ಮದುವೆ ಆಮಂತ್ರಣ ಪತ್ರಿಕೆಯೊಳಗಿತ್ತು 5.49 ಕೆ.ಜಿ ಮಾದಕ ವಸ್ತು

ಬೆಂಗಳೂರು, ಫೆಬ್ರವರಿ 22: ಮದುವೆ ಆಮಂತ್ರಣ ಪತ್ರಿಕೆಯೊಳಗೆ ನಿಷೇಧಿತ "ಎಫೆಡ್ರೈನ್" ವಸ್ತು ಪತ್ತೆ ಆಗಿರುವ ಘಟನೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

5.049 ಕೆ.ಜಿಯ ಮಾದಕ ವಸ್ತುವನ್ನು ಬೆಂಗಳೂರಿನ ‌ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಕಾರ್ಗೊ ಕಾಂಪ್ಲೆಕ್ಸ್ ನ ಕೊರಿಯರ್ ಟರ್ಮಿನಲ್ ನಲ್ಲಿ ಪರಿಶೀಲನೆ ವೇಳೆ ಆಮಂತ್ರಣ ಪತ್ರಿಕೆಯೊಳಗೆ ಬೇರೆ ವಸ್ತು ಇರುವುದು ಕಂಡುಬಂದಿದೆ. ಪೌಡರ್ ನಂಥ ವಸ್ತು ಇರುವುದು ಪ್ರಾಥಮಿಕ ಸ್ಕ್ಯಾನಿಂಗ್ ನಲ್ಲಿ ತಿಳಿದುಬಂದಿತ್ತು. ನಂತರ ಅದನ್ನು ವಿವರವಾಗಿ ಪರಿಶೀಲಿಸಿದಾಗ ಒಟ್ಟು 43 ಆಮಂತ್ರಣ ಪತ್ರಿಕೆಗಳು ಹಾಗೂ ಬಟ್ಟೆಗಳು ಕಂಡುಬಂದಿದ್ದು, ಅದರಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಅಡಗಿಸಿರುವುದು ಬೆಳಕಿಗೆ ಬಂದಿದೆ.

5.49 KG Ephedrine In Marriage Invitation Seized By Customs Officers In Bengaluru

ಆ ಆಮಂತ್ರಣ ಪತ್ರಿಕೆಯನ್ನು ಕಾರ್ಡ್ ಬೋರ್ಡ್ ನಿಂದ ತಯಾರಿಸಿದ್ದು, ಅದರೊಳಗೆ ಎರಡು ಭಾಗ ಮಾಡಲಾಗಿದೆ, ಒಂದರಲ್ಲಿ ಪಾಲಿಥೀನ್ ಪೌಚ್ ಗಳಲ್ಲಿ ಬಿಳಿ ಕ್ರಿಸ್ಟಲಿನ್ ಪುಡಿಯನ್ನು ಇಡಲಾಗಿದೆ. ಒಟ್ಟು 43 ಮದುವೆ ಕಾರ್ಡ್ ನಲ್ಲಿ 86 ಪಾಲಿಥೀನ್ ಪೌಚ್ ಗಳನ್ನು ಇಟ್ಟಿರುವುದು ಕಂಡುಬಂದಿದೆ. ಇದರ ಮೌಲ್ಯ 5.05 ಕೋಟಿ‌ ರೂಪಾಯಿ ಎಂದು ಅಂದಾಜಿಸಲಾಗಿದೆ. NDPS ಕಾಯ್ದೆ 1985, 1993ರ ಅಡಿ ಇವು ನಿಷೇಧಿತ ವಸ್ತುಗಳಾಗಿವೆ.

5.49 KG Ephedrine In Marriage Invitation Seized By Customs Officers In Bengaluru

ಮಧುರೆ ಮೂಲದವರು ಇದನ್ನು ರಫ್ತು ಮಾಡುತ್ತಿದ್ದು, ಆಸ್ಟ್ರೇಲಿಯಾಗೆ ಈ ವಸ್ತುವನ್ನು ಸಾಗಾಟ ಮಾಡಲು ಪ್ರಯತ್ನಿಸಲಾಗಿದೆ. ಏರ್ ಕಾರ್ಗೋದಲ್ಲಿ ಎಫೆಡ್ರೈನ್ ಅನ್ನು ಸಾಗಾಟ ಮಾಡುತ್ತಿರುವ ಎರಡನೇ ಪ್ರಕರಣ ಇದಾಗಿದೆ. ಮೂರು ದಿನದ ಹಿಂದಷ್ಟೇ ಐದು ಕೆ.ಜಿಯಷ್ಟು ಎಫೆಡ್ರೈಲ್ ಸಾಗಾಟ ಮಾಡಲು ಪ್ರಯತ್ನಿಸಿದ್ದು, ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. NDPS ಕಾಯ್ದೆಯಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ತನಿಖೆ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+