ಅಪರಾಧದ ಇತಿಹಾಸ ಹೊಂದಿರುವ ಆರೋಪಿ ಪ್ರಕಾಶ್ ಎಂಬುವವನನ್ನು ಬಂಧಿಸಿದ್ದಾರೆ.

ಆರೋಪಿ ಪ್ರಕಾಶ್ ಜೊತೆಗೆ ಅವರ ಪುತ್ರರು, ಅಳಿಯ ಮತ್ತು ಸಹೋದರನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. 10ನೇ ವಯಸ್ಸಿನಿಂದಲೂ ಕಳ್ಳನಾಗಿದ್ದ ಪ್ರಕಾಶ್‌ಗೆ 20ಕ್ಕೂ ಹೆಚ್ಚು ಬಾರಿ ಜೈಲು ಶಿಕ್ಷೆಯಾಗಿದೆ.

ವರದಿಯ ಪ್ರಕಾರ ಆರೋಪಿ ಪ್ರಕಾಶ್ ತನ್ನ 10 ನೇ ವಯಸ್ಸಿನಿಂದಲೂ ಕ್ರಿಮಿನಲ್ ಚಟುವಟಿಕೆ ಪ್ರಾರಂಭಿಸಿದ್ದಾರೆ. ಕಳೆದ 40 ವರ್ಷಗಳಲ್ಲಿ 20 ಕ್ಕೂ ಹೆಚ್ಚು ಬಾರಿ ಜೈಲು ಶಿಕ್ಷೆ ಅನುಭವಿಸಿದ್ದಾನೆ.

ಆತನ ಕುಟುಂಬದ ಸದಸ್ಯರ ವಿರುದ್ಧವೂ ಅನೇಕ ಪ್ರಕರಣಗಳಿವೆ. ಪ್ರಕಾಶ್ ಅವರಿಗೆ ಮೂರು ಬೇರೆ ಬೇರೆ ಊರುಗಳಲ್ಲಿ (ಬಳ್ಳಾರಿ, ಕೋಲಾರ ಮತ್ತು ಶಿವಮೊಗ್ಗ) ಮೂವರು ಪತ್ನಿಯರಿದ್ದು, ಏಳು ಮಂದಿ ಪುತ್ರರು ಬೇರೆ ಬೇರೆ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಪ್ರಕಾಶ್ ಅವರ ಸಹೋದರ ವರದರಾಜ್, ಅವರ ಮಕ್ಕಳಾದ ಬಾಲರಾಜ್ ಮತ್ತು ಮಿಥುನ್ ಮತ್ತು ಅಳಿಯ ಜಾನ್ ದರೋಡೆ ಮಾಡಲು ಆರೋಪಿಗೆ ಸಹಾಯ ಮಾಡಿದ್ದಾರೆ. ಪ್ರಕಾಶ್ ಐಷಾರಾಮಿ ಬಂಗಲೆಗಳು, ಆಭರಣ ಅಂಗಡಿಗಳು ಮತ್ತು ಹಣಕಾಸು ಕಚೇರಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ.

ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಡೌಟು, ಅಂಕಲ್ ಆಸ್ಪತ್ರೆಗೆ ಆಂಟಿ ಜೈಲಿಗೆ!ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಡೌಟು, ಅಂಕಲ್ ಆಸ್ಪತ್ರೆಗೆ ಆಂಟಿ ಜೈಲಿಗೆ!

ಕರ್ನಾಟಕವಲ್ಲದೇ ನೆರೆಯ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ದರೋಡೆಗಳನ್ನು ಮಾಡಿದ್ದಾರೆ. ಅಲ್ಲಿಯೂ ಪ್ರಕರಣ ದಾಖಲಾಗಿವೆ. ಪ್ರಕಾಶ್ ಅವರ ಪುತ್ರರು, ಅಳಿಯಂದಿರು ಮತ್ತು ಸಹೋದರನನ್ನು ಬೆಂಗಳೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ.

54-year-old robber and his family arrested in Bengaluru Rajajinagar

ಈತನಿಗೆ ಜೈಲು ಹೊಸ ಗ್ಯಾಂಗ್ ಅನ್ನು ರಚಿಸುವ ಸ್ಥಳವಾಗಿತ್ತು. ಈ ಹಿಂದೆ ಜೈಲಿನಲ್ಲಿದ್ದಾಗ ಪ್ರಕಾಶ್ ತಂಡಗಳನ್ನು ರಚಿಸಿಕೊಂಡು ದರೋಡೆಗೆ ಯೋಜನೆ ರೂಪಿಸಿದ್ದ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

English summary
Bengaluru's Rajajinagar Police have arrested Thief and his family, having 40-year history of criminal activity. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X