ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಶೇ.50.86ರಷ್ಟು ಮಂದಿಯನ್ನು ಕಾಡುತ್ತಿದೆ ಮಧುಮೇಹ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 07: ನಗರದಲ್ಲಿ ಶೇ.50.86ರಷ್ಟು ಮಂದಿಯನ್ನು ಮಧುಮೇಹ ಕಾಡುತ್ತಿದೆ. ಇದೀಗ ಕೊರೊನಾ ಸೋಂಕಿನಿಂದ ಮೃತಪಡುತ್ತಿರುವವರಷ್ಟು ಮಧುಮೇಹಿಗಳೇ ಹೆಚ್ಚಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮನೆಯಿಂದ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿರುವ ಬಿಬಿಎಂಪಿ, ಕಳೆದ 21 ದಿನಗಳಲ್ಲಿ 2,48,280 ಮನೆಗಳಿಗೆ ಭೇಟಿ ನೀಡಿದ್ದು, 7,11,648 ಮಂದಿಯನ್ನು ತಪಾಸಣೆ ಮಾಡಿದೆ. 57,528 ಮಂದಿ ಇನ್ನಿತರೆ ಆರೋಗ್ಯ ಸಮಸ್ಯೆಗಳನ್ನು ಕೂಡ ಹೊಂದಿದ್ದಾರೆ.

ಕೊರೊನಾ ಸೋಂಕಿನಿಂದ ಮಧುಮೇಹ ಬರುವುದೇ? ತಿಳಿಯಬೇಕಾದ ಸಂಗತಿಕೊರೊನಾ ಸೋಂಕಿನಿಂದ ಮಧುಮೇಹ ಬರುವುದೇ? ತಿಳಿಯಬೇಕಾದ ಸಂಗತಿ

ಅವರಲ್ಲಿ ಶೇ 38.82ರಷ್ಟು ಮಂದಿಗೆ ಅಧಿಕ ರಕ್ತದೊತ್ತಡ ಇದ್ದರೆ, ಶೇ 2.99ರಷ್ಟು ಮಂದಿ ಅಧಿಕ ಥೈರಾಯ್ಡ್ ಸಮಸ್ಯೆ ಮತ್ತು ಶೇ 2.48 ಮಂದಿ ಹೃದ್ರೋಗ ಸಮಸ್ಯೆ ಹೊಂದಿದ್ದಾರೆ.

51 Percent Of Bengaluru People Are Diabetic Shows BBMP Survey

ದೇಶದಲ್ಲೇ ಮೊದಲ ಬಾರಿ ಬಿಬಿಎಂಪಿ ಕೈಗೊಂಡ ವಿನೂತನ ಕಾರ್ಯಕ್ರಮದಲ್ಲಿ, ಇದುವರೆಗೆ ನಿಗದಿಪಡಿಸಿದ ಗುರಿಯಲ್ಲಿ ಶೇ.90ರಷ್ಟು ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ.

ಕೆಲವು ಕಡೆ ತಡವಾಗಿ ಸಮೀಕ್ಷೆ ಆರಂಭವಾಗಿದ್ದರಿಂದ ಶೇ.100ರಷ್ಟು ಗುರಿ ಸಾಧನೆ ಸಾಧ್ಯವಾಗಿಲ್ಲ. ಇನ್ನೂ 60 ದಿನ ಕಾಲಾವಕಾಶವಿದ್ದು, ಅಷ್ಟರೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗುತ್ತಿದೆ ಎಂದರು.

ಬಿಬಿಎಂಪಿ ಇತ್ತೀಚೆಗೆ ನಡೆಸಿದ ಸಮೀಕ್ಷೆ ಪ್ರಕಾರ, ಬೆಂಗಳೂರು ನಗರವು ಕರ್ನಾಟಕದ ಮಧುಮೇಹ ರಾಜಧಾನಿಯಾಗಿ ಬದಲಾಗುತ್ತಿದೆ. ಸಮೀಕ್ಷೆಯಲ್ಲಿ ನಗರದ ಶೇ 50.86ರಷ್ಟು ಜನರು ಮಧುಮೇಹಿಗಳಾಗಿದ್ದಾರೆ. ಮತ್ತೊಂದು ಆತಂಕ ಮೂಡಿಸುವ ಸಂಗತಿಯೆಂದರೆ, ಕೋವಿಡ್ 19 ಮೊದಲು ಮತ್ತು ಎರಡನೆಯ ಅಲೆಯ ವೇಳೆ ಅನೇಕ ಮಧುಮೇಹಿಗಳು ಜೀವ ಕಳೆದುಕೊಂಡಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಮಕ್ಕಳಲ್ಲಿ ಟೈಪ್ 1 ಮಧುಮೇಹ ಕಾಯಿಲೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ. ಟೈಪ್ 1 ಮಧುಮೇಹವು ಆಟೋಇಮ್ಯೂನ್ ಸ್ಥಿತಿಯಾಗಿದೆ. ಅಂದರೆ, ನಮ್ಮದೇ ಪ್ರತಿರಕ್ಷಣಾ ವ್ಯವಸ್ಥೆಯು ನಮ್ಮ ದೇಹದ ಕೋಶಗಳ ಮೇಲೆಯೇ ದಾಳಿ ನಡೆಸುತ್ತದೆ.

Recommended Video

T 20 ವಿಶ್ವಕಪ್ ಆಡಲು ಹೊರಟ ತಂಡಕ್ಕೆ ಧೋನಿ ಮಾರ್ಗದರ್ಶನ | Oneindia Kannada

22,313 ಮಧುಮೇಹಿಗಳು ಇದುವರೆಗೆ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದಾರೆ ಎಂದು ಬಿಬಿಎಂಪಿ ಸಮೀಕ್ಷೆ ತಿಳಿಸಿದೆ.
ಸಮೀಕ್ಷೆಯಲ್ಲಿ ಕಂಡಿದ್ದು
-ಕೊರೊನಾದಿಂದ ಗುಣಮುಖರಾದವರು 22,313
-ಕೊರೊನಾ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡವರು-4,39,777
-ಲಸಿಕೆಯ ಎರಡು ಡೋಸ್‌ಗಳನ್ನೂ ಹಾಕಿಸಿಕೊಂಡವರು-1,67,081
-ಮಧುಮೇಹ ಹೊಂದಿದವರು-ಶೇ.50.86
-ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿರುವವರು ಶೇ.35.82
-ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು-ಶೇ.2.48
ಥೈರಾಯ್ಡ್ ಸಮಸ್ಯೆ ಇರುವವರು-ಶೇ.2.99

English summary
According To a survey, 51 percent of people in city are diabetic and many such patients also lost their lives during covid waves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X