ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರೈಲು ನಿಲ್ದಾಣದಲ್ಲಿ 40 ಕ್ವಾರಂಟೈನ್ ಕೋಚ್ ಸಿದ್ಧ

|
Google Oneindia Kannada News

ಬೆಂಗಳೂರು, ಏಪ್ರಿಲ್ 07 : ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಂಗಳೂರು ರೈಲು ವಿಭಾಗ 40 ಕ್ವಾರಂಟೈನ್‌ ಕೋಚ್‌ಗಳನ್ನು ಸಿದ್ಧಪಡಿಸಿದೆ. ಭಾರತೀಯ ರೈಲ್ವೆ ಸೂಚನೆಯಂತೆ ದೇಶದಲ್ಲಿ 20 ಸಾವಿರ ಕೋಚ್‌ಗಳನ್ನು ಕ್ವಾರಂಟೈನ್‌, ವಾರ್ಡ್‌ಗಳಾಗಿ ಪರಿವರ್ತನೆ ಮಾಡಲಾಗುತ್ತಿದೆ.

Recommended Video

ಮನೆಯಲ್ಲೇ ಇರೋಣ , ಕೊರೊನ ಓಡಿಸೋಣ ಅಂದ್ರು ತಬಲಾ ನಾಣಿ

ಬೆಂಗಳೂರು ರೈಲ್ವೆ ವಲಯಕ್ಕೆ ಮೊದಲು 18 ಕೋಚ್‌ಗಳನ್ನು ಪರಿವರ್ತನೆ ಮಾಡಲು ಸೂಚಿಸಲಾಗಿತ್ತು. ಬಳಿಕ ಅದನ್ನು ಏರಿಕೆ ಮಾಡಲಾಯಿತು. ರೈಲ್ವೆ ಬೋಗಿಯಲ್ಲಿ 480 ಬೆಡ್‌ಗಳು ಈಗ ಚಿಕಿತ್ಸೆ, ಕ್ವಾರಂಟೈನ್‌ಗಾಗಿ ಸಿದ್ಧವಾಗಿದೆ.

ಮೈಸೂರಿನಲ್ಲಿ ರೆಡಿಯಾಗ್ತಿದೆ 966 ಹಾಸಿಗೆಗಳ ಮೊಬೈಲ್‌ ಆಸ್ಪತ್ರೆಮೈಸೂರಿನಲ್ಲಿ ರೆಡಿಯಾಗ್ತಿದೆ 966 ಹಾಸಿಗೆಗಳ ಮೊಬೈಲ್‌ ಆಸ್ಪತ್ರೆ

ಯಶವಂತಪುರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿಯೇ ಕೋಚ್‌ಗಳನ್ನು ವಾರ್ಡ್‌ಗಳಾಗಿ ಪರಿವರ್ತನೆ ಮಾಡಲಾಗಿದೆ. ಈ ವಾರ್ಡ್‌ಗಳಿಗೆ ಇಂಜಿನ್ ಸೇರಿಸಬಹುದಾಗಿದ್ದು, ಬೇರೆ ಪ್ರದೇಶದಿಂದ ಬೇಡಿಕೆ ಬಂದರೆ ಸ್ಥಳಾಂತರ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.

40 Quarantine Coaches Ready In Bengaluru Railway Stations

ಸೋಮವಾರ ಕೋಚ್‌ಗಳ ಕಿಟಕಿಗಳಿಗೆ ಸೊಳ್ಳೆ ಪರದೆ, ಕಾರ್ಟನ್, ಬಾತ್ ರೂಂಗಳ ವ್ಯವಸ್ಥೆಯನ್ನು ಅಂತಿಮಗೊಳಿಸಿ ಕೋಚ್‌ಗಳನ್ನು ಸಿದ್ಧಪಡಿಸಲಾಗಿದೆ. 15 ವರ್ಷಕ್ಕಿಂತ ಹೆಚ್ಚು ಬಳಕೆಯಾದ ಬೋಗಿಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ.

ಪ್ರತಿ ಸ್ಲೀಪರ್ ಕೋಚ್‌ ಬೋಗಿಯಲ್ಲಿ ಮಧ್ಯ ಇರುವ ಬರ್ತ್ ಕಳಚಿ ವಾರ್ಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ವಾರ್ಡ್ ತಯಾರಿಕೆ, ಉಪಕರಣಗಳನ್ನು ಇಡಲು ಅಗತ್ಯ ವ್ಯವಸ್ಥೆ ಮಾಡಲು ಸಹಾಯಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊರೊನಾ ಭೀತಿ; ಭಾರತೀಯ ರೈಲ್ವೆಯ 5 ಪ್ರಮುಖ ಕಾರ್ಯಗಳುಕೊರೊನಾ ಭೀತಿ; ಭಾರತೀಯ ರೈಲ್ವೆಯ 5 ಪ್ರಮುಖ ಕಾರ್ಯಗಳು

ಪ್ರತಿ ಕೋಚ್‌ನಲ್ಲಿ 9 ಹಾಸಿಗೆಗಳ ವ್ಯವಸ್ಥೆ ಇದೆ. ಆದರೆ, ಬೋಗಿಯ ಮೊದಲ ಹಾಸಿಗೆಯನ್ನು ಮೆಡಿಕಲ್ ರೂಂ ಎಂದು ಗುರುತಿಸಲಾಗಿದೆ. ಆದ್ದರಿಂದ, 8 ಬೆಡ್‌ಗಳಿದ್ದು, ಎಲ್ಲವೂ ಭಾರತೀಯ ಶೈಲಿಯ ಶೌಚಾಲಯವನ್ನು ಹೊಂದಿವೆ.

ಪ್ರತಿ ಕೋಚ್‌ಗಳನ್ನು ಪರಿವರ್ತನೆ ಮಾಡಲು ಸುಮಾರು 40 ಸಾವಿರ ರೂ. ಖರ್ಚಾಗಿದೆ. ಬೋಗಿಯಲ್ಲಿರುವ ಬೆಡ್‌ಗೆ ರೋಗಿ ಬಂದರೆ ತಕ್ಷಣ ಆಮ್ಲಜನಕ ಸಿಲಿಂಡರ್ ಮತ್ತು ವೆಂಟಿಲೇಟರ್ ತಂದು ಇಡಲು ಅಗತ್ಯವಾದ ವ್ಯವಸ್ಥೆಯನ್ನು ಮಾಡಲಾಗಿದೆ.

English summary
The Bengaluru Railway Division has readied 40 quarantine coaches. Wards available in Yesvantpur and Krantivira Sangolli Rayanna railway stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X