ಬೆಂಗಳೂರಿಗೆ 5250 ಹೊಸ ಎಲೆಕ್ಟ್ರಿಕ್ ಬಸ್: ಹೊಸ ವಿವಾದ, ವಾಕ್ಸಮರ ಯಾಕೆ ?!
ಬೆಂಗಳೂರಿಗೆ ಕೇಂದ್ರ ಬಿಜೆಪಿ ಸರ್ಕಾರವು ಮಹತ್ವದ ಕೊಡುಗೆಯನ್ನು ನೀಡಿದೆ. ಆದರೆ, ಈ ಕೊಡುಗೆ ಎಲ್ಲಾ ರಾಜ್ಯಗಳಿಗೂ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ತನ್ನ ಪಾಲಿನ ಹಕ್ಕಿನಂತೆ ಬಸ್ ಕೊಟ್ಟಿದೆ ಎನ್ನುವ ವಾದವೂ ಕೇಳಿ ಬಂದಿದೆ. ಇಷ್ಟಕ್ಕೂ ಪಿಎಂ ಇ-ಡೈವ್, ಇ-ಬಸ್ ಯೋಜನೆಯಡಿ ರಾಜ್ಯಕ್ಕೆ ಕೇಂದ್ರ ಸರ್ಕಾರವು 5250 ಹೊಸ ಎಲೆಕ್ಟ್ರಿಕ್ ಬಸ್ ಮಂಜೂರು ಚರ್ಚೆ ಏನು ಎನ್ನುವ ವಿವರ ಇಲ್ಲಿದೆ.
ಪಿಎಂ ಇ-ಡೈವ್, ಇ-ಬಸ್ ಯೋಜನೆಯಡಿ ರಾಜ್ಯಕ್ಕೆ ಕೇಂದ್ರ ಸರ್ಕಾರವು 5250 ಹೊಸ ಎಲೆಕ್ಟ್ರಿಕ್ ಬಸ್ ಮಂಜೂರು ಮಾಡಿದೆ. ಪಿಎಂ ಇ-ಡೈವ್, ಇ-ಬಸ್ ಯೋಜನೆಯಡಿ ರಾಜ್ಯಕ್ಕೆ ಕೇಂದ್ರ ಸರ್ಕಾರವು 5250 ಹೊಸ ಎಲೆಕ್ಟ್ರಿಕ್ ಬಸ್ ಮಂಜೂರು ಮಾಡಲಾಗಿದೆ. ಬೆಂಗಳೂರಿನ ಟ್ರಾಫಿಕ್ ದಟ್ಟಣೆ ನಿವಾರಣೆಗೆ ಬಿಎಂಟಿಸಿಗೆ 4500 ಎಲೆಕ್ಟ್ರಿಕ್ ಬಸ್ ಸೇರ್ಪಡೆಯಾಗುತ್ತಿದೆ.

ಪಿಎಂ ಇ-ಡ್ರೈವ್ ಯೋಜನೆ ಅಡಿಯಲ್ಲಿ ಸಬ್ಸಿಡಿ ಮುಖೇನ ಬಿಎಂಟಿಸಿಗೆ 4,500 ಎಲೆಕ್ಟಿಕ್ ಬಸ್‌ಗಳನ್ನು ನೀಡಲಾಗುತ್ತಿದೆ. ಉಳಿದಂತೆ ಪಿಎಂಇ-ಬಸ್ ಸೇವಾ ಅಡಿಯಲ್ಲಿ KSRTC ಗೆ 350, NWKSRTC ಗೆ 200 ಮತ್ತು KKRTC ಗೆ 200 ಬಸ್‌ಗಳು ಸೇರಿ ಒಟ್ಟು 750 ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಲು ಅನುಮೋದನೆ ನೀಡಲಾಗಿದೆ. ಅತ್ಯಾಧುನಿಕ ಗುಣಮಟ್ಟದ ಈ ಎಲೆಕ್ಟ್ರಿಕ್ ಬಸ್ಗಳು ಹೊಗೆ ರಹಿತ ಹಾಗೂ ಪರಿಸರಸ್ನೇಹಿಯಾಗಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಹಲವು ವಿಶೇಷ ಸೌಲಭ್ಯಗಳನ್ನು ಹೊಂದಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬಿಜೆಪಿ ಟ್ವೀಟ್ ಮಾಡಿದ್ದು. ಇದನ್ನು ಕಾಂಗ್ರೆಸ್ ಟೀಕೆ ಮಾಡಿದೆ.
ಎಲ್ಲಾ ವಿಚಾರಗಳಲ್ಲೂ ಕೇಂದ್ರ ಬಿಜೆಪಿ ಸರ್ಕಾರಕ್ಕೆ 'ಜಿ ಹುಜೂರ್'ಎನ್ನುವ ಬಿಜೆಪಿ ಕರ್ನಾಟಕ ನಿಮ್ಮ ಗುಲಾಮಗಿರಿ ಮನಸ್ಥಿತಿಗೆ ಮಿತಿಯೇ ಇಲ್ಲವೆಂದು ಕಾಣಿಸುತ್ತದೆ.
ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ತನ್ನ ಪಾಲಿನ ಹಕ್ಕಿನಂತೆ ಬಸ್ ನೀಡಿದೆ. ಇದನ್ನೇ ಮಹಾಪ್ರಸಾದವೆಂದು ಜೈಕಾರ ಹಾಕುತ್ತಿರುವ ನೀವು, ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿರುವ ದ್ರೋಹವನ್ನು ಏಕೆ ಪ್ರಶ್ನಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದೆ.
1. ಪೆರಿಫೆರಲ್ ರಿಂಗ್ ರಸ್ತೆಗೆ ಅನುದಾನ ಕೊಟ್ಟಿಲ್ಲ
2. 15ನೇ ಹಣಕಾಸು ಆಯೋಗದಲ್ಲಿ ಅನ್ಯಾಯ ಮಾಡಿದೆ
3. ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಪಾಲು ಕೊಟ್ಟಿಲ್ಲ
4. ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ,ಅನುಮತಿ ಕೊಡುತ್ತಿಲ್ಲ
5. ನರೇಗಾ ಯೋಜನೆ ಬಾಕಿ ಹಣ ನೀಡಿಲ್ಲ
6. ರಾಜ್ಯಕ್ಕೆ ಸೂಕ್ತ ರಸಗೊಬ್ಬರ ಪೂರೈಕೆ ಮಾಡಿಲ್ಲ.
7. ರಾಜ್ಯಕ್ಕೆ ಸರಿಯಾಗಿ ನೆರೆ-ಬರ ಪರಿಹಾರ ನೀಡಿಲ್ಲ
ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಜೆ.ಎನ್ ನರ್ಮ ಯೋಜನೆಯಲ್ಲಿ ಬಿಎಂಟಿಸಿ ಮಾತ್ರವಲ್ಲ ರಾಜ್ಯದ ಇತರೆ ನಗರಗಳಲ್ಲಿ ಸಾರಿಗೆ ಸಂಪರ್ಕ ಅಭಿವೃದ್ಧಿಗೆ ಸಾವಿರಾರು ಬಸ್ ಗಳನ್ನು ನೀಡಲಾಗಿತ್ತು. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಮೂಲಸೌಕರ್ಯಕ್ಕೆ ಹೆಚ್ಚಿನ ಅನುದಾನ ನೀಡಲಾಗಿತ್ತು ಎಂದು ಕಾಂಗ್ರೆಸ್ ಹೇಳಿದೆ.












Click it and Unblock the Notifications