ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಮಾಲಿನ್ಯ ಶೇ.46.7ರಷ್ಟು ಕಡಿಮೆ

ಬೆಂಗಳೂರು, ನವೆಂಬರ್ 18: ಈ ಬಾರಿ ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಮಾಲಿನ್ಯ ಶೇ.46.7ರಷ್ಟು ಕಡಿಮೆಯಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಈ ಸಮೀಕ್ಷೆಯಲ್ಲಿ ಈ ಬಾರಿ ನಗರದಲ್ಲಿ ಪಟಾಕಿಗಳಿಂದಾಗುವ ವಾಯುಮಾಲಿನ್ಯ ಪ್ರಮಾಣ ಇಳಿಕೆಯಾಗಿರುವುದು ತಿಳಿದುಬಂದಿದೆ.

ಇದೇ ಅಲ್ಲದೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ, ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಶೇಕಡಾ 30.34 ರಷ್ಟು ಇಳಿಕೆ ಕಂಡುಬಂದಿದೆ. ಎಕ್ಯೂಐ 51-100ರ ಒಳಗಿದ್ದರೆ ತೃಪ್ತಿಕರ ಎಂದು ಪರಿಗಣಿಸಲಾಗುತ್ತದೆ. ಅದರಂತೆ ಎಸ್‌ಜಿ ಹಳ್ಳಿ(39), ಜಯನಗರ 5 ನೇ ಬ್ಲಾಕ್ (44), ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ (43) ನಲ್ಲಿ ಅದು 'ಉತ್ತಮ ಎನಿಸಿದೆ.

ಏಕೆಂದರೆ ಅವು 0-50ರ ವರ್ಗಕ್ಕೆ ಬಂದಿದ್ದವು, ಕೆಎಸ್‌ಪಿಸಿಬಿ ನಗರದಲ್ಲಿ ನಿರಂತರವಾಗಿ 10 ರೌಂಡಪ್ ಶಬ್ದ ಮಾಲಿನ್ಯ ಅಂದಾಜಿಸುವ ಕೇಂದ್ರಗಳನ್ನು ಸ್ಥಾಪಿಸಿತ್ತು ಮತ್ತು ಈ ಅವಧಿಯಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ಮೇಲ್ವಿಚಾರಣೆ ನಡೆಸಿತು.

46.7 Percent Lower In Bengalurus Air Pollution Level This Deepavali

ಕೆಎಸ್‌ಪಿಸಿಬಿ ಮಾಹಿತಿಯ ಪ್ರಕಾರ, ನವೆಂಬರ್ 9 ಅನ್ನು (ವರ್ಷದ ಸಾಮಾನ್ಯ ದಿನ) ಪರಿಗಣಿಸುವಾಗ, ಏಳು ಸ್ಥಳಗಳ ಪೈಕಿ ನಾಲ್ಕರಲ್ಲಿ ಪರಿಸ್ಥಿತಿ ಮದ್ಯಮ ಪ್ರಮಾಣದಲ್ಲಿತ್ತು. ಪಶುವೈದ್ಯಕೀಯ ಆಸ್ಪತ್ರೆ, ಹೆಬ್ಬಾಳ, ; ಜಯನಗರ 5 ನೇ ಬ್ಲಾಕ್; ಕವಿಕಾ, ಮೈಸೂರು ರಸ್ತೆ; ಮತ್ತು ನಿಮ್ಹಾನ್ಸ್, ಸಿಟಿ ರೈಲ್ವೆ ನಿಲ್ದಾಣ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಗಳಲ್ಲಿ ಮಾಲಿನ್ಯ ಪ್ರಮಾಣ ತೃಪ್ತಿಕರವಾಗಿದೆ.

ಬಸವೇಶ್ವರ ನಗರದ ಎಸ್‌ಜಿ ಹಳ್ಳಿ, ಯಲ್ಲಿ ಅದು 'ಉತ್ತಮ'ವಾಗಿತ್ತು. ದೀಪಾವಳಿ ಸಮಯದಲ್ಲಿ (ನವೆಂಬರ್ 14-16), ಸಿಟಿ ರೈಲ್ವೆ ನಿಲ್ದಾಣದಲ್ಲಿ ಎಕ್ಯೂಐ ಮೌಲ್ಯ 77, ಪಶುವೈದ್ಯಕೀಯ ಕಾಲೇಜು, ಹೆಬ್ಬಾಳ (64)ಕವಿಕಾ, ಮೈಸೂರು ರಸ್ತೆ (62), ಮತ್ತು ನಿಮ್ಹಾನ್ಸ್ (61). ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+