ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲ್ಲೆಲ್ಲೂ ಗುಲಾಬಿ: ಪಿಂಕ್ ಆಟೋ ಯೋಜನೆಗೆ ಮರುಜೀವ

|
Google Oneindia Kannada News

ಬೆಂಗಳೂರು, ಜನವರಿ 19: ಬಿಬಿಎಂಪಿಯು ಕಳೆದ ವರ್ಷವೇ ಜಾರಿಗೆ ತರಲು ಆಲೋಚನೆ ನಡೆಸಿದ್ದ ಪಿಂಕ್ ಆಟೋ ಯೋಜನೆಗೆ ಮರುಜೀವ ದೊರೆತಿದೆ.

ಜನವರಿಯಿಂದ ಮಹಿಳೆಯರಿಗಾಗಿಯೇ ಪಿಂಕ್ ಆಟೋ! ಜನವರಿಯಿಂದ ಮಹಿಳೆಯರಿಗಾಗಿಯೇ ಪಿಂಕ್ ಆಟೋ!

ಶೀಘ್ರ ಬೆಂಗಳೂರಿನ ರಸ್ತೆಗಳಲ್ಲಿ ಪಿಂಕ್ ಆಟೋಗಳು ಕಾಣಸಿಗಲಿವೆ. ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಿಂಕ್ ಟ್ಯಾಕ್ಸಿಗಳು ಲಭ್ಯವಿದೆ. ಅದೇ ಮಾದರಿಯಲ್ಲಿ ಪಿಂಕ್ ಆಟೋಗಳು ಕೂಡ ಕೆಲಸ ನಿರ್ವಹಿಸಲಿವೆ. ಬಹುತೇಕ ಆಟೋಗಳಲ್ಲಿ ಮಹಿಳೆಯರೇ ಚಾಲಕರಾಗಿರುತ್ತಾರೆ.

ಮಹಿಳೆಯರ ಬದಲು ಪುರುಷರಿಗೆ ಪಿಂಕ್‌ ಆಟೋ ನೀಡಲು ಬಿಬಿಎಂಪಿ ನಿರ್ಧಾರ ಮಹಿಳೆಯರ ಬದಲು ಪುರುಷರಿಗೆ ಪಿಂಕ್‌ ಆಟೋ ನೀಡಲು ಬಿಬಿಎಂಪಿ ನಿರ್ಧಾರ

ಇವು ಮಹಿಳೆಯರ ಹಾಗೂ ಮಕ್ಕಳ ಪ್ರಯಾಣಕ್ಕಷ್ಟೇ ಸೀಮಿತವಾಗಿರುತ್ತದೆ. ಪಾಲಿಕೆಯು 2018-19ಏ ಆಯವ್ಯಯದಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ 769 ಕೋಟಿ ರೂ ಮೀಸಲಿಟ್ಟಿದೆ. ಈ ಅನುದಾನವನ್ನು ಬಳಸಿಕೊಂಡು ಮಹಿಳೆಯರ ರಕ್ಷಣೆಗಾಗಿ ಹಲವು ಯೋಜನೆಗಳನ್ನು ಆರಂಭಿಸುತ್ತಿದೆ.

500 pink autorickshaws to hit Bengaluru roads in one month

ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಸಿಸಿಟಿವಿ ಮತ್ತು ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ರಾಜ್ಯ ಸರ್ಕಾರವು ನಗರದಲ್ಲಿ 30 ಸಾವಿರ ಆಟೋಗಳಿಗೆ ರಹದಾರಿ ಮಾಡಿಕೊಡುವ ಸಲುವಾಗಿ 70 ಸಾವಿರ ರೂ ಸಬ್ಸಿಡಿ ನೀಡುತ್ತಿದೆ. ಈ ಪೈಕಿ ಮೊದಲ ಹಂತದಲ್ಲಿ 500 ಪಿಂಕ್ ಆಟೋಗಳಿಗೆ ಪರವಾನಗಿ ನೀಡಿದೆ. ಇದಲ್ಲದೆ ಇನ್ನೂ 500 ಆಟೋಗಳಿಗೆ ಪರವಾನಗಿ ನೀಡುವಂತೆ ಕೋರಿ ಬಿಬಿಎಂಪಿ ಕಲ್ಯಾಣ ವಿಭಾಗವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಫುಟ್‌ಪಾತ್ ಮೇಲೆ ಬೈಕ್ ಸಂಚಾರಕ್ಕೆ ಬಿತ್ತು ಬ್ರೇಕ್ ಫುಟ್‌ಪಾತ್ ಮೇಲೆ ಬೈಕ್ ಸಂಚಾರಕ್ಕೆ ಬಿತ್ತು ಬ್ರೇಕ್

ಪಾಲಿಕೆಯು ಸಬ್ಸಿಡಿ ಆಧಾರದಲ್ಲಿ ಆಟೋಗಳನ್ನು ಒದಗಿಸಲು ಟೆಂಡರ್ ಕರೆದಿತ್ತು. ಈಗಾಗಲೇ ಹಲವು ಕಂಪನಿಗಳು ಆಟೋಗಳನ್ನು ಪೂರೈಸಲು ಮುಂದೆ ಬಂದಿದೆ. ಎಲ್ಲ 198 ವಾರ್ಡ್‌ಗಳ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

English summary
In one month women in Bengaluru will be able to hail pink autorickshaws, reserved for their use.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X