ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಿಢೀರ್ ಎಚ್ಚೆತ್ತ ಪಾಲಿಕೆಯಿಂದ 400 ಶೆಡ್ ತೆರವು, 1500 ಜನ ಬೀದಿಗೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 20: ದಿಢೀರ್‌ ಎಚ್ಚೆತ್ತ ಬಿಬಿಎಂಪಿಯು ಬೆಂಗಳೂರಿನ ಬೆಳ್ಳಂದೂರು ಬಫರ್‌ ವಲಯದಲ್ಲಿದ್ದ 400 ಶೆಡ್‌ಗಳನ್ನು ಕೆಡವಿದ್ದು ಸುಮಾರು 1500ಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ.

ಬೆಳ್ಳಂದೂರು ಕೆರೆ ಸಮೀಪದಲ್ಲಿರುವ ಕರಿಯಮ್ಮನ ಅಗ್ರಹಾರಕ್ಕೆ ಆಗಮಿಸಿದ ಪಾಲಿಕೆ ಅಧಿಕಾರಿಗಳು, ನಿವಾಸಿಗಳನ್ನು ಹೊರಗೆ ಕಳುಹಿಸಿ ಶೆಡ್‌ಗಳನ್ನು ಕೆಡವಿದ್ದಾರೆ, ಈ ಜಾಗ ಬಫರ್‌ ವಲಯದಲ್ಲಿರುವುದರಿಂದ ಕಾನೂನು ಉಲ್ಲಂಘನೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳ್ಳಂದೂರು: ಒಣ ತ್ಯಾಜ್ಯ ಕೇಂದ್ರವನ್ನು ತೆರೆಯಲು ವಿಫಲವಾದ ಬಿಬಿಎಂಪಿಬೆಳ್ಳಂದೂರು: ಒಣ ತ್ಯಾಜ್ಯ ಕೇಂದ್ರವನ್ನು ತೆರೆಯಲು ವಿಫಲವಾದ ಬಿಬಿಎಂಪಿ

ಆದರೆ ಯಾವುದೇ ಸೂಚನೆ ಇಲ್ಲದೆ ಏಕಾಏಕಿ ಬಂದು ಶೆಡ್‌ಗಳನ್ನು ಕಿತ್ತುಹಾಕಿರುವುದರಿಂದ ನಿರಾಶ್ರಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೆಲ ನಿವಾಸಿಗಳು ಶೆಡ್‌ಗಳನ್ನು ಕೆವಲು ಬಿಡುವುದಿಲ್ಲ ಎಂದು ಧರಣಿ ಕೂತರೂ ಬಿಡದೆ ಅಧಿಖಾರಿಗಳು ಶೆಡ್‌ಗಳನ್ನು ಕೆವಿದರು, ಜೆಸಿಬಿಯಿಂದ ಶೆಡ್‌ಗಳ ತೆರವು ಕಾರ್ಯಾರಚಣೆ ನಡೆಯುವಾಗ ನಿವಾಸಿಗಳು ಪ್ರತಿಭಟನೆ ನಡೆಸಿದರು.

400 sheds removed by BBMP in Bellandur lake buffer zone

ಕಳೆದ ಎಂಟು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ, ಇಲ್ಲಿಯವರೆಗೆ ಬಿಬಿಎಂಪಿ ಆಕ್ಷೇಪಿಸಿರಲಿಲ್ಲ ಇದೀಗ ಏಕಾಏಕಿಯಾಗಿ ತೆರವು ಕ್ರಮಕ್ಕೆ ಮುಂದಾಗಿದ್ದಾರೆ, ತೆರವುಗೊಳಿಸುತ್ತಿದ್ದೇವೆ ಎಂದು ನೋಟಿಸ್‌ ಕೂಡ ನೀಡಿಲ್ಲ, ಇದಿರಿಂದ ಸುಮಾರು 1500ಕ್ಕೂ ಹೆಚ್ಚು ಮಂದಿ ಬೀದಿಪಾಲಾಗಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪ್ರವಾಹ ಪೀಡಿತ ಕರಾವಳಿ ಜನರಿಗೆ ಉದಾರ ಸಹಾಯ ನೀಡಿದ ಬಿಬಿಎಂಪಿಪ್ರವಾಹ ಪೀಡಿತ ಕರಾವಳಿ ಜನರಿಗೆ ಉದಾರ ಸಹಾಯ ನೀಡಿದ ಬಿಬಿಎಂಪಿ

ಈ ಶೆಡ್‌ಗಳಲ್ಲಿ ಆಟೋ ರಿಕ್ಷಾ ಚಾಲಕರು, ಕೂಲಿ ಕಾರ್ಮಿಕರು ವಾಸಿಸುತ್ತಿದ್ದಾರೆ, ಅವರಿಗೆ ಸೂರು ಕಟ್ಟಿಕೊಳ್ಳಲು ಕೂಡ ಸಾಧ್ಯವಿಲ್ಲ, ಮಳೆಗಾಲದಲ್ಲಿ ಸಮಯದಲ್ಲಿ ಈ ರೀತಿ ಮಾಡಿದರೆ ಎಲ್ಲರೂ ಎಲ್ಲಿಗೆ ಹೋಗಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

English summary
BBMP officials have removed more than 400 temporary sheds in Bellandur lake buffer zone and more than 1,500 people have become shelterless.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X