ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುಲಕೇಶಿ ನಗರದ ಕಟ್ಟಡ ಕುಸಿತ ಘಟನೆಯಲ್ಲಿ ಮೃತಪಟ್ಟವರು ಐದು ಮಂದಿ

By ಅನಿಲ್ ಆಚಾರ್
|
Google Oneindia Kannada News

ಬೆಂಗಳೂರು, ಜುಲೈ 10: ಪುಲಕೇಶಿ ನಗರದ ಸಮೀಪ ನಿರ್ಮಾಣ ಹಂತದ ಎರಡು ಕಟ್ಟಡ ಕುಸಿದ ಘಟನೆಯಲ್ಲಿ ದಂಪತಿ- ಮಗು ಸೇರಿದಂತೆ ಐವರು ಸಾವನ್ನಪ್ಪಿ, ಏಳು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ವರದಿ ಆದಾಗ ಬುಧವಾರ ಬೆಳಗ್ಗೆ ಒಬ್ಬ ಕಾರ್ಮಿಕರು ಮೃತಪಟ್ಟಿದ್ದರು. ಮಧ್ಯರಾತ್ರಿ ಹೊತ್ತಿಗೆ ಈ ಘಟನೆ ಸಂಭವಿಸಿತ್ತು.

ಬೆಂಗಳೂರಿನ ಕಾಕ್ ಟೌನ್ ನಲ್ಲಿ ಕಟ್ಟಡದ ನೆಲಮಾಳಿಗೆ ಕುಸಿದು ಕಾರ್ಮಿಕ ಸಾವುಬೆಂಗಳೂರಿನ ಕಾಕ್ ಟೌನ್ ನಲ್ಲಿ ಕಟ್ಟಡದ ನೆಲಮಾಳಿಗೆ ಕುಸಿದು ಕಾರ್ಮಿಕ ಸಾವು

ಎರಡು ಕಟ್ಟಡಗಳ ನೆಲಮಾಳಿಗೆ ಕುಸಿದಿತ್ತು. ಖಗನ್ ಸರ್ಕಾರ್, ನಾರಾಯಣ, ಶಂಭುಕುಮಾರ್, ನಿರ್ಮಲಾ ಹಾಗೂ ಮೂರು ವರ್ಷ ವಯಸ್ಸಿನ ಅನುಷ್ಕಾ ಮೃತಪಟ್ಟಿದ್ದಾರೆ. ರಾಮ್ ಬಾಲಕ, ಅಮೀರ್, ಉಮೇಶ್, ಸಂತೋಷ್, ಉತ್ತಮ್, ಬೆತ್ತಾಮ್ ಹಾಗೂ ಮಂಜುದೇವಿ ಎಂಬುವರು ಗಾಯಗೊಂಡಿದ್ದಾರೆ.

5 people died in Pulakeshinagar building collapse

ಸಾಯಿ ಆದಿ ಆಂಬಾಲ್ ಎಂಬ ನಾಲ್ಕು ಅಂತಸ್ತಿನ ಅಪಾರ್ಟ್ ಮೆಂಟ್ ನ ನೆಲಮಾಳಿಗೆಯಲ್ಲಿ ಇವರೆಲ್ಲ ವಾಸ ಇದ್ದರು. ಅಂದ ಹಾಗೆ ಇಲ್ಲಿ ವಾಸ ಇದ್ದವರು ರಾಜಸ್ತಾನ, ಬಿಹಾರ, ನೇಪಾಳ ಮೂಲದವರು. ಮೂರು ಹಾಗೂ ನಾಲ್ಕು ಅಂತಸ್ತಿನ ಎರಡು ಕಟ್ಟಡದ ನೆಲ ಮಾಳಿಗೆಯಲ್ಲಿ ಒಟ್ಟು ಹದಿಮೂರು ಮಂದಿ ವಾಸವಿದ್ದರು ಎಂದು ಮೂಲಗಳು ತಿಳಿಸಿವೆ.

English summary
5 people died and 7 injured in Bengaluru Pulakeshinagar building collapse on Wednesday. Here is the latest update of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X