ಬೀದಿ ಕಾಮಣ್ಣರಿಗೆ ಸಿಟಿ ಪೊಲೀಸರ ಬಿಸಿಬಿಸಿ ಕಜ್ಜಾಯ
ಬೆಂಗಳೂರು, ಆ.4:ಗುಂಡಾ ಕಾಯಿದೆಯ ಮೂಲಕ ಮಹಿಳೆ ಪೀಡಕರನ್ನು ಬಂಧಿಸಿರುವ ಬೆಂಗಳೂರು ಪೊಲೀಸರು ಇದೀಗ ಮೊದಲ ಬಾರಿಗೆ ಬೀದಿ ಕಾಮಣ್ಣರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.[ಗೂಂಡಾ ಕಾಯ್ದೆ ಎಫೆಕ್ಟ್: ಇಬ್ಬರು ಕಾಮುಕರು ಅರೆಸ್ಟ್]
ಶನಿವಾರದಿಂದ ಆ.2 ಆರಂಭವಾಗಿರುವ ಈ ಕಾರ್ಯಾಚರಣೆ ಮಂಗಳವಾರ ಆ.5ಕ್ಕೆ ಮುಕ್ತಾಯವಾಗಲಿದೆ. ಮೊದಲ ದಿನವೇ ಪೊಲೀಸರು 449 ಜನರ ವಿರುದ್ಧಕರ್ನಾಟಕ ಪೊಲೀಸ್ ಕಾಯಿದೆಯಡಿ ಕೇಸ್ ದಾಖಲಿಸಿದ್ದಾರೆ.[ಲೇಖಕ ವಿಆರ್ ಭಟ್ ಮೇಲೆ ಗೂಂಡಾ ಕಾಯ್ದೆ ಪ್ರಯೋಗ]
ಎಲ್ಲೆಲ್ಲಿ ಎಷ್ಟು ಜನರ ಬಂಧನ: ಕಾರ್ಯಚರಣೆಯಲ್ಲಿ ಪೂರ್ವ ವಿಭಾಗದಲ್ಲಿ 90, ಪಶ್ಟಿಮ ವಿಭಾಗದಲ್ಲಿ 77, ಉತ್ತರ ವಿಭಾಗದಲ್ಲಿ 73, ಕೇಂದ್ರ ವಿಭಾಗದಲ್ಲಿ 28, ದಕ್ಷಿಣ ವಿಭಾಗ 65, ಆಗ್ನೇಯ ವಿಭಾಗ 41 ಹಾಗೂ ಈಶಾನ್ಯ ವಿಭಾಗದಲ್ಲಿ 75, ಪ್ರಕರಣಗಳನ್ನು ದಾಖಲಿಸಲಾಗಿದೆ.
ಎಲ್ಲೆಲ್ಲಿ ಕಾರ್ಯಾಚರಣೆ: ನಗರದ ಶಾಲಾ-ಕಾಲೇಜುಗಳು,ಮಾಲ್‌ಗಳು, ಚಿತ್ರಮಂದಿರಗಳು,ಸಾರ್ವಜನಿಕ ಗ್ರಂಥಾಲಯಗಳು, ಬಸ್ ಹಾಗೂ ರೈಲು ನಿಲ್ದಾಣಗಳು, ದೇವಸ್ಥಾನ, ಆಸ್ಪತ್ರೆಗಳು, ಉದ್ಯಾನಗಳು ಸೇರಿದಂತೆ ಮತ್ತಿತರ ಸಾರ್ವಜನಿಕರ ಸ್ಥಳಗಳಲ್ಲಿ ಮಫ್ತಿಯಲ್ಲಿ ಪೊಲೀಸರು ಬೆಳಗ್ಗೆ 8 ಗಂಟೆಯಿಂದ ರಾತ್ರಿ 11ರವರೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

"ಆಯಾ ವಿಭಾಗದ ಡಿಸಿಪಿಗಳು ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿರುವ 449 ಮಂದಿಯಲ್ಲಿ 18-35 ವರ್ಷದೊಳಗಿನ ಪುಂಡರೇ ಹೆಚ್ಚಾಗಿದ್ದಾರೆ. ಇವರೆಲ್ಲರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಎಚ್ಚರಿಕೆ ನೀಡುವ ಸಲುವಾಗಿ ಪಿಟಿ ಕೇಸ್ ಹಾಕಿದ್ದೇವೆ. ಹೀಗಾಗಿ ಇವರನ್ನು ಬಂಧಿಸಿಲ್ಲ. ಆರೋಪಿಗಳಿಗೆ ನೋಟಿಸ್ ನೀಡಲಾಗಿದ್ದು ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಿ ದಂಡ ಕಟ್ಟಬೇಕು. ಅಲ್ಲದೇ ಇನ್ನು ಮುಂದೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ ಎನ್ನುವ ಮುಚ್ಚಳಿಕೆ ಬರೆಸಿಕೊಂಡು ನಂತರ ಬಿಡುಗಡೆ ಮಾಡಲಾಗುತ್ತದೆ"
ಅಲೋಕ್‌ಕುಮಾರ್ , ಹೆಚ್ಚುವರಿ ಪೊಲೀಸ್ ಆಯುಕ್ತ












Click it and Unblock the Notifications