ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಧಾನಕ್ಕೆ ತೆರಳಿದ್ದ ಎಚ್ ಡಿಕೆಗೆ ಜಾರಕಿಹೊಳಿ ಸಹೋದರರ 5 ಷರತ್ತುಗಳು

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿಗೆ ಜಾರಕಿಹೊಳಿ ಸಹೋದರರು ಹಾಕಿದ 5 ಷರತ್ತುಗಳು | Oneindia Kannada

ಬಂಡಾಯ ಎದ್ದಿದ್ದ ಜಾರಕಿಹೊಳಿ ಸಹೋದರರೊಂದಿಗೆ ಖುದ್ದು ಎಚ್ ಡಿ ಕುಮಾರಸ್ವಾಮಿಯವರೇ ಸಂಧಾನ ನಡೆಸಿದ್ದು ಯಶಸ್ವಿಯಾಗಿದೆ.

ಈ ಮೂಲಕ ಇಂದು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತಾರೆ ಎಂಬೆಲ್ಲ ಊಹಾಪೋಹಗಳಿಗೆ ತೆರೆಬಿದ್ದಿದೆ. ಮಹಾರಾಷ್ಟ್ರದ ರೆಸಾರ್ಟ್ ವೊಂದಕ್ಕೆ ಹತ್ತಕ್ಕೂ ಹೆಚ್ಚು ಕಾಗ್ರೆಸ್ ಶಾಸಕರು ತೆರಳುತ್ತಾರೆ ಎಮಬ ವದಂತಿ ಹಬ್ಬುತ್ತಿದ್ದಂತೆಯೇ ಅತೃಪ್ತ ಶಾಸಕರು ತಂಗಿದ್ದ ತಾಜೆ ವೆಸ್ಟ್ ಎಂಡ್ ಹೊಟೇಲ್ ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ದೌಡಾಯಿಸಿದ್ದರು.

ಜಾರಕಿಹೊಳಿ ಬ್ರದರ್ಸ್ ಅಂದರ್ ಬಾಹರ್ ಗೇಮ್ ಅಸಲಿಯತ್ತೇನು?ಜಾರಕಿಹೊಳಿ ಬ್ರದರ್ಸ್ ಅಂದರ್ ಬಾಹರ್ ಗೇಮ್ ಅಸಲಿಯತ್ತೇನು?

ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಧಾನಕ್ಕೂ ಬಗ್ಗದಜಾರಕಿಹೊಳಿ ಸಹೋದರರು ಹಾಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಸಂಧಾನಕ್ಕೆ ಬಗ್ಗಿದ್ದಾರೆ ಎನ್ನಲಾಗುತ್ತಿದೆ.

ಆದರೆ ಕುಮಾರಸ್ವಾಮಿ ಅವರ ಮನವಿಯಂತೆ ಬಂಡಾಯಕ್ಕೆ ಶಾಂತಿ ಹಾಡಲು ಮುಂದಾಗಿರುವ ಶಾಸಕರು ಮುಖ್ಯಮಂತ್ರಿಗಳ ಮುಂದೆ ಯಾವೆಲ್ಲ ಬೇಡಿಕೆ ಇಟ್ಟಿದ್ದಾರೆ? ಯಾವೆಲ್ಲ ಶರತ್ತು ವಿಧಿಸಿದ್ದಾರೆ?

ಖಾತೆ ಬದಲಿಸಿ

ಖಾತೆ ಬದಲಿಸಿ

ಪೌರಾಡಳಿತ ಸಚಿವರಾಗಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರ ಖಾತೆಯನ್ನು ಬದಲಿಸಿ, ಅವರಿಗೆ ಆಯಕಟ್ಟಿನ ಖಾತೆ ನೀಡುವಂತೆ ಅತೃಪ್ತ ಶಾಸಕರು ಕುಮಾರಸ್ವಾಮಿ ಅವರಿಗೆ ಬೇಡಿಕೆ ಇಟ್ಟಿದ್ದಾರೆ.

