ಜೆಡಿಎಸ್ ಸಮಾವೇಶದಲ್ಲಿ ಜೆಡಿಎಸ್ ಮುಖಂಡನ ಜೇಬಿಗೆ ಕತ್ತರಿ!
ಗುರುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಚಿಕ್ಕೋಡಿ ಜೆಡಿಎಸ್ ಮುಖಂಡನ ಪ್ಯಾಂಟಿನ ಜೇಬು ಕತ್ತರಿಸಿ ಸುಮಾರು 40 ಸಾವಿರ ರು ಲಪಟಾಯಿಸಿದ್ದಾರೆ.
ಬೆಂಗಳೂರು, ಮಾರ್ಚ್. 23 : ಅರಮನೆ ಮೈದಾನದಲ್ಲಿ ಗುರುವಾರ ನಡೆದ ಜೆಡಿಎಸ್ ಪಕ್ಷದ ಸಮಾವೇಶದಲ್ಲಿ ಜೆಡಿಎಸ್ ಮುಖಂಡನ ಜೇಬಿಗೆ ಕಳ್ಳರು ಕತ್ತರಿ ಹಾಕಿದ್ದಾರೆ.
ಜೆಡಿಎಸ್ ಸಮಾವೇಶದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಜೋರ್ ಜೋರ್ ಆಗಿ ಭಾಷಣ ಬಿಗಿಯುತ್ತಿದ್ದರೆ ಇತ್ತ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ.
ಚಿಕ್ಕೋಡಿ ಜೆಡಿಎಸ್ ನ ಎಸ್ ಸಿ ಮತ್ತು ಎಸ್ ಟಿ ವಿಭಾಗದ ಅಧ್ಯಕ್ಷ ಸುರೇಶ್ ಹಾರೂಗೇರೆ ಅವರ ಜೇಬನ್ನು ಖದೀಮರು ಕತ್ತರಿಸಿ ಸುಮಾರು 40 ಸಾವಿರ ರು ಲಪಟಾಯಿಸಿ ಪರಾರಿಯಾಗಿದ್ದಾರೆ.

ಸಮಾವೇಶಕ್ಕೆಂದು ಕರೆತಂದಿದ್ದ ಕಾರ್ಯಕರ್ತರ ಊಟ ಉಪಚಾರಕ್ಕೆಂದು ಇಟ್ಟುಕೊಂಡಿದ್ದ ಹಣವನ್ನು ದೋಚಿದ್ದಾರೆ ಎಂದು ಸ್ವತಃ ಸುರೇಶ್ ಸುರೇಶ್ ಹಾರೂಗೇರೆ ಅವರು ಮಾಧ್ಯಮದವರೊಂದಿಗೆ ತಮ್ಮ ಅಳಲು ತೊಡಿಕೊಂಡರು.












Click it and Unblock the Notifications