ಸಚಿವ ಸ್ಥಾನದ ಬೇಡಿಕೆ

ಸಚಿವ ಸ್ಥಾನದ ಬೇಡಿಕೆ

ಶಾಸಕರಾದ ಸತೀಶ್ ಜಾರಕಿಹೊಳಿ ಮತ್ತು ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆಗೆ ಎಚ್ ಡಿ ಕುಮಾರಸ್ವಾಮಿ ಅವರು ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿಯಿಂದ ಡಿಸಿಎಂ ಆಫರ್, ಜಾರಕಿಹೊಳಿ ಸಿಡಿಸಿದ ಹೊಸ ಬಾಂಬ್!ಬಿಜೆಪಿಯಿಂದ ಡಿಸಿಎಂ ಆಫರ್, ಜಾರಕಿಹೊಳಿ ಸಿಡಿಸಿದ ಹೊಸ ಬಾಂಬ್!

ಅಧಿಕಾರಿಗಳ ನೇಮಕ

ಅಧಿಕಾರಿಗಳ ನೇಮಕ

ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೂಚಿಸಿದ ಅಧಿಕಾರಿಗಳನ್ನೇ ನೇಮಿಸಲಾಗುತ್ತಿದೆ. ಇದಕ್ಕೆ ಡಿಕೆ ಶಿವಕುಮಾರ್ ಅವರ ಬೆಂಬಲವಿದೆ. ಆದ್ದರಿಂದ ಬೆಳಗಾವಿಯಲ್ಲಿ ತಾವು ಸೂಚಿಸಿದ ಅಧಿಕಾರಿಗಳನ್ನೇ ನೇಮಿಸಬೇಕು ಎಂದೂ ಸಹೋದರರು ಬೇಡಿಕೆ ಇಟ್ಟಿದ್ದಾರೆ.

ರಾಹುಲ್ ಜೊತೆ ಮಾತುಕತೆ ನಡೆಸೋಲ್ಲ!

ರಾಹುಲ್ ಜೊತೆ ಮಾತುಕತೆ ನಡೆಸೋಲ್ಲ!

'ನಿಮ್ಮ ಮಾತಿಗೆ ಬೆಲೆ ನೀಡಿ ನಾವು ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದೆ ಸರಿಯುತ್ತೇವೆ. ಜೊತೆಗೆ ಸಮ್ಮಿಶಸ್ರ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂಬ ಅಭಯ ನೀಡುತ್ತೇವೆ. ಆದರೆ ರಾಜ್ಯ ರಾಜಕಾರಣದ ಕುರಿತಂತೆ ಪಕ್ಷದ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರೊಂದಿಗೆ ಯಾವುದೇಮಾತುಕತೆಗೆ ನಾವು ಒಪ್ಪೋಲ್ಲ. ರಾಹುಲ್ ಗಾಂಧಿ ಅವರೊಂದಿಗೆ ನೀವೇ ಮಾತನಾಡಿ ಪರಿಸ್ಥಿತಿಯನ್ನು ನಿಭಾಯಿಸಿ' ಎಂದು ಜಾರಕಿಹೊಳಿ ಸಹೋದರರು ಕುಮಾರಸ್ವಾಮಿ ಅವರಿಗೆ ತಿಳಿಸಿದ್ದಾರೆ.

ಡಿಕೆಶಿ ಗೆ ಪರೋಕ್ಷ ಎಚ್ಚರಿಕೆ!

ಡಿಕೆಶಿ ಗೆ ಪರೋಕ್ಷ ಎಚ್ಚರಿಕೆ!

ಬೆಳಗಾವಿ ರಾಜಕಾರಣದಲ್ಲಿ ಬೇರೆಯವರು ಹಸ್ತಕ್ಷೇಪ ಮಾಡುವಂತಿಲ್ಲ. ಕೆಲವು ಸಚಿವರು ಪದೇ ಪದೇ ಬೆಳಗಾವಿ ರಾಜಕಾರಣದಲ್ಲಿ ತಲೆದೂರಿಸುತ್ತಿರುವುದು ನಮಗೆ ಇರಿಸುಮುರಿಸುಂಟು ಮಾಡಿದೆ. ಆದ್ದರಿಂದ ಅವರು ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ನೀಡಿ ಎಂದು ಜಾರಕಿಹೊಳಿ ಸಹೋದರರು ಎಚ್ ಡಿ ಕೆ ಅವರ ಬಳಿ ಕೇಳಿಕೊಂಡಿದ್ದಾರೆ.

English summary
Karnataka chief minister HD Kumaraswamy successful in convincing Ramesh and Satish Jarkiholi brothers who were rebelled against coalition government. Here are 5 conditions by Jarkiholi brothers to HD Kumaraswamy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X